ತುಳುಕೂಟ ಕುವೈಟ್ ನ 16ನೇ ವಾರ್ಷಿಕ ಮಹಾಸಭೆ ಇದೇ ಕಳೆದ ಡಿಸೆಂಬರ್ 18, 2015 ರ ಶುಕ್ರವಾರ ಸ್ಥಳೀಯ ಸಾಲ್ಮಿಯಾ ಇಂಡಿಯನ್ ಕಮ್ಯೂನಿಟಿ ಸ್ಕೂಲ್ ಇದರ ಸಭಾಂಗಣದಲ್ಲಿ ಜರಗಿತು, ಶ್ರೀ ಮಾಧವ್ ನಾಯಕ್, ಶ್ರೀ ರಘುರಾಮ್ ನಾಯಕ್ ಹಾಗೂ ಶ್ರೀಮತಿ ಭವಾನಿ ನಾಯಕ್ ಇವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಮಹಾಸಭೆಯನ್ನು ಆಡಳಿತ ಮಂಡಳಿ ಹಾಗೂ ಸಲಹಾ ಸಮಿತಿಯ ಸದಸ್ಯರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಪ್ರಧಾನ ಕಾರ್ಯದರ್ಶಿ ವಿಲ್ಸನ್ ಡಿ’ಸೋಜ ವಾರ್ಷಿಕ ವರದಿ ಮತ್ತು ಕೋಶಾಧಿಕಾರಿ ವಿಜಯ್ ಕೈರಂಗಲ ವಾರ್ಷಿಕ ಲೆಕ್ಕ ಪತ್ರಗಳನ್ನು ಸಭೆಗೆ ಒಪ್ಪಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಕೃಷ್ಣ ರಾವ್ ಕ್ಷೇಮಾಭಿವೃದ್ಧಿ ಕಾರ್ಯಗಳ ವರದಿಯನ್ನು ಒಪ್ಪಿಸಿದರು. ಕೂಟದ ಕ್ಷೇಮಾಭಿವೃದ್ದಿ ಕಾರ್ಯಗಳಿಗೆ ಧನ ಸಹಾಯ ನೀಡಿದ ದಾನಿಗಳಿಗೆ ಸ್ಮರಣಿಕೆಯನ್ನಿತ್ತು ಪುರಸ್ಕರಿಸಲಾಯಿತು. ನಿರ್ಗಮನ ಅಧ್ಯಕ್ಷ ಶ್ರೀ ತಾರೇಂದ್ರ ಪಿ. ಶೆಟ್ಟಿಗಾರ್ ತಮ್ಮ ಕಾರ್ಯಾವಧಿಯಲ್ಲಿ ಸಹಕರಿಸಿದ ಸರ್ವ ಸಂಘಮಿತ್ರರಿಗೆ ಕೃತಜ್ಞತೆ ಸಲ್ಲಿಸಿದರು. ತಮ್ಮ ಕಾರ್ಯಾವಧಿಯನ್ನು ಪೂರ್ಣಗೊಳಿಸಿದ ಆಡಳಿತ ಮಂಡಳಿಯ ಸದಸ್ಯರಿಗೆ ನೆನೆಪಿನ ಕಾಣಿಕೆಯನ್ನಿತ್ತು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
2016 ನೇ ವರ್ಷದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡ ಸದಸ್ಯರ ಹೆಸರನ್ನು ಚುನಾವಣಾಧಿಕಾರಿ ಶ್ರೀ ಲೈನಲ್ ಮಸ್ಕರೇನಸ್ ಪ್ರಕಟಿಸಿದರು.
ಆಡಳಿತ ಮಂಡಳಿ-2016
ಅಧ್ಯಕ್ಷ – ಶ್ರೀ ಹರೀಶ್ ಭಂಡಾರಿ ಉಪಾಧ್ಯಕ್ಷ – ಶ್ರೀ ವಿಲ್ಸನ್ ಡಿ’ಸೋಜ
ಪ್ರಧಾನ ಕಾರ್ಯದರ್ಶಿ- ಶ್ರೀ ವಿಜಯ್ ಕೈರಂಗಲ ಜೊತೆ ಕಾರ್ಯದರ್ಶಿ- ಶ್ರೀ ಮಾಧವ ನಾಯಕ್
ಕೋಶಾಧಿಕಾರಿ – ಶ್ರೀ ರಾಜೇಶ್ ಮೆಂಡನ್ ಅಂತರಿಕ ಲೆಕ್ಕ ಪರಿಶೋಧಕ- ಶ್ರೀ ಮಹಮ್ಮದ್ ಇಕ್ಬಾಲ್
ಸಾಂಸ್ಕೃತಿಕ ಕಾರ್ಯದರ್ಶಿ – ಶ್ರೀ ಸತೀಶ್ ಆಚಾರ್ಯ ಕ್ರೀಡಾ ಕಾರ್ಯದರ್ಶಿ- ಶ್ರೀ ರಾಜೇಶ್ ಪೂಜಾರಿ
ಕ್ಷೇಮಾಧಿಕಾರಿ- ಶ್ರೀ ಚಂದ್ರಹಾಸ ಶೆಟ್ಟಿ ಸಾರ್ವಜನಿಕ ಸಂಪರ್ಕಾಧಿಕಾರಿ-ಶ್ರೀ ಪೌಸ್ತಿನ್ ಪಿಂಟೊ
2016ನೆಯ ಸಾಲಿನ ನೂತನ ಅಧ್ಯಕ್ಷ ಶ್ರೀ ಹರೀಶ್ ಭಂಡಾರಿ ತಮ್ಮ ಮಾತುಗಳಲ್ಲಿ ಕೂಟದ ಯಶಸ್ಸಿಗೆ ಸರ್ವರ ಸಹಕಾರವನ್ನು ಯಾಚಿಸುತ್ತಾ, ಪ್ರಸ್ತುತ ವರ್ಷ ಕೂಟದ ಸದಸ್ಯರ ಏಳಿಗೆಗೆ ಹೆಚ್ಚಿನ ಒತ್ತು ಕೊಡುವುದಾಗಿ ತಿಳಿಸಿದರು. ಮನೋರಂಜನಾ ಕಾರ್ಯಕ್ರಮದಲ್ಲಿ ಕೂಟದ ಪ್ರತಿಭೆಗಳಿಂದ ರಂಗು ರಂಗಿನ ನೃತ್ಯ ಪ್ರದರ್ಶನ, ಇಂಪಾದ ಸಂಗೀತ, ಹಾಸ್ಯ ಪ್ರಹಸನಗಳು ಸಭಿಕರನ್ನು ರಂಜಿಸಿತು. ಶ್ರೀ ವಿಶ್ವನಾಥ್ ಶೆಟ್ಟಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಶ್ರೀ ಮಾಧವ ನಾಯಕ್ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಮಹಾಸಭೆ ಮುಕ್ತಾಯಗೊಂಡಿತು.
ವರದಿ- ಸುರೇಶ್ ಶ್ಯಾಮ್ ರಾವ್ ನೇರಂಬಳ್ಳಿ