ಅಂತರಾಷ್ಟ್ರೀಯ

ಪಿಸ್ತಾ ತಿಂದು.. ಕೊಬ್ಬು ನಿರ್ವಹಿಸಿ

Pinterest LinkedIn Tumblr

pista

ನಮ್ಮಲ್ಲಿ ಹೆಚ್ಚಿನ ಮಂದಿ ಕೊಬ್ಬು ಎಂದಾಕ್ಷಣ ಹೆದರುತ್ತೇವೆ. ಕೊಬ್ಬಿನಾಂಶ ಹೆಚ್ಚಾಗುವುದರಿಂದ ಸಕ್ಕರೆ ಕಾಯಿಲೆ, ಹೃದಯ ಕಾಯಿಲೆ, ರಕ್ತದೊತ್ತಡ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದರೆ ಪಿತ್ತ ಉತ್ಪತ್ತಿ ಮಾಡುವ ಈ ಕೊಬ್ಬಿನಾಂಶ ದೇಹದ ನರವ್ಯೂಹಕ್ಕೆ, ಜೀವಕೋಶಗಳ ಆಕಾರಕ್ಕೆ, ಮೆದುಳಿನ ರಕ್ತನಾಳಗಳಿಗೆ ಹೆಚ್ಚು ಅಗತ್ಯವಾಗುತ್ತದೆ.

ಹೆಚ್ಚು ಸಾಂದ್ರತೆಯ ಲಿಪ್ರೋಪ್ರೊಟೀನ್‌ಗಳ ಉತ್ಪತ್ತಿಯಿಂದ ಇಂತಹ ಸಮಸ್ಯೆಗಳು ಉಂಟಾಗಲು ಪ್ರಮುಖ ಕಾರಣ. ಇನ್ನೊಂದು ಕಡೆಯಲ್ಲಿ ಕಡಿಮೆ ಸಾಂದ್ರತೆಯ ಲಿಪ್ರೋಪ್ರೊಟೀನ್‌ಗಳು ಹೃದಯನಾಳಗಳ ಗೋಡೆಗಳಲ್ಲಿ ಶೇಖರಣೆಯಾಗುತ್ತದೆ. ಇದರಿಂದ ಹೃದಯ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತದೆ. ಇವೆರಡು ಕೊಬ್ಬಿನಾಂಶಗಳಲ್ಲ ಎಂಬುದನ್ನು ಅರಿತುಕೊಳ್ಳಬೇಕಾಗತ್ತದೆ.

ಆದರೆ ಇವೇ ಹೃದಯ ಸಂಬಂಧಿ ಸಮಸ್ಯೆಗೆ ಕಾರಣವಾಗುತ್ತವೆ. ಹೃದಯ ಸಂಬಂಧಿಸಿದ ಕಾಯಿಲೆಗಳನ್ನು ತರುವಂತಹ ಆಹಾರ ಪದಾರ್ಥಗಳ ಸೇವನೆಯನ್ನು ಕಡಿಮೆಗೊಳಿಸಿ, ಜೀವನ ಕ್ರಮದಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಇವುಗಳು ಉತ್ತಮ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಹೆಚ್ಚು ಮುಖ್ಯವಾಗುತ್ತದೆ. ಹೆಚ್ಚು ಬೊಜ್ಜು ಹೊಂದಿರುವವರಿಗೆ ಹೃದಯ ಕಾಯಿಲೆಗಳು ಬರುವುದು ಸಾಮಾನ್ಯ. ನಿಯಮಿತ ವ್ಯಾಯಾಮ, ಡಯಟ್ ಇತ್ಯಾದಿಗಳನ್ನು ಅನುಸರಿಸಿ, ನಿಯಮಿತವಾಗಿ ಕೊಬ್ಬಿನಾಂಶವನ್ನು ಪರಿಶೀಲಿಸಬೇಕು.

ಹೆಚು ಕೊಬ್ಬಿನಾಂಶಗಳುಳ್ಳ ಆಹಾರವನ್ನು ತಿನ್ನುವುದನ್ನು ಕಡಿಮೆಗೊಳಿಸಿ. ಉದಾಹರಣೆಗೆ ಪೊಟೇಟೋ ವೇಫರ್ಸ್, ಪ್ಯಾಕೆಟೆಡ್ ತಿನಿಸು ಇತ್ಯಾದಿ ಗೋಧಿ ಬಳಸಿದ ವಸ್ತುಗಳನ್ನು ಕಡಿಮೆ ಮಾಡಬೇಕು. ಅಂತೆಯೇ ಹಾಲು, ತುಪ್ಪಗಂತಹ ಹೆಚು ಸಾಂದ್ರತೆ ಇರುವ ವಸ್ತುಗಳನ್ನು ಬಳಕೆ ಮಾಡಬಾರದು.
ಮತ್ತೊಂದು ಪ್ರಮುಖ ಅಂಶವೆಂದರೆ, ನೀವು ತೆಗೆದುಕೊಳ್ಳುವ ಆಹಾರ ವಸ್ತುಗಳಲ್ಲಿ ಶೇ.೦ಯಷ್ಟು ಕೊಬ್ಬು ಹಾಗೂ ನ್ಯೂಟ್ರಿಶನ್ ಟೇಬಲ್ ಉತ್ತಮವಾಗಿರುವ ಆಹಾರ ವಸ್ತುಗಳನ್ನೇ ಬಳಸುವುದರಿಂದಲೂ ಹೆಚ್ಚು ಪ್ರಯೋಜನಕಾರಿಯಾಗುತ್ತದೆ. ಅಂತೆಯೇ ಟ್ರಾನ್ಸ್ ಫ್ಯಾಟ್ ಸಹ ಶೇ.೦ ಇರುವಂತೆ ನೋಡಿಕೊಳ್ಳಬೇಕು.

ಕೊಬ್ಬಿನಾಂಶವನ್ನು ಹತೋಟಿಯಲ್ಲಿಡಲು ಡಯಟ್ ಸಂದರ್ಭದಲ್ಲಿ ಒಣಹಣ್ಣು ಸೇವಿಸುವುದರಿಂದ ಇನ್ನಷ್ಟು ಹೆಚ್ಚು ಸಹಕಾರಿಯಾಗುತ್ತದೆ. ಭಾರತೀಯ ಮಧುಮೇಹ ಫೌಂಡೇಷನ್ ಹಾಗೂ ನ್ಯಾಷನಲ್ ಡಯಾಬಿಟಿಸ್, ಒಬೆಸಿಟಿ ಹಾಗೂ ಕೊಲೆಸ್ಟ್ರಾಲ್ ಫೌಂಡೇಷನ್ ನಡೆಸಿದ ಇತ್ತೀಚಿನ ಅಧ್ಯಯನದ ಪ್ರಕಾರ, ಪಿಸ್ತಾದಲ್ಲಿ ಕಡಿಮೆ ಪ್ರಮಾಣದಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಇದ್ದು, ನೈಸರ್ಗಿಕವಾಗಿ ಕೊಬ್ಬಿನಾಂಶ ರಹಿತ ತಿನಿಸಾಗಿದೆ. ಅಂತೆಯೇ ಇವುಗಳಲ್ಲಿ ಹೆಚ್ಚು ರೋಗನಿರೋಧಕ ಶಕ್ತಿಯ ಪ್ರೊಟೀನ್‌ಗಳು ಹಾಗೂ ಫೈಬರ್ ಮತ್ತು ಪ್ರೊಟೀನ್‌ಗಳು ಲಭ್ಯವಾಗುತ್ತದೆ.

ಪಿಸ್ತಾವು ಹೃದಯ ಸಂಬಂಧಿಸಿದ ಕಾಯಿಲೆಗಳ ತೊಂದರೆಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುತ್ತದೆ. ಇದಲ್ಲದೆ ಹಸಿ ತರಕಾರಿ, ಹಣ್ಣುಗಳನ್ನು ದಿನ ನಿತ್ಯದ ಆಹಾರದಲ್ಲಿ ಬಳಸುವುದು ಹೆಚ್ಚು ಸೂಕ್ತ. ಇದರೊಂದಿಗೆ ಫ್ಯಾಟಿ ಫಿಶ್, ಸೂರ್ಯಕಾಂತಿ ಬೀಜ ಇತ್ಯಾದಿಗಳು ದೇಹಕ್ಕೆ ಅಗತ್ಯವಾದ ಕೊಬ್ಬಿನಾಂಶವನ್ನು ಹೆಚ್ಚು ಉತ್ಪಾದಿಸುತ್ತದೆ. ಹೆಚ್ಚು ಕೊಬ್ಬಿನಾಂಶದ ಡೈರಿ ಉತ್ಪನ್ನ ಕಡಿಮೆ ಕೊಬ್ಬಿನಾಂಶದ ಉತ್ಪನ್ನವನ್ನಾಗಿ ಬದಲಾಯಿಸಿ.

ದಿನಾಲು ಕನಿಷ್ಠ ೩೦ ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ಅತ್ಯಂತ ಅವಶ್ಯ. ನಡಿಗೆ, ಈಜು, ಅಥವ ಇಷ್ಟವಾದ ಆಟದಲ್ಲಿ ತೊಡಗುವುದು ಇನ್ನಷ್ಟು ಸಹಾಯಕರ. ಇದಲ್ಲದೆ ಲಿಫ್ಟ್ ಬದಲು ಮೆಟ್ಟಿಲುಗಳನ್ನು ಬಳಸುವುದು ಬದಲಾವಣೆಗೆ ಕಾರಣವಾಗುತ್ತದೆ. ನೆನಪಿಡಿ, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಇದೆ. ನೀವು ಮಾತ್ರ ಇವನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯ.

Write A Comment