ಕರಾವಳಿ

ಮಾರ್ಚ್ 25; ದುಬೈ ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ಅಧೀನದಲ್ಲಿ ಝೈನುಲ್ ಉಲಮಾ ಅನುಸ್ಮರಣೆ ಹಾಗೂ ಸುನ್ನೀ ಸಮಾವೇಶ : ಅನೀಸ್ ಕೌಸರಿ ಮುಖ್ಯ ಪ್ರಭಾಷಣ

Pinterest LinkedIn Tumblr

IMG-20160308-WA0064

ದುಬೈ : ದಾರ್ಮಿಕ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳ ಮೂಲಕ ಸಮುದಾಯದ ಅಭ್ಯುದಯಕ್ಕಾಗಿ ಹಲವಾರು ಸಮಾಜ ಮುಖಿ ಕಾರ್ಯಗಳ ದುಬೈ ಯಲ್ಲಿ ಕಾರ್ಯಾಚರಿಸುತ್ತಿರುವ ಕರ್ನಾಟಕ ಎಸ್ ಕೆ ಎಸ್ ಎಸ್ ಎಫ್ ರಾಜ್ಯ ಸಮಿತಿ ಅಧೀನದಲ್ಲಿ ಮಾರ್ಚ್ 25 ರಂದು ಬೃಹತ್ ಸುನ್ನೀ ಸಮಾವೇಶದೊಂದಿಗೆ ಝೈನುಲ್ ಉಲಮ ಅನುಸ್ಮರಣಾ ಕಾರ್ಯಕ್ರಮವು ರಫೀ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ.

ಜುಮಾ ಸಮಾಝಿನ ಬಳಿಕ ಪ್ರಾರಂಭ ಗೊಳ್ಳಲಿರುವ ಈ ಕಾರ್ಯಕ್ರಮದಲ್ಲಿ ಹಲವಾರು ಸಮಸ್ತ ನೇತಾರರು , ಉಲಮಾ ಶಿರೋಮಣಿಗಳು ಭಾಗವಹಿಸಲಿದ್ದು ದುಬೈ ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ಸಮಿತಿ ಅಧ್ಯಕ್ಷರಾದ ಸಯ್ಯದ್ ಅಸ್ಕರಲಿ ತಂಙಲ್ ಕೊಲ್ಪೆ ರವರು ಅಧ್ಯಕ್ಷತೆ ವಹಿಸಲಿದ್ದಾರೆ. ಅಲ್ಲದೆ ಕಾರ್ಯಕ್ರಮದ ಕೇಂದ್ರ ಬಿಂದು ಮುಖ್ಯ ಪ್ರಭಾಷಣಕಾರರಾಗಿ , ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷರಾಗಿ ಆಯ್ಕೆಗೊಂಡು ಪ್ರಪ್ರಥಮ ಬಾರಿಗೆ ಯು ಎ ಇ ಗೆ ಆಗಮಿಸುತ್ತಿರುವ , ಸಂಘಟನಾ ಚತುರ , ಪ್ರಭಾಷಣ ಲೋಕದ ಧ್ರುವ ತಾರೆ. ಬಹುಭಾಷಾ ಪಾಂಡಿತ್ಯದೊಂದಿಗೆ ತನ್ನ ವಾಕ್ಚಾತುರ್ಯದಿಂದ ಹಲವಾರು ಅಭಿಮಾನಿ ಬಳಗವನ್ನು ತನ್ನದಾಗಿಸಿಕೊಂಡಿರುವ ಯುವ ಪ್ರತಿಭೆ , ಕೆ ಐ ಸಿ ಪ್ರೊಫೆಸ್ಸರ್ ಮುಹಮ್ಮದ್ ಅನೀಸ್ ಕೌಸರಿ ತಾಯಿ ನಾಡಿನಿಂದ ಆಗಮಿಸಲಿದ್ದು ಸಮಸ್ತ ಸ್ನೇಹಿಗಲಾದ ತಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವೀಗೊಳಿಸುವಂತೆ ದುಬೈ ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ಸಮಿತಿ ಅಧ್ಯಕ್ಷರಾದ ಸಯ್ಯದ್ ಅಸ್ಕರಲಿ ತಂಙಲ್ ಕೊಲ್ಪೆ ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷರಾದ ಅಬ್ದುಲ್ಲಾ ನಯೀಮಿ ಮುಸ್ಲಿಯಾರ್ , ಕಾರ್ಯದರ್ಶಿ ಅಶ್ರಫ್ ಅಂಜದಿ ಕೋಶಾಧಿಕಾರಿ ಅನ್ವರ್ ಮಾಣಿಲ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಪ್ರಸಕ್ತ ಕಾರ್ಯಕ್ರಮದ ರೂಪುರೇಶಗಳ ಕುರಿತು ಸಮಾಲೋಚನಾ ಸಭೆಯು ಇತ್ತೀಚಿಗೆ ರಾಫೀ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಮಾವೇಷದ ಯಶಸ್ಸಿನ ಕುರಿತು ಚರ್ಚಿಸಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು , ಸ್ವಾಗತ ಸಮಿತಿ ಪಧಾಧಿಕಾರಿಗಳಾಗಿ

ಸ್ವಾಗತ ಸಮಿತಿ ಸಕಹೆಗಾರರಾಗಿ : ಸಯ್ಯದ್ ಅಸ್ಕರಲಿ ತಂಙಲ್ ಕೊಲ್ಪೆ , ಅಬ್ದುಲ್ ಖಾದರ್ ಬೈತಡ್ಕ , ಅಬ್ದುಲ್ ಸಲಾಂ ಬಪ್ಪಲಿಗೆ
ಅಧ್ಯಕ್ಷರು: ಅಬ್ದುಲ್ಲಾ ನಹೀಮಿ ಈಶ್ವರಮಂಗಿಲ
ಕಾರ್ಯದರ್ಶಿ : ಅಶ್ರಫ್ ಅಂಜದಿ
ಕೊಶಾದಿಕಾರಿ : ಅನ್ವರ್ ಮಾಣಿಲ
ಸಂಚಾಲಕರಾಗಿ : ನೂರ್ ಮುಹಮ್ಮದ್ ನೀರ್ಕಜೆ , ಬದ್ರುದ್ದೀನ್ ಹೆಂತಾರ್, ಅಬ್ಬಾಸ್ ಕೇಕುಡೆ, ಉಮ್ಮರ್ ರೆಂಜಲಾಡಿ, ಅಶ್ರಫ್ ಪರ್ಲಡ್ಕ , ಶರೀಫ್ ಕಾವು , ಅಶ್ರಫ್ ಖಾನ್ ಮಂತೂರ್ , ಸಾಜಿದ್ ಆರ್ಲಪದವು, ಹಮೀದ್ ಮನಿಲ

Write A Comment