ಕರಾವಳಿ

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ದೇರಾ ಘಟಕಕ್ಕೆ ನೂತನ ಸಾರಥ್ಯ

Pinterest LinkedIn Tumblr

22

ಗೌರವಾಧ್ಯಕ್ಷರಾಗಿ ಎಂ.ಇ.ಮುಳೂರು, ಅಧ್ಯಕ್ಷರಾಗಿ ಇಬ್ರಾಹಿಂ ಹಾಜಿ ಕಿನ್ಯ ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಯೂಸುಫ್ ಅರ್ಲಪದವು ಕೋಶಾಧಿಕಾರಿಯಾಗಿ ಹಂಝ ಮೂಳೂರು ಆಯ್ಕೆ.

ದುಬೈ . ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ಇದರ ಅಧೀನ ಘಟಕವಾದ ದೇರಾ ಇದರ 17 ನೇ ವಾರ್ಷಿಕ ಮಹಾ ಸಭೆಯು ಘಟಕ ಅಧ್ಯಕ್ಷರಾದ ಜನಾಬ್. ಹುಸೈನ್ ಹಾಜಿ ಕಿನ್ಯ ರವರ ಅಧ್ಯಕ್ಷತೆಯಲ್ಲಿ ಜನಾಬ್ ಶುಕೂರ್ ಮಣಿಲ ರವರ ನಿವಾಸದಲ್ಲಿ ನಡೆಯಿತು. ಕಾರ್ಯಕ್ರಮವು ಜನಾಬ್.ಇಬ್ರಾಹಿಂ ಹಾಜಿ ಕಿನ್ಯ ರವರ ಕಿರಾಹತ್ ಜನಾಬ್. ಶಾಪಿ ಸಖಾಪಿ ರವರ ದುವಾ ದೊಂದಿಗೆ ಪ್ರಾರಂಭ ಗೊಂಡಿತು. ದೇರಾ ಘಟಕ ದ ಕಾರ್ಯದರ್ಶಿ ಜನಾಬ್.ಶೇಖಬ್ಬ ಕಿನ್ಯ ರವರು ಸ್ವಾಗತಿಸಿ ಕೋಶಾಧಿಕಾರಿ ಜನಾಬ್.ಅಬ್ದುಲ್ ಹಮೀದ್ ಖಾದರ್ ಮುಳೂರು ರವರು ವರದಿ ಹಾಗೂ ಜನಾಬ್.ಶೇಖಬ್ಬ ಕಿನ್ಯ ರವರು ಲೆಕ್ಕ ಪತ್ರ ಮಂಡಿಸಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಡಿ.ಕೆ.ಎಸ್.ಸಿ. ಯು.ಎ.ಇ. ರಾಷ್ಟೀಯ ಸಮಿತಿ ಅದ್ಯಕ್ಷರಾದ ಜನಾಬ್.ಮೊಯ್ದೀನ್ ಕುಟ್ಟಿ ಹಾಜಿ ಕಕ್ಕಿಂಜೆ ಪ್ರಧಾನ ಕಾರ್ಯದರ್ಶಿ ಜನಾಬ್.ಇಕ್ಬಾಲ್ ಕಣ್ಣಂಗಾರ್ ಉಪಾದ್ಯಕ್ಷರಾದ ಜನಾಬ್.ಹಾಜಿ.ಎಂ.ಇ.ಮುಳೂರು, ಜನಾಬ್.ಅಬ್ದುಲ್ ಲತೀಪ್ ಮುಲ್ಕಿ, ರಾಷ್ಟೀಯ ಸಮಿತಿ ನಾಯಕರಾದ ಜನಾಬ್.ಹಾಜಿ.ಅಬ್ದುಲ್ ರಹಿಮಾನ್ ಸಂಟ್ಯಾರ್, ಜನಾಬ್.ಹಾಜಿ ಅಬ್ದುಲ್ಲ ಬೀಜಾಡಿ, ಜನಾಬ್.ಬದ್ರುದ್ದೀನ್ ಅರಂತೋಡು ರವರು ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

deira agm 1

deira agm 4

deira agm 7

deira agm 9

2016 – 17 ರ ನೂತನ ಸಮಿತಿ ಯನ್ನು ರಾಷ್ಟ್ರೀಯ ಸಮಿತಿ ವೀಕ್ಷಕರಾದ ಜನಾಬ್. ಜನಾಬ್. ಅಬ್ದುಲ್ ಲತೀಪ್ ಮುಲ್ಕಿ ಹಾಗೂಜನಾಬ್.ಹಾಜಿ.ಅಬ್ದುಲ್ ರಹಿಮಾನ್ ಸಂಟ್ಯಾರ್ ಚುನಾವಣಾಧಿಕಾರಿಯಾಗಿ ಜವಾಬ್ದಾರಿಯನ್ನು ವಹಿಸಿದರು..

ಗೌರವಾಧ್ಯಕ್ಷರು: ಜನಾಬ್. ಹಾಜಿ. ಎಂ.ಇ.ಮುಳೂರು
ಅಧ್ಯಕ್ಷರು: ಜನಾಬ್. ಇಬ್ರಾಹಿಂ ಹಾಜಿ ಕಿನ್ಯ
ಉಪಾಧ್ಯಕ್ಷರು: ಜನಾಬ್ ಶುಕೂರು ಮಣಿಲ
ಜನಾಬ್: ಇಸ್ಮಾಯಿಲ್ ಬಾರೂದ್
ಜನಾಬ್.ಇ.ಕೆ.ಇಬ್ರಾಹಿಂ ಕಿನ್ಯ
ಪ್ರಧಾನ ಕಾರ್ಯದರ್ಶಿ: ಜನಾಬ್: ಎಸ್.ಯೂಸುಫ್ ಅರ್ಲಪದವು
ಜೊತೆ ಕಾರ್ಯದರ್ಶಿ: ಜನಾಬ್: ರಪೀಕ್ ಸಂಪ್ಯ
ಜನಾಬ್.ಅಬ್ದುಲ್ ಹಮೀದ್ ಖಾದರ್ ಮುಳೂರು
ಜನಾಬ್.ಅಕ್ಬರ್ ಅಲಿ ಸುರತ್ಕಲ್
ಕೋಶಾದಿಕಾರಿ : ಜನಾಬ್.ಹಂಝ ಮೂಳೂರು
ಲೆಕ್ಕ ಪರಿದೋಶಕರು: ಜನಾಬ್. ಅಬ್ದುಲ್ ಹಮೀದ್ ಮುಹಮ್ಮದ್ ಮುಳೂರು ತೋಟ
ಸಂಚಾಲಕರು: ಜನಾಬ್:ಎಸ್. ಇಬ್ರಾಹಿಂ ಶರೀಪ್ ಅರ್ಲಪದವು
ಜನಾಬ್: ಸಹಬಾನ್ ಮುಳೂರು
ಜನಾಬ್: ಮುಹಮ್ಮದ್ ಹಾಜಿ ಮುರ ಪುತ್ತೂರು
ಜನಾಬ್: ಯೂಸುಫ್ ಮಾಡನ್ನೂರು
ಜನಾಬ್.ಅಬ್ದುಲ್ ರಜಾಕ್ ಮುಟ್ಟಿಕಲ್
ಸದಸ್ಯರು – ಜನಾಬ್: ಶಮೀರ್ ಮುಹಮ್ಮದ್ ಬಾರೂದ್
ಜನಾಬ್: ಅಬ್ದುಲ್ಲ ಮುಸ್ಲಿಯಾರ್ ಕುಡ್ತಮುಗೇರು
ಜನಾಬ್: ಮೂಸಾ ಹಾಜಿ ಕಿನ್ಯ
ಜನಾಬ್: ಅಬ್ಬು ಹಾಜಿ ಕಿನ್ಯ
ಜನಾಬ್: ಮಜೀದ್ ಹಾಜಿ ಉಚ್ಚಿಲ

ಸಭೆಯಲ್ಲಿ ಡಿ.ಕೆ.ಎಸ್.ಸಿ ಯೂತ್ ವಿಂಗ್ ಅದ್ಯಕ್ಷರಾದ ಮುಖ್ತಾರ್ ಅರಂತೋಡು, ಡಿ.ಕೆ.ಎಸ್.ಸಿ ಯೂತ್ ವಿಂಗ್ ಸಂಘಟನಾ ಕಾರ್ಯದರ್ಶಿ ಕಮಾಲ್ ಅಜ್ಜಾವರ, ಅಲ್ ಕ್ವಿಸಸ್ ಘಟಕದ ಮುಸ್ತಾಕ್ ಅಹ್ಮದ್ ಕಿನ್ಯ, ನವಾಝ್ ಕಿನ್ಯ, ಅಬ್ದುಲ್ ರಹಿಮಾನ್ ಪೈಂಬಚ್ಚಾಲ್ ಶಾರ್ಜಾ ಘಟಕದ ಅಬ್ಬಾಸ್ ಪಾಣಾಜೆ ಉಪಸ್ಥಿತರಿದ್ದರು. ಕೊನೆಯಲ್ಲಿ ಯುಸುಪ್ ಅರ್ಲಪದವು ದನ್ಯವಾದ ಸಮರ್ಪಿಸಿದರು.

ಜೂ.17 ರಂದು ಡಿ.ಕೆ.ಎಸ್.ಸಿ. ಯು.ಎ.ಇ. ರಾಷ್ಟೀಯ ಸಮಿತಿ ವತಿಯಿಂದ ಬೃಹತ್ ಇಫ್ತಾರ್ ಮೀಟ್ 2016
ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ರಾಷ್ಟೀಯ ಸಮಿತಿ ವತಿಯಿಂದ ವರ್ಷಂಪ್ರತಿ ರಮಳಾನ್ ತಿಂಗಳಲ್ಲಿ ಹಮ್ಮಿಕೊಳ್ಳುವಂತೆ ಈ ವರ್ಷದ ಇಫ್ತಾರ್ ಕೂಟ ವನ್ನು ದಿನಾಂಕ 17/06 /2016 ನೇ ಶುಕ್ರವಾರ ನಡೆಸಲಾಗುವುದೆಂದು ಡಿ.ಕೆ.ಎಸ್.ಸಿ. ಯು.ಎ.ಇ. ರಾಷ್ಟೀಯ ಸಮಿತಿ ಅದ್ಯಕ್ಷರಾದ ಜನಾಬ್.ಮೊಯ್ದೀನ್ ಕುಟ್ಟಿ ಹಾಜಿ ಕಕ್ಕಿಂಜೆ ರವರ ಅದ್ಯಕ್ಷತೆಯಲ್ಲಿ ಜನಾಬ್.ಇಕ್ಬಾಲ್ ಕಣ್ಣಂಗಾರ್ ,ಜನಾಬ್.ಹಾಜಿ.ಎಂ.ಇ.ಮುಳೂರು, ಜನಾಬ್.ಅಬ್ದುಲ್ ಲತೀಪ್ ಮುಲ್ಕಿ, ಜನಾಬ್.ಹುಸೈನ್ ಹಾಜಿ ಕಿನ್ಯ ,ಜನಾಬ್.ಎಸ್.ಯೂಸುಫ್ ಅರ್ಲಪದವು, ಜನಾಬ್.ಇಬ್ರಾಹಿಂ ಹಾಜಿ ಕಿನ್ಯ, ಜನಾಬ್.ಇ.ಕೆ.ಇಬ್ರಾಹಿಂ ಕಿನ್ಯ, ಜನಾಬ್.ಅಬ್ದುಲ್ಲ ಹಾಜಿ ಬೀಜಾಡಿ,ಜನಾಬ್.ಹಾಜಿ.ಅಬ್ದುಲ್ ರಹಿಮಾನ್ ಸಂಟ್ಯಾರ್ ಸಭೆ ಸೇರಿ ಈ ತೀರ್ಮಾನವನ್ನು ಕೈಗೊಳ್ಳಲಾಯಿತು
ವರದಿ. ಎಸ್.ಯುಸುಪ್ ಅರ್ಲಪದವು

Write A Comment