ಅಂತರಾಷ್ಟ್ರೀಯ

ಹಲಸಿನ ಹಣ್ಣು ಸೌಂದರ್ಯ ವರ್ಧಕ ! ಮುಖದ ಕಾಂತಿ ಹೆಚ್ಚಿಸಲು, ನೆರಿಗೆಗಳಾಗುವುದನ್ನೂ ತಪ್ಪಿಸಲು ಹೀಗೆ ಮಾಡಿ….

Pinterest LinkedIn Tumblr

jackfruit

ಸೌಂದರ್ಯದ ವಿಷಯಕ್ಕೆ ಬಂದಾಗ ಹಲಸಿನ ಹಣ್ಣಿನ ಕೊಡುಗೆ ಅಪಾರ ಎಂಬುದು ಇದೀಗ ಸಾಬೀತಾಗಿದೆ. ಇದರ ಸುವಾಸನೆಯ ಭರಿತ ಪರಿಮಳ ಎಂತವರನ್ನೂ ಕೂಡ ತನ್ನ ಬಳಿ ಆಕರ್ಷಿಸುತ್ತದೆ. ಅರೇ, ಕೇವಲ ಹಲಸಿನ ಹಣ್ಣಿನ ವಾಸನೆಯನ್ನು ಮಾತ್ರ ಸವಿದರೆ ಸಾಕೇ..? ಅದರಲ್ಲೂ ಕೆಲವರಂತೂ ಹಲಸಿನ ಹಣ್ಣು ಅಂದ ಕೂಡಲೇ ಬಾಯಲ್ಲಿ ಕೆಲವರಿಗೆ ನೀರೂರುತ್ತೆ. ಹಾಗಂತ ಬಾಯಲ್ಲಿ ನೀರೂರಿಸಿ, ತಿನ್ನಲು ಮಾತ್ರ ರುಚಿಯಾಗಿರುವ ಹಣ್ಣು ಹಲಸು ಅಂತ ಅಂದುಕೊಳ್ಳಬೇಡಿ.. ಬದಲಾಗಿ ಹಲಸು ನಿಮ್ಮ ಸೌಂದರ್ಯ ವರ್ಧಕ ಕೂಡ ಹೌದು..

ಹಣ್ಣಿನ ಜೊತೆಗೆ ಹಲಸಿನ ಬೀಜವೂ ಕೂಡ ಸೌಂದರ್ಯ ವೃದ್ಧಿಗೆ ಸಹಕಾರಿಯಾಗಿದೆ ಎಂದು ಹೇಳಲಾಗಿದೆ. ಹಲಸಿನ ಬೀಜದ ಮುಖಲೇಪದಿಂದ ಕೂಡ ಸೌಂದರ್ಯವನ್ನು ವೃದ್ಧಿಸಬಹುದು. ಇದಕ್ಕಾಗಿ ಹಲಸಿನ ಹಸಿ ಬೀಜವೊಂದನ್ನು ಕಲ್ಲಿನ ಮೇಲೆ ಉಜ್ಜಿ ನಯವಾಗಿ ಅರೆದು ಸಮಪ್ರಮಾಣದಲ್ಲಿ ಜೇನು ಮತ್ತು ಹಾಲನ್ನು ಸೇರಿಸಿ ಮುಖಕ್ಕೆಹಚ್ಚಿ ಅರ್ಧಗಂಟೆಯ ಬಳಿಕ ತಣ್ಣೀರಿನಲ್ಲಿ ತೊಳೆದುಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುವುದು ಮತ್ತು ನೆರಿಗೆಗಳಾಗುವುದನ್ನೂ ತಪ್ಪಿಸಬಹುದು.

ಮೊಡವೆ ಸಮಸ್ಯೆಗಳಿಂದ ನೀವು ಬಳಲುತ್ತಿದ್ದೀರಿ ಎಂದಾದಲ್ಲಿ ಪರಿಹಾರ ನಮ್ಮಲ್ಲಿದೆ. ಹಲಸಿನ ಹಣ್ಣನ್ನು ಸಮನಾಗಿ ಅರ್ಧಭಾಗ ಮಾಡಿ. ಒಳಭಾಗವನ್ನು ತುಂಡರಿಸಿ ಮೊಡವೆ ಭಾಗಕ್ಕೆ ಹಚ್ಚಿ. ೧೫ ನಿಮಿಷಗಳ ಕಾಲ ಹಾಗೆಯೇ ಒಣಗಲು ಬಿಡಿ. ನಂತರ ತಂಪು ನೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಹಲಸಿನ ಹಣ್ಣಿನಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ಚರ್ಮ ಕಾಂತಿ ಮತ್ತು ಸೆಳೆತ ಕಳೆದುಕೊಳ್ಳುವುದನ್ನು ನಿಧಾನಗೊಳಿಸುತ್ತದೆ. ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ಮತ್ತು ಪೋಷಣೆಯನ್ನು ನೀಡುತ್ತದೆ. ವಿಶೇಷವಾಗಿ ಮುಖದ ಚರ್ಮಕ್ಕೆ ಕಳೆ, ಕೋಮಲತೆ ಮತ್ತು ಕಾಂತಿಯನ್ನು ನೀಡುವ ಮೂಲಕ ತಾರುಣ್ಯವನ್ನು ಬಹಳ ವರ್ಷಗಳವರೆಗೆ ಕಾಪಾಡಿಕೊಳ್ಳಲು ನೆರವಾಗುತ್ತದೆ.

ಹಲಸಿನ ಹಣ್ಣಿನ ಮೂರು ಹಣ್ಣು ಮತ್ತು ಬೀಜವನ್ನು ನುಣ್ಣಗೆ ಅರೆದುಕೊಳ್ಳಿ. ಈ ಮಿಶ್ರಣ ಒರಟಾಗಿರಲಿ. ಇದನ್ನು ಮೇಲ್ಮುಖವಾಗಿ ಕಪ್ಪು ಕಲೆಗಳ ಮೇಲೆ ಹಚ್ಚಿಕೊಳ್ಳಿ. ೧೦ ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿ.

ನೆರಿಗೆಗಳು ನಿಮ್ಮನ್ನು ವೃದ್ಧಾಪ್ಯಕ್ಕೆ ತಳ್ಳುತ್ತವೆ. ನೆರಿಗೆಗಳಿಂದ ದೂರಾಗಲು, ಹಣ್ಣಿನಿಂದ ಪೇಸ್ಟ್ ತಯಾರಿಸಿಕೊಂಡು ಅದನ್ನು ಮುಖಕ್ಕೆ ಹಚ್ಚಿಕೊಳ್ಳಬಹುದಾಗಿದೆ. ಈ ಪೇಸ್ಟ್?ಗೆ ಒಂದು ಚಮಚ ಹಾಲನ್ನು ಸೇರಿಸಿಕೊಳ್ಳಿ ನಂತರ ಇದನ್ನು ಮಿಶ್ರಮಾಡಿಕೊಂಡು ನೆರಿಗೆಗಳ ಭಾಗಕ್ಕೆ ಹಚ್ಚಿಕೊಳ್ಳಿ. ನಂತರ ೧೦ ನಿಮಿಷಗಳ ತರುವಾಯ ಅದನ್ನು

ಹಲಸಿನ ಹಣ್ಣಿನ ಮೂರು ಹಣ್ಣು ಮತ್ತು ಬೀಜವನ್ನು ನುಣ್ಣಗೆ ಅರೆದುಕೊಳ್ಳಿ. ಈ ಮಿಶ್ರಣ ಒರಟಾಗಿರಲಿ. ಇದನ್ನು ಮೇಲ್ಮುಖವಾಗಿ ಕಪ್ಪು ಕಲೆಗಳ ಮೇಲೆ ಹಚ್ಚಿಕೊಳ್ಳಿ. ೧೦ ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿ.

ಹಲಸಿನ ಹಣ್ಣಿನಿಂದ ಗಾಯಗಳನ್ನು ಸುಲಭವಾಗಿ ಹೋಗಲಾಡಿಸಬಹುದು. ಹಲಸಿನ ಹಣ್ಣಿನ ಬೀಜಗಳನ್ನು ಹುಡಿ ಮಾಡಿಟ್ಟುಕೊಳ್ಳಿ ಇದಕ್ಕೆ ಒಂದು ಚಮಚ ಜೇನನ್ನು ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಗಾಯದ ಮೇಲ್ಭಾಗಕ್ಕೆ ಈ ಪೇಸ್ಟ್ ಅನ್ನು ಸವರಿ ನಂತರ ಒಣಗಲು ಬಿಡಿ. ೧೦ ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿ ಬಳಿಕ ಆಗುವ ಬದಲಾವಣೆ ಗಮನಿಸಿ.

Write A Comment