ಉಡುಪಿ: ಜಿಲ್ಲೆಯ ಹಿರಿಯಡಕ ಪೊಲೀಸ್ ಠಾಣೆ ವ್ಯಾಪ್ತಿಯ ಆತ್ರಾಡಿಯ ಶೇಡಿಗುಡ್ಡೆ ಎಂಬಲ್ಲಿ ತಸ್ಲೀಮ್ ಎಂಬ ಉಡುಪಿ ಮೂಲದ ಯುವಕನನ್ನು ಕೊಲೆ ಮಾಡಿ ಕಾರು ಸಹಿತ ಮೃತ ದೇಹವನ್ನು ಎಸೆದು ಹೋದ ಘಟನೆ ಜುಲೈ14ರಂದು ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಸೈಪು ಯಾನೆ ಸೈಪುದ್ದೀನ್ , ದಿವಾಕರ ಕುಂಬಾರ್, ಇಮ್ತಿಯಾಜ್, ಸಂತೋಷ್ @ ಕುರ್ಪು ಸಂತೋಷ್, ದಿವಾಕರ ಆಚಾರಿ, ಶಂಕರ, ಹನೀಫ್ ಎನ್ನುವವರೇ ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಎರಡು ತಲವಾರು (ಮಚ್ಚು), ಒಂದು ಆಟಿಕೆಯ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.
ವ್ಯವಹಾರ ದ್ವೇಷಕ್ಕೆ ಕೊಲೆ..
ಹಣಕಾಸು ವ್ಯವಹಾರದಲ್ಲಿ ಕೆಲವರೊಂದಿಗೆ ದ್ವೇಷ ಕಟ್ಟಿಕೊಂಡಿದ್ದ ತಸ್ಲೀಂ ಮೂರ್ನಾಲ್ಕು ತಿಂಗಳ ಹಿಂದಷ್ಟೇ ಉಡುಪಿಯ ಯುವತಿಯೋರ್ವಳನ್ನು ಓಡಿಸಿಕೊಂಡು ಹೋಗಿ ಬೆಂಗಳೂರಿನಲ್ಲಿ ಮದುವೆಯಾಗಿ ಬಳಿಕ ಉಡುಪಿಗೆ ವಾಪಾಸ್ಸಾಗಿದ್ದ. ಬಳಿಕ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಆತ ಜು.14 ರಂದು ಶೇಡಿಗುಡ್ಡೆ ಬಳಿ ಶವವಾಗಿ ಪತ್ತೆಯಾಗಿದ್ದು ಇದೊಂದು ವ್ಯವಸ್ಥಿತ ಕೊಲೆಯೆಂದು ಶಂಕೆ ವ್ಯಕ್ತಪಡಿಸಲಾಗಿತ್ತು. ಉಡುಪಿ ಪೊಲೀಸರು ಮೂರು ತಂಡಗಳನ್ನು ರಚಿಸಿ ಕಾರ್ಯಾಚರಣೆಗಿಳಿದಿದ್ದರು. ಈ ಪೈಕಿ ಪೊಲೀಸರಿಗೆ ಸಿಕ್ಕ ಮಾಹಿತಿಯಂತೆ ಮೊದಲಿಗೆ ಸೈಪು ಯಾನೆ ಸೈಪುದ್ದೀನ್ , ದಿವಾಕರ ಕುಂಬಾರ್, ಇಮ್ತಿಯಾಜ್ ಎನ್ನುವವರನ್ನು ವಶಕ್ಕೆ ಪಡೆದು ಬಾಯ್ಬಿಡಿಸಿದಾಗ ಇನ್ನೂ ನಾಲ್ವರು ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದು ಅದರಂತೆಯೇ ಒಟ್ಟು ಏಳು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ವ್ಯವಹಾರದ ನಿಮಿತ್ತ ವೈಯುಕ್ತಿಕ ದ್ವೇಷದಿಂದ ತಸ್ನೀಮ್‌ನನ್ನು ಕೊಲೆಮಾಡಿದ ಬಗ್ಗೆ ವಿಚಾರಣೆ ವೇಳೆ ತಿಳಿದುಬಂದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿದ್ದವರು….
ಈ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈ.ಕೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ , ಪೊಲೀಸ್ ಉಪಾಧೀಕ್ಷಕ ಕುಮಾರಸ್ವಾಮಿ ನೇತ್ರತ್ವದಲ್ಲಿ ಬ್ರಹ್ಮಾವರ ವೃತ್ತದ ಸಿಪಿಐ ಶ್ರೀಕಾಂತ, ಹಿರಿಯಡ್ಕ ಠಾಣಾ ಪಿಎಸ್‌ಐ ವಿನಾಯಕ ಬಿಲ್ಲವ ಹಾಗೂ ಸಿಬ್ಬಂದಿಗಳಾದ ಸುದೇಶ್ ಶೆಟ್ಟಿ, ಭಂಡಾರ್‌ಕರ್, ಸುಧಾಕರ, ಶಶಿಕುಮಾರ್, ಸಂತೋಷ್, ಮೋಹನ ಕೋತ್ವಾಲ್, ರಾಜೇಶ್ ಕೊಕ್ಕರ್ಣೆ, ಅಶೋಕ್, ರಾಜೇಶ್ , ಅಬ್ದಲ್ ನಜೀರ್, ಅರುಣ್ ಕುಮಾರ್, ನಾಗೇಂದ್ರ, ಪಣಿರಾಜ್, ಪ್ರಸಾದ್, ಗೋಪಾಲ ಮೊದಲಾದವರು ಪಾಲ್ಗೊಂಡಿದ್ದರು.
ಇದನ್ನೂ ಓದಿರಿ:
ಉಡುಪಿಯಲ್ಲಿ ಯುವಕನ ಕೊಲೆ; ಕಾರಣ ನಿಗೂಢ
Comments are closed.