ಕರ್ನಾಟಕ

ಪುರೋಹಿತಶಾಹಿ ವ್ಯವಸ್ಥೆಯಿಂದ ಶಾಂತಿಯಿಲ್ಲ: ದೇಜಗೌ

Pinterest LinkedIn Tumblr

pvec229rjMurugha-05

ಬೆಂಗಳೂರು, ಸೆ.21: ಪುರೋಹಿತಶಾಯಿ ವ್ಯವಸ್ಥೆ ಜೀವಂತ ಇರುವವರೆಗೂ ದೇಶದಲ್ಲಿ ಶಾಂತಿ ನೆಲೆಸ ಲು ಸಾಧ್ಯವಿಲ್ಲವೆಂದು ಹಿರಿಯ ಸಾಹಿತಿ ದೇ.ಜವರೇಗೌಡ ಅಭಿಪ್ರಾಯ ಪಟ್ಟಿದ್ದಾರೆ.

ರವಿವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬಸವ ಕೇಂದ್ರ, ಅನಿಕೇತನ ಕನ್ನಡ ಬಳಗ ಆಯೋಜಿಸಿದ್ದ ಚಿತ್ರದುರ್ಗದ ಮುರುಘ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ರಚಿಸಿರುವ ‘ಪ್ರಚಲಿತ’, ‘ಮನ್ನೋಟ’ ಹಾಗೂ ‘ವಚನ ವಿವೇಕ’ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶಾದ್ಯಂತ ಸಾವಿರಾರು ಮಠಗಳು, ಲಕ್ಷಾಂ ತರ ಸ್ವಾಮೀಜಿಗಳಿದ್ದಾರೆ. ಆದರೇನು ಪ್ರಯೋಜನ. ಇವತ್ತಿಗೂ ದೇಶದಲ್ಲಿ ಕಂದಾಚಾರ, ಭ್ರಷ್ಟಾಚಾರ, ದಲಿತ ಹಾಗೂ ಮಹಿಳೆ ಮೇಲಿನ ಶೋಷಣೆ ಮುಂದು ವರಿದಿದೆ. ದೇಶ ಧಾರ್ಮಿಕತೆ, ಪುರೋಹಿತಶಾಯಿ ಹಿಡಿತದಲ್ಲಿರುವವರೆಗೂ ಶಾಂತಿ ನೆಲೆಸುವುದಿಲ್ಲವೆಂದು ಅವರು ಸ್ಪಷ್ಟಪಡಿಸಿದರು.

ದೇಶದ ಸರ್ವ ಜನರ ಏಳ್ಗೆಗೆ ಬೇಕಾಗಿರುವುದು ರಾಮಾಯಣದ ರಾಮನ ಚಿಂತನೆಗಳಲ್ಲ. ಇಡೀ ಜಗತ್ತಿಗೆ ಮೊಟ್ಟ ಮೊದಲ ಬಾರಿಗೆ ಸಮಾನತೆಯ ತತ್ವ ವನ್ನು ಸಾರಿದ ಶರಣರ ಚಿಂತನೆಗಳು. ಆದರೆ, ಇತ್ತೀಚಿಗೆ ಶರಣ ಚಿಂತನೆಗಳನ್ನು ತಿರುಚಿ, ಕೋಮು ವಾದಿಕರಣಗೊಳಿಸಲಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಡಾ.ಶಿವಮೂರ್ತಿ ಮುರುಘಾ ಶರಣರು ಶೈಕ್ಷಣಿಕ, ಸಾಹಿತ್ಯ ಹಾಗೂ ಧಾರ್ಮಿಕ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಅನನ್ಯ. ಅವರು ಇಲ್ಲಿಯವರೆಗೂ 51ಕೃತಿಗ ಳನ್ನು ರಚಿಸಿದ್ದಾರೆ. ಅವರ ಕೃತಿಗಳು ವೈಚಾರಿಕತೆಯಿಂದ ಕೂಡಿದ್ದು, ಭಕ್ತಾಧಿಗಳ ಚಿಂತನೆಯನ್ನು ವಿಸ್ತರಿಸುವಲ್ಲಿ ದೊಡ್ಡ ಕೊಡುಗೆ ನೀಡುತ್ತಿವೆ ಎಂದು ಅವರು ವಿಶ್ಲೇಷಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಕೇಂದ್ರ ಸಚಿವ ಹಾಗೂ ಸಂಸದ ಡಾ.ಎಂ. ವೀರಪ್ಪ ಮೊಯ್ಲಿ ಮಾತನಾಡಿ, ಜಾತಿ ವ್ಯವಸ್ಥೆ ದೇಶದ ಚಿಂತನಾ ಶೀಲ ಪ್ರಗತಿಯನ್ನು ಸ್ಥಗಿತಗೊಳಿಸಿದೆ. ಜಾತಿಯಿರುವ ವರೆಗೂ ಸೃಜನಾತ್ಮಕ ಚಿಂತನೆಗಳು ಮೊಳೆಯುವುದಿಲ್ಲ. ಇದನ್ನು ಮನಗೊಂಡು ಬಸವಣ್ಣ ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿ, ಹೊಸ ಸಮಾಜವನ್ನು ಹುಟ್ಟು ಹಾಕಿದರು. ಆದರೆ, ಆ ಹೊಸ ಸಮಾಜವೇ ಈಗ ದೊಡ್ಡ ಜಾತಿ ವ್ಯವಸ್ಥೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

‘ಹಿಂದೂ’ ಎಂಬ ಪದವು ಭಾರತದಲ್ಲ. ಅದು ವಿದೇಶಿಯರು ನಮಗಿಟ್ಟ ಹೆಸರು. ಆ ಪದಕ್ಕೆ ಸಂಸ್ಕೃತಿಯಾಗಲಿ, ಐತಿಹಾಸಿಕ ಹಿನ್ನೆಲೆಯಿಲ್ಲ. ಆದರೂ, ಕೆಲ ಸಂಘಟನೆಗಳು ಈ ಪದವನ್ನು ಬಳಸಿಕೊಂಡು ದೇಶವನ್ನು ಒಡೆಯುವ, ಗಲಭೆ ಸೃಷ್ಟಿಸಿ, ಸಂವಿಧಾನವನ್ನೆ ಬುಡಮೇಲು ಮಾಡುವ ಕೃತ್ಯದಲ್ಲಿ ತೊಡಗಿದ್ದಾರೆಂದು ಅವರು ಕಿಡಿಕಾರಿದರು.

ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಸ್ವಾಮೀಜಿಯಾಗಿರುವುದರಿಂದ ಮಕ್ಕಳ ಸಂತಾನ ನನಗಿಲ್ಲ. ಆದರೆ, ಪುಸ್ತಕ ಸಂತಾನವಿದೆ. ಬರೆಯುವುದರ ಮೂಲಕ ಜೀವನಾನುಭವನ್ನು ಹೆಚ್ಚಿಸಿಕೊಂಡು, ಮತ್ತೊಬ್ಬರಿಗೆ ಹಂಚುತ್ತಿದ್ದೇನೆ. ಬರವಣಿಗೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡರೆ ಉತ್ತಮ ಬರಹ ಶೈಲಿಯನ್ನು ರೂಢಿಸಿಕೊಳ್ಳಬಹುದು ಎಂದು ತಿಳಿಸಿದರು. ಈ ವೇಳೆ ಅನಿಕೇತನ ಕನ್ನಡ ಬಳಗದ ಮಾಯಣ್ಣ, ಎಸ್‌ಜೆಎಂ ವಿದ್ಯಾಪೀಠದ ಉ ಪಾಧ್ಯಕ್ಷ ಪ್ರೊ.ಎಸ್.ಎಚ್.ಪಟೇಲ್ ಮತ್ತಿತರರು ಹಾಜರಿದ್ದರು.

Write A Comment