ಕರ್ನಾಟಕ

ನಿಧಿ ಕದಿಯಲು ಬಂದ ಪೂಜಾರಿಯ ಕೊಲೆ

Pinterest LinkedIn Tumblr

pujari-murder

ನೆಲಮಂಗಲ/ದಾಬಸ್‍ಪೇಟೆ ,ಸೆ.23-ನಿಧಿ ಪೂಜೆಗೆ ಬಂದ ಪೂಜಾರಿಯೇ ಬಲಿಯಾಗಿರುವ ಘಟನೆ ಮುಂಜಾನೆ ನಡೆದಿದೆ. ದಾಬಸ್‍ಪೇಟೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿಧಿ ಪೂಜೆಗೆ ಬಂದ ಪೂಜಾರಿಯನ್ನು ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ಬೆಂಗಳೂರಿನ ಸಿದ್ಧಾಪುರ ವಾಸಿ ನಾಗರಾಜ್ (35) ಕೊಲೆಯಾಗಿರುವ ಪೂಜಾರಿ.

ನಾಗರಾಜ್ ಅವರು ಮಾಂತ್ರಿಕರಾಗಿದ್ದು, ರಾತ್ರಿ ಮನೆಗೆ ಬಂದ ನಾಲ್ವರು ಪೂಜೆ ಇದೆ ಎಂದು ಕರೆದೊಯ್ದಿದ್ದು ಇಂದು ಮುಂಜಾನೆ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ದಾರಿಹೋಕರು ಶವ ಕಂಡು ದಾಬಸ್‍ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪಿಎಸ್‍ಐ ಮಾರುತಿ ಅವರು ಪರಿಶೀಲನೆ ನಡೆಸಿದಾಗ ಕೊಲೆಯಾದ ಪೂಜಾರಿಯ ಪ್ಯಾಂಟ್ ಜೇಬಿನಲ್ಲಿ ನಿಂಬೆಹಣ್ಣು , ಕುಂಕುಮ, ಮೊಬೈಲ್, ಪೇಪರ್ ಸಿಕ್ಕಿದ್ದು, ಇದರ ಆಧಾರದ ಮೇಲೆ ಗುರುತು ಪತ್ತೆಹಚ್ಚಿದ್ದಾರೆ. ಈ ಮಧ್ಯೆ ಕೊಲೆ ನಡೆದಿರುವ ಸ್ಥಳದಿಂದ ಎಂಟು ಕಿ.ಮೀ ದೂರದಲ್ಲಿ ಶಿವಗಂಗೆ ಸಮೀಪ ನಿಧಿಗಾಗಿ ಪೂಜೆ ನಡೆಸಿ ಮಣ್ಣು ಅಗೆದಿರುವುದು ಬೆಳಕಿಗೆ ಬಂದಿದೆ.

ಅಮವಾಸ್ಯೆ ಹಿಂದಿನ ರಾತ್ರಿ ನಿಧಿಗಾಗಿ ಪೂಜೆ ನಡೆಸಿರುವುದು ಖಚಿತವಾಗಿದ್ದು, ಮಣ್ಣು ಅಗೆದ ಸ್ಥಳದಲ್ಲಿ ನಿಧಿ ಸಿಕ್ಕಿದೆಯೋ ಇಲ್ಲವೋ ತಿಳಿದಿಲ್ಲ. ಇದೇ ವಿಚಾರದಲ್ಲಿ ಪೂಜಾರಿ ಹಾಗೂ ನಿಧಿ ಶೋಧಕ್ಕೆ ಬಂದವರ ನಡುವೆ ಜಗಳವಾಗಿ ಈ ಕೊಲೆ ನಡೆದಿರಬಹುದು ಎಂದು ಪೆÇಲೀಸರು ಶಂಕಿಸಿದ್ದಾರೆ. ದಾಬಸ್‍ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Write A Comment