ಕರ್ನಾಟಕ

ದಸರಾ ಮಹೋತ್ಸವದ ಚಿನ್ನದ ಅಂಬಾರಿಗೆ 15 ಕೋಟಿ ವಿಮೆ

Pinterest LinkedIn Tumblr

Ambari

ಮೈಸೂರು, ಸೆ.30; ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯ ಆಕರ್ಷಣೆಯಾದ ಅಂಬಾರಿಗೆ 15.05 ಕೋಟಿ ರೂ. ವಿಮೆ ಮಾಡಿಸಲಾಗಿದೆ. 750 ಕೆಜಿ ತೂಕದ ಚಿನ್ನದ ಅಂಬಾರಿ ಸಾಗುವ ಮಾರ್ಗದಲ್ಲಿ ಲಕ್ಷಾಂತರ ಮಂದಿ ಸೇರಿರುತ್ತಾರೆ. ಈ ವೇಳೆ ಏನಾದರು ಅವಘಡಗಳು ಸಂಭವಿಸಿದರೆ ಪ್ರಾಣಹಾನಿ, ಆಸ್ತಿಪಾಸ್ತಿಹಾನಿ ಉಂಟಾದರೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ವಿಮೆ ಮಾಡಿಸಿದೆ. ಇಂದು ದಿ ನ್ಯೂವ್ ಇಂಡಿಯಾ ಇನ್ಷೂರೆನ್ಸ್ ಕಂಪೆನಿಯೊಂದಿಗೆ ಜಿಲ್ಲಾಡಳಿತ ಒಪ್ಪಂದ ಮಾಡಿಕೊಂಡು ಪ್ರೀಮಿಯಮ್ ಮೊತ್ತ 93,00,888ರೂಗಳನ್ನು ಪಾವತಿಸಿತು.

Write A Comment