ಕರ್ನಾಟಕ

ಜೈಲಲ್ಲಿರುವ ಜಯಲಲಿತಾಗೆ ಮತ್ತೊಂದು ಸಂಕಷ್ಟ..!

Pinterest LinkedIn Tumblr

jayalalitha-cry

ಚೆನ್ನೈ, ಸೆ.30: ಅಕ್ರಮ ಆಸ್ತಿ ಸಂಪಾದನೆ ಸಂಬಂಧ ವಿಶೇಷ ಕೋರ್ಟ್‍ನಿಂದ ನಾಲ್ಕು ವರ್ಷ ಕಾರಾಗೃಹ ಶಿಕ್ಷೆಗೆ ಒಳಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾಗೆ ಮತ್ತಷ್ಟು ಸಂಕಷ್ಟಗಳು ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ಇದೀಗ ಜಯಲಲಿತಾ ತಮಿಳುನಾಡಿನ ಆರು ಪ್ರತಿಷ್ಠಿತ ಕಂಪೆನಿಗಳಲ್ಲಿ ಸುಮಾರು ಮೂರು ಸಾವಿರ ಎಕರೆ ಜಮೀನು ಖರೀದಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

1990-96ರ ಅವಧಿಯಲ್ಲಿ ಜಯಲಲಿತಾ ಈ ಜಮೀನನ್ನು ಖರೀದಿ ಮಾಡಿರುವುದು ವಿಶೇಷವಾಗಿದೆ. ಲಕ್ಸ್ ಪ್ರಾಪರ್ಟಿ ಡೆವಲಪ್‍ಮೆಂಟ್, ರಾಮ್‍ರಾಜ್ ಆಗ್ರೋಮಿಲ್ಸ್, ಮೆಡೋ ಆಗ್ರೋಫಮ್ರ್ಸ್, ರಿವರ್ ವೇ ಆಗ್ರೋ ಪ್ರಾಡೆಕ್ಟ್ಸ್, ಇಂಡೋ-ದೋಹಾ ರಸಾಯನ ಮತ್ತು ರಸಗೊಬ್ಬರ ಮತ್ತು ಸಿಂಗೋರ ಬಿಜಿನೆಸ್ ಎಂಟರ್‍ಪ್ರೈಸಸ್ ಕಂಪೆನಿಗಳ ಮೂಲಕ ಮೂರು ಸಾವಿರ ಎಕರೆ ಜಮೀನನ್ನು ಖರೀದಿ ಮಾಡಿದ್ದಾರೆ.

ಈ ಎಲ್ಲ ಕಂಪೆನಿಗಳಿಗೆ ಒಂದು ಕಾಲದ ಜಯಲಲಿತಾ ಅವರ ಆಪ್ತ ಗೆಳತಿ ಇಂದಿನ ಶಿಕ್ಷೆಗೆ ಪ್ರಮುಖ ಕಾರಣಕರ್ತೆ ಎನ್ನಲಾದ ಶಶಿಕಲಾ ಮತ್ತು ಅವರ ಸಂಬಂಧಿಕರೇ ಈ ಎಲ್ಲ ಕಂಪೆನಿಗಳಿಗೂ ನಿರ್ದೇಶಕರಾಗಿದ್ದಾರೆ. ಈ ಕಂಪೆನಿಗಳಿಗೆ ಜಯಲಲಿತಾ ಎಲ್ಲಿಯೂ ನೇರವಾಗಿ ಪ್ರಭಾವ ಬೀರಿಲ್ಲವಾದರೂ ಶಶಿಕಲಾ ನಿರ್ದೇಶಕರಾಗಿರುವುದು ಸ್ಪಷ್ಟ. 1990-96ರ ಅವಧಿಯಲ್ಲಿ ಶಶಿಕಲಾ ಮತ್ತು ಜಯಲಲಿತಾ ಎಷ್ಟು ಅನ್ಯೋನ್ಯವಾಗಿದ್ದರೆಂದರೆ ಒಂದೇ ತಟ್ಟೆಯಲ್ಲಿ ಊಟ ಮಾಡುವಷ್ಟು ಸಂಬಂಧ ಗಟ್ಟಿಯಾಗಿತ್ತು. ಆಸ್ತಿ ಖರೀದಿಸಿದ ಕಂಪೆನಿಗಳಿಗೆ ಶಶಿಕಲಾ-ಜಯಾ ಪಬ್ಲಿಕೇಷನ್ಸ್ ಮತ್ತು ಶಶಿ ಎಂಟರ್‍ಪ್ರೈಸಸ್ ಮೂಲಕವೇ ಹಲವಾರು ಚೆಕ್‍ಗಳನ್ನು ನೀಡಲಾಗಿದೆ. ಈ ಎಲ್ಲ ಚೆಕ್‍ಗಳಿಗೂ ಜಯಲಲಿತಾ ಅವರೇ ಸಹಿ ಹಾಕಿರುವುದು ಬೆಳಕಿಗೆ ಬಂದಿದೆ.

ಜಯಾ ಎಂಟರ್‍ಪ್ರೈಸಸ್ ಮೂಲಕ ಎಐಎಡಿಎಂಕೆ ಪಕ್ಷದ ಮುಖವಾಣಿಯನ್ನು ಪ್ರಕಟಿಸಲಾಗುತ್ತದೆ. ನಾವು ಪಕ್ಷದ ಕಾರ್ಯಕರ್ತರಿಂದ 14 ಕೋಟಿ ಹಣವನ್ನು ಸಂಗ್ರಹಿಸಿದ್ದೆವು. ಅದರ ಮೂಲಕ ಜಮೀನು ಖರೀದಿ ಮಾಡಿದ್ದೇವೆಂಬುದು ಅವರ ಕಾರ್ಯಕರ್ತರೊಬ್ಬರ ಅಭಿಪ್ರಾಯ. ಆದರೆ, ಅಧಿಕಾರ ದುರುಪಯೋಗಪಡಿಸಿಕೊಂಡೇ ಇಷ್ಟು ದೊಡ್ಡ ಮೊತ್ತದ ಜಮೀನು ಖರೀದಿ ಮಾಡಲಾಗಿದೆ ಎಂಬುದು ಡಿಎಂಕೆ ಕಾರ್ಯಕರ್ತರ ಆರೋಪ.

Write A Comment