ಹುಬ್ಬಳ್ಳಿ: ‘ನ್ಯಾಯಾಂಗ ವ್ಯವಸ್ಥೆಯಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಮಹಿಳೆಗೆ ಇನ್ನೂ ಅವಕಾಶಗಳು ಸಿಗುತ್ತಿಲ್ಲ. ಯಶಸ್ವಿ ಮಹಿಳಾ ವಕೀಲರ ಸಂಖ್ಯೆಯೂ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ. ಇಂಥ ಸ್ಥಿತಿಯಲ್ಲಿ ಬದಲಾವಣೆ ತರಲು ಕಾನೂನು ಕ್ಷೇತ್ರ ಮುಂದಾ ಗಬೇಕು’ ಎಂದು ರಾಜ್ಯಸಭಾ ಸದಸ್ಯ ಹಾಗೂ ಮಾಜಿ ಅಟಾರ್ನಿ ಜನರಲ್ ಕೆ.ಪರಾಶರನ್ ಶನಿವಾರ ಆಶಿಸಿದರು.
ರಾಜ್ಯ ಕಾನೂನು ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ಘಟಿಕೋ ತ್ಸವ ಭಾಷಣ ಮಾಡಿದ ಅವರು, ‘ಸಾಕಷ್ಟು ಜವಾಬ್ದಾರಿಗಳನ್ನು ನಿಭಾಯಿ ಸಬಲ್ಲ ಮಹಿಳೆಯು ಕಾನೂನು ಕ್ಷೇತ್ರ ದಲ್ಲೂ ಕೆಲಸ ಮಾಡಲು ಸಮರ್ಥಳು ಎಂಬುದನ್ನು ಬಿಂಬಿಸಲು ಇನ್ನೂ ಸಮಾಜಕ್ಕೆ ಸಾಧ್ಯವಾಗಿಲ್ಲ’ ಎಂದು ವಿಷಾದಿಸಿದರು.
‘ಮಹಾಭಾರತದಲ್ಲಿ ದ್ರೌಪದಿ, ತಮಿಳು ಪುರಾಣದಲ್ಲಿ ಕನ್ನಗಿ ಮುಂತಾ ದವರು ಉತ್ತಮವಾಗಿ ವಾದ ಮಂಡಿ ಸಿದ ಉದಾಹರಣೆಗಳಿವೆ. ವಸ್ತ್ರಾಪ ಹರಣದ ಸಂದರ್ಭದಲ್ಲಿ ದ್ರೌಪದಿ ಎತ್ತಿದ ಅನೇಕ ಪ್ರಶ್ನೆಗಳಿಗೆ ಉತ್ತರವೇ ಇಲ್ಲ ಎಂಬುದನ್ನು ಚಿಂತಕರು ಹೇಳಿ ದ್ದಾರೆ. ಹೀಗಿರುವಾಗ ಆಧುನಿಕ ಮಹಿ ಳೆಗೆ ಅವಕಾಶ ಸಿಗದಿರಲು ಕಾರಣ ವೇನು ಎಂಬುದಕ್ಕೆ ಉತ್ತರ ಕಂಡುಕೊ ಳ್ಳಬೇಕಾಗಿದೆ’ ಎಂದರು.
‘ಆಸ್ತಿ ಹಕ್ಕಿಗೆ ಸಂಬಂಧಿಸಿದಂತೆ ಮಹಿ ಳೆಯನ್ನು ಕನಿಷ್ಠವಾಗಿ ನಡೆಸಿಕೊ ಳ್ಳಲಾ ಗುತ್ತಿದೆ.
ಆಕೆ ನಿರಂತರವಾಗಿ ತಾರ ತಮ್ಯಕ್ಕೆ ಒಳಗಾಗುತ್ತಿದ್ದಾಳೆ. ಕಾನೂನಿನ ಅಂಶಗಳನ್ನು ತಪ್ಪಾಗಿ ಗ್ರಹಿಸಿದ್ದೇ ಇದಕ್ಕೆ ಕಾರಣ’ ಎಂದು ಅವರು ಉದಾಹರಣೆ ಸಹಿತ ಹೇಳಿದರು. ರಾಜೇಂದ್ರ ಬಾಬು, ಅಜ್ಜಪ್ಪಗೆ ಗೌರವ ಡಾಕ್ಟರೇಟ್: ಸುಪ್ರಿಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಸ್.ರಾಜೇಂದ್ರ ಬಾಬು ಮತ್ತು ಧಾರವಾಡದ ಕರ್ನಾ ಟಕ ವಿ.ವಿ ಕಾನೂನು ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಜಿ.ವಿ.ಅಜ್ಜಪ್ಪ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡ ಲಾಯಿತು.
ಒಂಬತ್ತು ಮಂದಿಗೆ ಚಿನ್ನದ ಪದಕ: ಮೂರು ವರ್ಷಗಳ ಎಲ್‌ಎಲ್‌ಬಿಯಲ್ಲಿ ಪ್ರಥಮ ರ್‍್ಯಾಂಕ್ ಗಳಿಸಿದ ಜೆ.ಸಾಲೊ ಮನ್, ಐದು ವರ್ಷಗಳ ಬಿಎ;ಎಲ್ ಎಲ್‌ಬಿಯಲ್ಲಿ ಪ್ರಥಮ ರ್‍್ಯಾಂಕ್ ಗಳಿಸಿದ ರಾಧಿಕಾ ಬಜಾಜ್, ಐದು ವರ್ಷಗಳ ಬಿಬಿಎ; ಎಲ್‌ಎಲ್‌ಬಿಯಲ್ಲಿ ಪ್ರಥಮ ರ್‍್ಯಾಂಕ್ ಗಳಿಸಿದ ಅದಿತಿ ಜೋಶಿ, ಎಲ್ ಎಲ್‌ಎಂನಲ್ಲಿ ಪ್ರಥಮ ರ್‍್ಯಾಂಕ್ ಗಳಿಸಿದ ಸಿ.ಜಯಶ್ರೀ, ಗಾಯತ್ರಿ ಕಠಾರೆ ಮತ್ತು ವಿವೇಕಾನಂದ ಅವರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು.
ಕನ್ನಡ ಮಾಧ್ಯಮದಲ್ಲಿ ಪ್ರಥಮ ರ್‍್ಯಾಂಕ್ ಗಳಿಸಿದ ಎಚ್.ಎನ್.ಭಾರತಿ, ಲಕ್ಷ್ಮಿ ಮಿರ್ಜಿ ಮತ್ತು ಆಶಾಲತಾ ಅವ ರಿಗೂ ಪ್ರಮಾಣ ಪತ್ರ ವಿತರಿಸಲಾ ಯಿತು. ರಾಜ್ಯಪಾಲ ಹಾಗೂ ವಿ.ವಿಗಳ ಕುಲಾಧಿಪತಿ ವಜುಭಾಯಿ ವಾಲಾ ಅಧ್ಯಕ್ಷತೆ ವಹಿಸಿದ್ದರು. ಕಾನೂನು ಸಚಿವ ಟಿ.ಬಿ.ಜಯ ಚಂದ್ರ, ಕುಲಪತಿ ಡಾ.ಟಿ. ಆರ್. ಸುಬ್ರಹ್ಮಣ್ಯ, ಟಿ.ವಿ.ಮಂಜು ನಾಥ, ಪ್ರೊ.ಬಿ.ಎಸ್. ರೆಡ್ಡಿ, ಡೀನ್ ಸಿ.ಎಸ್. ಪಾಟೀಲ ಇದ್ದರು.
ರ್‍ಯಾಂಕ್ ವಿಜೇತರ ಅಸಮಾಧಾನ
ಘಟಿಕೋತ್ಸವ ಮುಗಿದು ಗಣ್ಯರು ಹೊರ ಹೋದ ಕೂಡಲೇ ರ್‍್ಯಾಂಕ್ ವಿಜೇತ ನಾಲ್ಕು ಮಂದಿ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಮಾಧ್ಯಮದವರ ಮುಂದೆ ದೂರಿದರು. ಬೆಂಗಳೂರಿನ ಲಕ್ಷ್ಮಿದೇವಮ್ಮ, ಪ್ರಥಮ್, ರಸೂಲ್ ಮತ್ತು ಮೈಸೂರಿನ ಮಹದೇವಸ್ವಾಮಿ ‘ಮೊದಲ ಹತ್ತು ರ್‍್ಯಾಂಕ್ ಗಳಿಸಿದವರನ್ನು ವೇದಿಕೆಗೆ ಕರೆದು ಗೌರವಿಸುತ್ತಾರೆ ಎಂದು ತಿಳಿದಿದ್ದೆವು. ಆದರೆ ಇಲ್ಲಿ ಅಂಗಡಿಯಲ್ಲಿ ದಿನಸಿ ಖರೀದಿಸಿದಂತೆ ಪ್ರಮಾಣಪತ್ರ ಪಡೆಯುವ ಸ್ಥಿತಿ ಬಂದಿದೆ. ಇದರಿಂದ ಬೇಸರವಾಗಿದೆ’ ಎಂದರು.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಮೌಲ್ಯಮಾಪನ ಕುಲಸಚಿವ ಬಿ.ಎಸ್.ರೆಡ್ಡಿ ‘ನಾಲ್ಕು ವರ್ಷಗಳ ಘಟಿಕೋತ್ಸವವನ್ನು ಒಂದೇ ಬಾರಿ ಮಾಡಿದ್ದರಿಂದ ಸಮಯ ಸಾಕಾಗಲಿಲ್ಲ. ಹೀಗಾಗಿ ಚಿನ್ನದ ಪದಕ ಮತ್ತು ಪ್ರಥಮ ರ್‍್ಯಾಂಕ್ ಗಳಿಸಿದವರನ್ನು ಹಾಗೂ ನಗದು ಬಹುಮಾನಕ್ಕೆ ಅರ್ಹರಾದವರನ್ನು ಮಾತ್ರ ವೇದಿಕೆಗೆ ಕರೆಯಲಾಗಿತ್ತು. ಉದ್ದೇಶಪೂರ್ವಕವಾಗಿ ಯಾರನ್ನೂ ಕಡೆಗಣಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.