ಕರ್ನಾಟಕ

ಭಜನೆ ಮಾಡುತ್ತಾ ಸದನಕ್ಕೆ ಆಗಮಿಸಿದ ಶಾಸಕ

Pinterest LinkedIn Tumblr

Belagavi

ಬೆಳಗಾವಿ, ಡಿ.9: ಪ್ರಜಾಪ್ರಭುತ್ವದ ದೇಗುಲವಾದ ರಾಜ್ಯ ವಿಧಾನಸಭೆಯಲ್ಲಿ ಇಂದು ಕಂಡು ಬಂದ ದೃಶ್ಯವಿದು. ಬೆಂಗಳೂರು ಮಹಾನಗರದ ಹೆಬ್ಬಾಳ ಕ್ಷೇತ್ರದ ಶಾಸಕ ಜಗದೀಶ್‌ಕುಮಾರ್ ಅವರು ತಮ್ಮ ಕುತ್ತಿಗೆಗೆ ಮಹಾತ್ಮಾಗಾಂಧಿಯ ಭಾವಚಿತ್ರವನ್ನು ನೇತು ಹಾಕಿಕೊಂಡು ಭಜನೆ ಮಾಡುತ್ತಾ ಆಗಮಿಸಿದರು.

ಜಗದೀಶ್‌ಕುಮಾರ್ ಅವರು ಗೌರವಾನ್ವಿತ ಜನಪ್ರತಿನಿಧಿ. ಪ್ರಜೆಗಳು ಮಹತ್ತರವಾದ ನಿರೀಕ್ಷೆಗಳನ್ನು ಇಟ್ಟುಕೊಂಡು ಇವರನ್ನು ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸಿದ್ದಾರೆ. ಅಂತಹ ಜನರ ಯೋಗಕ್ಷೇಮದ ಹೊಣೆ ಹೊತ್ತಿರುವ ಶಾಸಕ ಜಗದೀಶ್‌ಕುಮಾರ್ ಅವರ ವರ್ತನೆ ಹಾಸ್ಯಾಸ್ಪದವಾಗಿತ್ತು.

ಪದೇ ಪದೇ ಟಿವಿ ಕ್ಯಾಮೆರಾ ಕಡೆ ನೋಡುತ್ತಿದ್ದ ಅವರ ಉದ್ದೇಶವು ಅಗ್ಗದ ಪ್ರಚಾರ ಪಡೆಯುವುದಷ್ಟೇ ಆಗಿತ್ತು. ಇವರ ಈ ವರ್ತನೆಯು ಮತದಾರರಿಗೆ ಮಾಡಿದ ಅವಮಾನ. ಅವರ ಕೊರಳಲ್ಲಿ ನೇತಾಡುತ್ತಿದ್ದ ರಾಷ್ಟ್ರಪಿತನ ಭಾವಚಿತ್ರಕ್ಕೆ ಮಾಡಿದ ಅಪಮಾನ. ಸದನ ಕಲಾಪ ವೀಕ್ಷಿಸಿದ ಬಹಳಷ್ಟು ಜನರ ಅಭಿಪ್ರಾಯ ಇದು. ಸದನದ ಸಮಯವನ್ನು ವ್ಯರ್ಥಮಾಡಿ ಈ ರೀತಿ ಅಗ್ಗದ ಪ್ರಚಾರ ಪಡೆಯುವ ಕೆಲಸವನ್ನು ಯಾರೊಬ್ಬರೂ ಮಾಡಬಾರದು.

Write A Comment