ಕರ್ನಾಟಕ

ಮೆಹದಿ ಐದು ದಿನ ಪೊಲೀಸ್‌ ವಶಕ್ಕೆ; ಮಡಿವಾಳದ ವಿಶೇಷ ತನಿಖಾ ಕೊಠಡಿಯಲ್ಲಿ ದಿನವಿಡೀ ವಿಚಾರಣೆ

Pinterest LinkedIn Tumblr

Mehdi11

ಬೆಂಗಳೂರು: ಇಸ್ಲಾಮಿಕ್ ಸ್ಟೇಟ್‌ (ಐ.ಎಸ್‌) ಭಯೋತ್ಪಾದನಾ ಸಂಘಟನೆ ಕುರಿತ ‘@shami witness’ ಟ್ವಿಟರ್ ಖಾತೆ ನಿರ್ವಹಣೆ ಮಾಡುತ್ತಿದ್ದ ಆರೋಪದ ಮೇಲೆ ಬಂಧಿತನಾಗಿರುವ ಮೆಹದಿ ಮಸ್ರೂರ್ ಬಿಸ್ವಾಸ್‌ನನ್ನು ಐದು ದಿನಗಳ ಕಾಲ ಕಸ್ಟಡಿಗೆ ಪಡೆದಿ­ರುವ ಪೊಲೀಸರು, ಮಡಿವಾಳದ ವಿಶೇಷ ತನಿಖಾ ಕೊಠಡಿಯಲ್ಲಿ ಭಾನು­ವಾರ ದಿನವಿಡೀ ವಿಚಾರಣೆ ನಡೆಸಿದರು.

ಶನಿವಾರ ರಾತ್ರಿ 12.30ಕ್ಕೆ ಆರೋಪಿ­ಯನ್ನು ನ್ಯಾಯಾಧೀಶರ ಮನೆಗೆ ಹಾಜರು­ಪಡಿಸಿದ ಸಿಸಿಬಿ ಪೊಲೀಸರು, ಹೆಚ್ಚಿನ ವಿಚಾರಣೆಯ ಅಗತ್ಯವಿರು­ವುದ­ರಿಂದ 15 ದಿನಗಳ ಕಾಲ ವಶಕ್ಕೆ ನೀಡು­ವಂತೆ ಕೋರಿದರು. ಆದರೆ, ನ್ಯಾಯಾ­­ಧೀಶರು, ಮೆಹದಿಯನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದರು.

‘ಕೇಂದ್ರ ಅಪರಾಧ ವಿಭಾಗ (ಸಿಸಿಬಿ), ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಹಾಗೂ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಆರೋಪಿ­ಯನ್ನು ವಿಚಾರಣೆ ಮಾಡುತ್ತಿದ್ದಾರೆ. ಟ್ವಿಟರ್‌ನಲ್ಲಿ ಜಿಹಾದಿ ನಿಲುವು ಪಸರಿಸುತ್ತಿದ್ದುದರ ಹಿಂದಿನ ಉದ್ದೇಶ, ಐ.ಎಸ್‌ ಉಗ್ರರ ಜತೆಗಿನ ಸಂಪರ್ಕ, ಟ್ವಿಟರ್‌ ನಿರ್ವಹಣೆಗೆ ಯಾರಿಂದ­ಲಾದರೂ ಹಣ ಬರುತ್ತಿತ್ತೇ ಎಂಬ ಬಗ್ಗೆ ವಿಚಾರಿಸಲಾಗುತ್ತಿದೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

‘ಸಿರಿಯಾ ಹಾಗೂ ಇರಾಕ್ ದೇಶ­ಗಳ ಬಗ್ಗೆ ಅಪಾರ ಕಾಳಜಿ ಇದ್ದುದರಿಂದ ಐ.ಎಸ್ ಸಂಘಟನೆಯತ್ತ ಆಕರ್ಷಿತ­ನಾಗಿ ಟ್ವಿಟರ್ ನಿರ್ವಹಣೆ

ಪೋಷಕರ ವಿಚಾರಣೆ
‘ಭಾನುವಾರ ಬೆಳಿಗ್ಗೆ ಮೆಹದಿಯ ಪೋಷಕರನ್ನು ಮೊಬೈಲ್ ಮೂಲಕ ಸಂಪರ್ಕಿ­ಸಲಾಗಿದೆ. ಕೋಲ್ಕತ್ತ­ದಲ್ಲಿರುವ ಅವರು ಸೋಮವಾರ ಮಧ್ಯಾಹ್ನ­ದೊಳಗೆ ನಗರಕ್ಕೆ ಬರುವುದಾಗಿ ಹೇಳಿದ್ದಾರೆ. ತನಿಖೆಗೆ ಪೂರಕವಿರುವ ಅಂಶಗ­ಳನ್ನು ಅವರಿಂದ ಪಡೆದುಕೊಳ್ಳ­ಲಾಗಿದೆ. ಇದೇ ವೇಳೆ ಮೆಹದಿ ಕೂಡ ಪೋಷಕರ ಜತೆ ಮಾತನಾಡಿದ್ದಾನೆ’ ಎಂದು ಸಿಸಿಬಿ ಅಧಿಕಾರಿಗಳು  ತಿಳಿಸಿದರು.

ಆಗಾಗ್ಗೆ ಮೈಸೂರಿಗೆ ಭೇಟಿ
‘ಮೆಹದಿ ಆಗಾಗ್ಗೆ ಮೈಸೂರಿಗೆ ಹೋಗಿ ಬರುತ್ತಿದ್ದ. ಯಾವ ಕಾರಣಕ್ಕೆ ಅಲ್ಲಿಗೆ ತೆರಳುತ್ತಿದ್ದ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವ್ಯಕ್ತಿಗಳಿಂದ ಆತನಿಗೆ ನೆರವು ಸಿಕ್ಕಿತ್ತೇ ಹಾಗೂ ರಾಜ್ಯದಲ್ಲಿ ಉಗ್ರರ ಸ್ಲೀಪರ್‌ ಸೆಲ್‌ಗಳು ಸಕ್ರಿಯ­ವಾಗಿದ್ದವೆ ಎಂಬ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ. ಜತೆಗೆ ‘@shami witness’ ಖಾತೆಯನ್ನು ಅನುಸರಿಸುತ್ತಿದ್ದ 17,000 ಮಂದಿಯ ಪೂರ್ವಾಪರ ಪರಿಶೀಲಿಸಲಾಗುತ್ತಿದೆ’
– ಹೇಮಂತ್‌ ನಿಂಬಾಳ್ಕರ್‌, ಜಂಟಿ ಪೊಲೀಸ್ ಕಮಿಷನರ್

ಮಾಡು­ತ್ತಿದ್ದೆ. ಯಾವ ಉಗ್ರರ ಜತೆಗೂ ಸಂಪರ್ಕ ಇಲ್ಲ. ಐ.ಎಸ್‌ ಸಂಘಟನೆಗೆ ಯಾರನ್ನೂ ಸೇರಿಸಿಲ್ಲ ಎಂದು ಆರೋಪಿ ಮೊದಲ ದಿನದ ವಿಚಾರಣೆಯಲ್ಲಿ ಪುನರುಚ್ಚರಿ­ಸಿದ್ದಾನೆ’ ಎಂದು ಅಧಿಕಾರಿ­ಗಳು ವಿವರಿ­ಸಿದರು.

ಟ್ವಿಟರ್ ಖಾತೆ ತೆರೆಯುವಾಗ ಉದ್ದೇಶ­­ಪೂರ್ವಕವಾಗಿ ವೈಯಕ್ತಿಕ ವಿವರಗಳನ್ನು ಮರೆಮಾಚಿದ ಬಗ್ಗೆಯೂ ತನಿಖಾಧಿಕಾರಿಗಳು ಪ್ರಶ್ನಿಸಿದ್ದಾರೆ. ‘ಐ.ಎಸ್‌ ಪರ ಬರಹಗಳನ್ನು ಪ್ರಕಟಿ­ಸುವ ಉದ್ದೇಶದಿಂದಲೇ ಈ ಖಾತೆ ತೆರೆದಿದ್ದೆ. ವೈಯಕ್ತಿಕ ವಿವರಗಳನ್ನು ಬಹಿರಂಗ­ಪಡಿಸಿದರೆ ಪ್ರಾಣಕ್ಕೆ ಅಪಾಯ­ವಿತ್ತು. ಜತೆಗೆ ಪೊಲೀಸರ ಭಯ ಕೂಡ ಇದ್ದುದ­ರಿಂದ ವಿವರಗಳನ್ನು ಪ್ರಕಟಿಸಿರ­ಲಿಲ್ಲ’ ಎಂದು ಮೆಹದಿ ಹೇಳಿರುವುದಾಗಿ ಅಧಿ­ಕಾರಿಗಳು ಮಾಹಿತಿ ನೀಡಿದರು.

‘ಆರೋಪಿ ಮೊಬೈಲ್ ಮತ್ತು ಲ್ಯಾಪ್‌­­ಟಾಪ್‌ ಎರಡರಿಂದಲೂ ಸಾಮಾಜಿಕ ಜಾಲ ತಾಣಗಳನ್ನು ಬಳಕೆ ಮಾಡುತ್ತಿದ್ದ. ಲ್ಯಾಪ್‌ಟಾಪ್‌ನ ಒಂದು ಫೋಲ್ಡರ್‌ನಲ್ಲಿ ಸಿರಿಯಾ– ಇರಾಕ್‌ ಯುದ್ಧಗಳು ಹಾಗೂ ಐ.ಎಸ್‌ ಸಂಘಟನೆಗೆ ಸೇರಿದ 1.2 ಜಿ.ಬಿಯಷ್ಟು ಮಾಹಿತಿ ಸಂಗ್ರಹಿಸಿದ್ದಾನೆ. ‘@shami witness’ ಖಾತೆಯ ಎಲ್ಲ ಟ್ವೀಟ್‌­ಗಳನ್ನು ಪರಾಮರ್ಶೆ ಮಾಡಲಾ­ಗು­ತ್ತಿದೆ. ಜತೆಗೆ ಈತ ಹೆಚ್ಚು ಸಂಭಾಷಣೆ ನಡೆ­­ಸಿರುವ ವ್ಯಕ್ತಿಗಳ ಪೂರ್ವಾಪರ ಬಗ್ಗೆಯೂ ವಿವರ ಪಡೆಯಲಾಗುತ್ತಿದೆ. ಆತನ ಬ್ಯಾಂಕ್‌ ಖಾತೆಯನ್ನು ಪರಿಶೀ­ಲಿ­ಸ­ಲಾಗಿದ್ದು, ಯಾವುದೇ ಉಗ್ರ ಸಂಘ­ಟ­ನೆಯಿಂದ ಹಣ ಬಂದಿರುವ ಬಗ್ಗೆ ಈವ­ರೆಗೂ ಮಾಹಿತಿ ಇಲ್ಲ’ ಎಂದರು.

‘ಪ್ರಕರಣ ಸಂಬಂಧ ಸಿಸಿಬಿ ಎಸಿಪಿ ರವಿ­ಕುಮಾರ್ ಅವರು ದೂರು ಕೊಟ್ಟಿ­ದ್ದಾರೆ. ಸಿಸಿಬಿ ವಿಶೇಷ ತನಿಖಾ ದಳದ ಎಸಿಪಿ ತಮ್ಮಯ್ಯ ಅವರನ್ನು ತನಿಖಾ­ಧಿ­ಕಾ­ರಿಯನ್ನಾಗಿ ನೇಮಿಸ­ಲಾಗಿದೆ. ಭಾನು­ವಾರ ಬೆಳಗಿನ ಜಾವ ಮೆಹದಿಯನ್ನು ಜಾಲಹಳ್ಳಿಯ ಸುಜಾತಾ ಅಪಾರ್ಟ್‌­ಮೆಂಟ್‌ಗೆ ಮತ್ತೊಮ್ಮೆ ಕರೆದೊಯ್ದಿದ್ದ ತನಿಖಾ ತಂಡ, ಸ್ಥಳ ಪರಿಶೀಲನೆ ಮಾಡಿ ಕೆಲವು ಸಾಕ್ಷ್ಯಗಳನ್ನು ಪಡೆದು­ಕೊಂಡಿದೆ’ ಎಂದು ಹಿರಿಯ ಅಧಿಕಾರಿ­ಗಳು ಮಾಹಿತಿ ನೀಡಿದರು.

Write A Comment