ಕರ್ನಾಟಕ

ಓದಿಸುತ್ತೇನೆಂದು ಕರೆತಂದು ನಿರಂತರ ಅತ್ಯಾಚಾರ ಮಾಡಿದ ಇಂಜಿನಿಯರ್ !

Pinterest LinkedIn Tumblr

289052-rape-rna

ನಿಮ್ಮ ಮಗಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತೇನೆ ಎಂದು ದೂರದ ಸಂಬಂಧಿಕರ ಮಗಳನ್ನು ಮನೆಗೆ ಕರೆತಂದು ಓದಿಸುತ್ತಿದ್ದ ಇಂಜಿನಿಯರ್ ಒಬ್ಬ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ ಹೀನ ಕೃತ್ಯ ಬೆಳಕಿಗೆ ಬಂದಿದೆ.

ಮೈಸೂರು ಮೂಲದ ವೆಂಕಟೇಶ್ ಎಂಬಾತ ಬೆಂಗಳೂರಿನ ಐಟಿ ಕಂಪನಿಯೊಂದರ ಉದ್ಯೋಗಿಯಾಗಿದ್ದು ಕೆಲ ವರ್ಷಗಳ ಹಿಂದೆಯೇ ಮದುವೆಯಾಗಿದ್ದ. ಅದಾದ ಕೆಲದಿನಗಳ ಮೇಲೆ ಸಂಬಂಧಿಕರ ಬಾಲಕಿಗೆ ಉತ್ತಮ ಶಿಕ್ಷಣ ಕೊಡಿಸುತ್ತೇನೆ ಎಂದು ಆಕೆಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದ ಎನ್ನಲಾಗಿದೆ.

ಕೆಲತಿಂಗಳ ಹಿಂದಿನಿಂದ ತನ್ನ ಹೆಂಡತಿ ಮನೆಯಲ್ಲಿಲ್ಲದ ಸಮಯದಲ್ಲಿ ವೆಂಕಟೇಶ್ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದುದಲ್ಲದೇ ಒಪ್ಪದಿದ್ದರೆ ಹಲ್ಲೆ ಮಾಡಿ ಬೆದರಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಭಯಗೊಂಡಿದ್ದ ಬಾಲಕಿ ಸಮಾಜಕ್ಕೆ ಹೆದರಿ ಇಷ್ಟು ದಿನ ಸುಮ್ಮನಿದ್ದಳು ಎನ್ನಲಾಗಿದ್ದು ಮೈಸೂರಿನ ತನ್ನ ಮನೆಗೆ ಹೋದ ಸಂದರ್ಭದಲ್ಲಿ ಈ ಕಾಮುಕನ ಕ್ರೌರ್ಯದ ಕುರಿತು ತನ್ನ ತಾಯಿ ಬಳಿ ಹೇಳಿಕೊಂಡಿದ್ದಾಳೆ.

ತಕ್ಷಣ ಬಾಲಕಿಯ ತಾಯಿ ಲೈಂಗಿಕ ದೌರ್ಜನ್ಯ ನೀಡಿದ ಆರೋಪದಡಿಯಲ್ಲಿ ಪೊಲೀಸರಿಗೆ ದೂರು ನೀಡಿದ್ದು ಪೊಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಇಂಜಿನಿಯರ್ ನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

Write A Comment