ಕರ್ನಾಟಕ

ಚಕ್ರ ಸಾರಿಗೆ ಬಸ್‌ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

Pinterest LinkedIn Tumblr

pvec13 mh pura bus

ಮಹದೇವಪುರ: ‘ಸರಳ ಹಾಗೂ ಸುಲಭವಾಗಿ ನಗರದಲ್ಲಿ ಪ್ರಯಾಣ ಮಾಹಿತಿ ಯೋಜನೆಯನ್ನು ರೂಪಿಸಿ ಕೊಳ್ಳಬಹುದಾದ ಮೊಬೈಲ್‌ ಅಪ್ಲಿ ಕೇಷನ್‌ (ಬಿಎಂಟಿಸಿ ಆ್ಯಪ್‌) ರೂಪಿಸ ಲಾಗಿದೆ. ಈ ಯೋಜನೆಯಿಂದ ಪ್ರಯಾ ಣಿಕರು ಹತ್ತಿರದ ಬಸ್‌ ನಿಲುಗಡೆ ಅಥವಾ ಸ್ಥಳವನ್ನು ಪತ್ತೆ ಮಾಡಬ ಹುದಾಗಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಕ್ಷೇತ್ರದ ಐಟಿಪಿಎಲ್‌ ಗೇಟ್‌ ಬಳಿ ಸೋಮವಾರ 60 ನೇ ಬಸ್‌ ದಿನಾ ಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಚಕ್ರ ಸಾರಿಗೆ ಬಸ್‌ಗಳನ್ನು ಉದ್ಘಾಟಿಸಿ ಮಾತನಾಡಿದರು. ‘ಮೊದಲ ಬಾರಿಗೆ 200 ಬಸ್‌ಗಳಲ್ಲಿ ಇಂಟರ್‌ನೆಟ್‌ ಬಳಕೆಯನ್ನು ಪ್ರಯಾ ಣಿಕರಿಗೆ ಒದಗಿಸುವ ನಿಟ್ಟಿನಲ್ಲಿ ವೈಫೈ ಸೇವೆಯನ್ನು ಆರಂಭಿಸಲಾಗಿದೆ. ಈ ಸೇವೆಯನ್ನು ಮುಂದಿನ ದಿನಗಳಲ್ಲಿ ನಗರ ಭಾಗದ ವಿವಿಧೆಡೆ ಅಗತ್ಯವಿರುವ ಮಾರ್ಗಗಳಲ್ಲಿ ಸಂಚರಿಸುವ ಬಸ್‌ಗ ಳಲ್ಲಿಯೂ ಮುಂದುವರಿಸಲಾ ಗುವುದು. ಯಾವುದಕ್ಕೂ ಪ್ರಯಾಣಿಕರ ಪ್ರತಿಕ್ರಿಯೆಯನ್ನು ಎದುರು ನೋಡು ತ್ತೇವೆ’ ಎಂದು ಅವರು ತಿಳಿಸಿದರು.

‘ಇಂಧನ ಉಳಿತಾಯ, ಪರಿಸರ ಮಾಲಿನ್ಯ ನಿಯಂತ್ರಿಸುವಲ್ಲಿ ಹಾಗೂ ಸಂಚಾರ ದಟ್ಟಣೆ ತಗ್ಗಿಸುವಲ್ಲಿ ಬಸ್‌ ದಿನ ಆಚರಣೆಯು ಸಹಕಾರಿಯಾಗಿದೆ. ಹಾಗಾಗಿಯೇ ಇಂದು  60 ನೇಯ ಬಸ್‌ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಇದುವರೆಗೂ ಬಿಎಂಟಿಸಿ ಸಂಸ್ಥೆಯು ಐದು ವರ್ಷಗಳ ಬಸ್‌ ದಿನಾಚರಣೆಯನ್ನು ಯಶಸ್ವಿ ಯಾಗಿ  ಪೂರೈಸಿದೆ’ ಎಂದು ಹೇಳಿದರು.

‘ನಗರದ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ವೈಯಕ್ತಿಕ ಸಾರಿಗೆಯನ್ನು ಬದಿಗಿರಿಸಿ ಸಾರ್ವಜನಿಕ ಸಾರಿಗೆಯತ್ತ ಜನರನ್ನು ಆಕರ್ಷಿಸಲು ಮುಂದಿನ ಫೆಬ್ರುವರಿ ತಿಂಗಳ 4ನೇ ತಾರೀಖಿನಿಂದ ಪ್ರತಿ ತಿಂಗಳು 4ನೇ ತಾರೀಖಿನಂದು ಬಸ್‌ ದಿನವನ್ನಾಗಿ ಆಚರಿಸಲಾಗುವುದು’ ಎಂದರು.

‘ಮಹದೇವಪುರ ಕ್ಷೇತ್ರದ ಜನತೆಯ ಕೋರಿಕೆಯಂತೆ ವೈಟ್‌ಫೀಲ್ಡ್‌ನಲ್ಲಿನ ಚಲನೆಶೀಲತೆಯನ್ನು ಉತ್ತಮಪಡಿಸಲು ಎರಡು ಹೊಸ ಚಕ್ರ ಸೇವೆಗಳನ್ನು ಪ್ರಸ್ತುತ ಇರುವ ಸೇವೆಗಳೊಂದಿಗೆ ಬದಲಾವಣೆಗೊಳಿಸಲಾಗಿದೆ’ ಎಂದು ಹೇಳಿದರು.

ಬಿಎಂಟಿಸಿ ಸುರಕ್ಷಿತ: ಡಲ್ಟ್ ಸಮೀಕ್ಷೆ
ಬೆಂಗಳೂರು: ‘ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಪ್ರಯಾಣಿಕರ ಪೈಕಿ ಶೇ 85 ರಷ್ಟು ಮಂದಿ  ವಾರದಲ್ಲಿ ನಾಲ್ಕು ದಿನ ಪ್ರಯಾಣ ಮಾಡುತ್ತಾರೆ’ ಎಂದು ನಗರ ಭೂಸಾರಿಗೆ ನಿರ್ದೇಶನಾಲಯದ (ಡಲ್ಟ್) ಸಮೀಕ್ಷಾ ವರದಿ ತಿಳಿಸಿದೆ. ಬಿಎಂಟಿಸಿ ವೈಟ್‌ಫೀಲ್ಡ್‌ನಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ವರದಿ ಬಿಡುಗಡೆ ಮಾಡಿದರು.

ವರದಿಯ ಮುಖ್ಯಾಂಶಗಳು:
* ಶೇ 72ರಷ್ಟು ಪ್ರಯಾಣಿಕರು ಸಂಸ್ಥೆಯ ಹವಾನಿಯಂತ್ರಣರಹಿತ ಬಸ್‌ಗಳಲ್ಲಿ ಸಂಚಾರ ಮಾಡುತ್ತಾರೆ.
* ಶೇ 73ರಷ್ಟು ಮಹಿಳಾ ಪ್ರಯಾಣಿಕರು ಸಂಸ್ಥೆಯ ಬಸ್‌ಗಳು ಅತ್ಯಂತ ಸುರಕ್ಷಿತ ಎಂದು ಅಭಿಪ್ರಾಯಪಟ್ಟಿದ್ದಾರೆ.
* ಸಂಸ್ಥೆಯ ಬಸ್‌ಗಳು ಆರಾಮದಾಯಕ ಎಂದು ಶೇ 77ರಷ್ಟು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.

Write A Comment