ಕರ್ನಾಟಕ

ಬಾಲಕಿ ಮೇಲೆ ಅತ್ಯಾಚಾರ, ವಾಟ್ಸ್‌ಆ್ಯಪ್‌ಗೆ ಹಾಕಿ ಬೆದರಿಕೆ

Pinterest LinkedIn Tumblr

rape

ಸಂತೇಬೆನ್ನೂರು: ಇಲ್ಲಿಗೆ ಸಮೀಪದ ಗ್ರಾಮವೊಂದರ ಬಾಲಕಿಯ ಮೇಲೆ ಶೌಖತ್‌ ಎಂಬ ಯುವಕ ನಿರಂತರ ಅತ್ಯಾಚಾರ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸುಮಾರು ಎರಡು ವರ್ಷಗಳಿಂದ ಈ ಕೃತ್ಯ ನಡೆದಿದೆ. ಆರೋಪಿ ಮಾವಿನ ಹಣ್ಣಿನ ವ್ಯಾಪಾರಿ. ಮಾವಿನ ಕಾಯಿ ಕೊಯ್ಯುವ ಕೆಲಸಕ್ಕೆ ತನ್ನ ಆಟೋದಲ್ಲಿ  ಬಾಲಕಿಯೊಂದಿಗೆ ಇತರರನ್ನು ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿ­ದ್ದನು. ಆ ಸಮಯದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ. ಅವುಗಳನ್ನು ಸ್ನೇಹಿತರ ಮೊಬೈಲ್‌ಗೆ ಬ್ಲೂಟೂತ್‌ ಹಾಗೂ ವಾಟ್ಸ್‌ಆ್ಯಪ್‌ ಮುಖಾಂತರ ರವಾನಿಸಿದ್ದಾನೆ.

‘ನಿನ್ನ ಜೊತೆ ಲೈಂಗಿಕ ಸಂಪರ್ಕ ನಡೆಸಿರುವ ದೃಶ್ಯಾವಳಿಗಳು ನನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದ್ದಿದ್ದೇನೆ. ನಾನು ಕರೆದ ಜಾಗಕ್ಕೆ ಬರಬೇಕು. ಸಹಕಾರ ನೀಡದಿದ್ದಲ್ಲಿ ಅಂತರ್ಜಾಲ­ದಲ್ಲಿ ದೃಶ್ಯಗಳನ್ನು ಅಪ್‌ಲೋಡ್‌ ಮಾಡುತ್ತೇನೆ ಎಂದು ಬೆದರಿಕೆ ಒಡ್ಡಿದ್ದಾನೆ. ಆರೋಪಿಗೆ ಬುದ್ಧಿ ಹೇಳಲು ಬಾಲಕಿಯ ತಂದೆ ತಿಳಿಸಿದ್ದಾರೆ. ಆದರೂ ನೀಚ ಕೃತ್ಯ ಮುಂದುವರಿಸಿದ್ದಾನೆ. ಇದರಿಂದ ಮಾನಸಿಕವಾಗಿ ನೊಂದು ಶನಿವಾರ ಸಂಜೆಯಿಂದ ಬಾಲಕಿ ಸುಳಿವು ಇಲ್ಲವಾಗಿದೆ. ಅಕ್ಕಪಕ್ಕದವರು ಹಾಗೂ ಸಂಬಂಧಿಕರನ್ನು ವಿಚಾರಿಸಿದರೂ ಆಕೆಯ ಸುಳಿವು ದೊರೆತಿಲ್ಲ ಎಂದು ಬಾಲಕಿಯ ತಂದೆ ದೂರು ನೀಡಿದ್ದಾರೆ.

Write A Comment