ಹುಬ್ಬಳ್ಳಿಯಲ್ಲಿ ಭಾನುವಾರ ರಾತ್ರಿ ಭೂಸ್ಪರ್ಶ ಸಂದರ್ಭದಲ್ಲಿ ರನ್ ವೇ ಯಿಂದ ಪಕ್ಕಕ್ಕೆ ಜರುಗಿ ಟೈರ್ ಸ್ಫೋಟಗೊಂಡ ಸ್ಪೈಸ್ ಜೆಟ್ ವಿಮಾನದಿಂದ ಸುರಕ್ಷಿತವಾಗಿ ಬಂದಿಳಿದ ಪ್ರಯಾಣಿಕರು
ಹುಬ್ಬಳ್ಳಿ: ಇಳಿಯುವಾಗ ಚಕ್ರಗಳು ಸ್ಫೋಟಗೊಂಡ ಪರಿಣಾಮ ವಿಮಾನ ರನ್‌ವೇ ಬಿಟ್ಟು ಹೊರಗೆ ಹೋದ ಘಟನೆ ಭಾನುವಾರ ಸಂಜೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಭಾರಿ ಮಳೆಯ ನಡುವೆ ಪೈಲಟ್ ವಿಮಾನ ಇಳಿಸಲು ಯತ್ನಿಸಿದಾಗ ಈ ಅವಘಡ ಸಂಭವಿಸಿದ್ದು, ವಿಮಾನ ರನ್ ವೇ ಬಿಟ್ಟು 300 ಮೀಟರ್‌ಗೂ ಹೆಚ್ಚು ದೂರ ಸಾಗಿ ಕೆಸರಿನಲ್ಲಿ ಹೂತು ಹೋದ ಕಾರಣ ಅನಾಹುತ ಕಡಿಮೆಯಾಗಿದೆ. ವಿಮಾನದಲ್ಲಿ ಮೂವರು ಮಕ್ಕಳು, ನಾಲ್ವರು ಸಿಬ್ಬಂದಿ ಸೇರಿದಂತೆ 78 ಪ್ರಯಾಣಿಕರು ಇದ್ದರು. ಅದೃಷ್ಟವಶಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಘಟನೆ ನಡೆಯುತ್ತಿದ್ದಂತೆಯೇ ವಿಮಾನದ ಸಿಬ್ಬಂದಿ ಹಿಂಭಾಗದ ತುರ್ತು ಬಾಗಿಲುಗಳನ್ನು ತೆಗೆದು ಎಲ್ಲರನ್ನೂ ಇಳಿಸಿದ್ದಾರೆ. ವಾರ್ತಾ ಸಚಿವ ರೋಷನ್ ಬೇಗ್, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಹೈಕೋರ್ಟ್ ನ್ಯಾಯಮೂರ್ತಿಗಳಾದ ಬಿ.ಎಸ್.ಪಾಟೀಲ, ರತ್ನಕಲಾ ಹಾಗೂ ಮನೋಹರ್ ವಿಮಾನದಲ್ಲಿ ಇದ್ದರು
ಘಟನೆಯ ವಿವರ: ಸ್ಪೈಸ್‌ಜೆಟ್ ಸಂಸ್ಥೆಯ ಎಸ್.ಜೆ–1085 ವಿಮಾನ ಸಂಜೆ 6.05ಕ್ಕೆ ಬೆಂಗಳೂರಿನಿಂದ ಹೊರಟಿದ್ದು, ಹುಬ್ಬಳ್ಳಿಯಲ್ಲಿ ರಾತ್ರಿ 7.15ಕ್ಕೆ
‘ವಿಮಾನ ಇಳಿಯುವುದು ವಿಳಂಬವಾದ ಬಗ್ಗೆ ಸಿಬ್ಬಂದಿಯನ್ನು ಕೇಳಿದೆವು. ಆಗ ಸಹ ಪೈಲಟ್ ಕಾರ್ತೀಕ ಸ್ವಾಮಿ ಭಾರಿ ಮಳೆಯ ಕಾರಣ ಇಳಿಯಲು ಅಡಚಣೆಯಾಗಿದೆ ಶೀಘ್ರ ಸರಿಯಾಗಲಿದೆ’ ಎಂದು ಪ್ರಯಾಣಿಕರಿಗೆ ಧೈರ್ಯ ತುಂಬಿದರು ಎಂದು ಬೆಳಗಾವಿಯ ವಕೀಲ ಮಹೇಶ ಬಗಲಿ ‘ಪ್ರಜಾವಾಣಿ’ಗೆ ತಿಳಿಸಿದರು.
ವಿಮಾನ ಭೂಸ್ಪರ್ಶ ಮಾಡಿ ಸ್ವಲ್ಪ ಮುಂದಕ್ಕೆ ಬರುತ್ತಿದ್ದಂತೆಯೇ ರನ್‌ವೇ ಬಿಟ್ಟು ಏಕಾಏಕಿ ಎಡಕ್ಕೆ ಚಲಿಸತೊಡಗಿತು. ಕೆಲವೇ ನಿಮಿಷಗಳಲ್ಲಿ ಎಡ ಭಾಗದ ಚಕ್ರ ಸ್ಫೋಟಗೊಂಡಿತು. ಇದಾಗಿ ಸ್ವಲ್ಪದರಲ್ಲೇ ಬಲಭಾಗದ ಚಕ್ರವೂ ಸ್ಫೋಟಗೊಂಡಿತು. ವಿಮಾನ ಓಲಾಡುತ್ತಿದ್ದುದನ್ನು ಗಮನಿಸಿದ ಪ್ರಯಾಣಿಕರೆಲ್ಲಾ ಜೋರಾಗಿ ಕೂಗಿಕೊಂಡರು ಎಂದು ಖಾಸಗಿ ಕಂಪೆನಿಯೊಂದರ ಡೀಲರ್ ಹುಬ್ಬಳ್ಳಿಯ ಕಲವೀರ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಗೆ ಡಿಜಿಸಿಎ ಭೇಟಿ ಇಂದು
ವಿಮಾನ ರನ್‌ವೇನಿಂದ ಜಾರಿದ ಘಟನೆ ಬಗ್ಗೆ ತನಿಖೆಗಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ನಿರ್ದೇಶಕರು ಸೋಮವಾರ ಹುಬ್ಬಳ್ಳಿಗೆ ಬರಲಿದ್ದಾರೆ. ಅವರು ಪರಿಶೀಲನೆ ನಡೆಸಿದ ನಂತರವೇ ತಾಂತ್ರಿಕ ಕಾರಣ ಗೊತ್ತಾಗಲಿದೆ. ಸದ್ಯಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದ್ದು, ಡಿಜಿಸಿಎಯಿಂದ ಅನುಮತಿ ದೊರೆತ ನಂತರ ಮತ್ತೆ ವಿಮಾನ ಹಾರಾಟ ಆರಂಭವಾಗಲಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್ ತಿಳಿಸಿದರು.
ದೇವರೇ ಕಾಪಾಡಿದ
‘ನಿಜವಾಗಿಯೂ ಇದೊಂದು ಪವಾಡ. ಎಲ್ಲ ಪ್ರಯಾಣಿಕರೂ ಆತಂಕಗೊಂಡಿದ್ದರು. ದೇವರೇ ನಮ್ಮನ್ನೆಲ್ಲ ಕಾಪಾಡಿದ…’
ರನ್‌ವೇನಿಂದ ಹೊರ ಹೋದ ವಿಮಾನದಲ್ಲಿದ್ದ ಸಚಿವ ರೋಷನ್ ಬೇಗ್ ಸುರಕ್ಷಿತವಾಗಿ ಹೊರ ಬಂದ ನಂತರ ಪತ್ರಕರ್ತರ ಮುಂದೆ ಆಡಿದ ಮಾತು ಇದು.
‘ವಿಮಾನದಿಂದ ಹೊರ ಬಂದ ನಂತರ ದೊಡ್ಡ ಗಂಡಾಂತರದಿಂದ ಪಾರಾದಂತಾಯಿತು. ಎ1 ಆಸನದಲ್ಲಿಯೇ ನಾನು ಕುಳಿತಿದ್ದೆ. ತುರ್ತು ನಿರ್ಗಮನ ದ್ವಾರದಿಂದ ಕೆಸರಿಗೆ ಜಿಗಿದೆ’ ಎಂದು ಅವರು ಹೇಳಿದರು.
ಇಳಿಯಬೇಕಾಗಿತ್ತು. ಭಾರಿ ಮಳೆ–ಗಾಳಿ ಇದ್ದ ಪರಿಣಾಮ ವಿಮಾನ ಇಳಿಸಲು ಪೈಲಟ್ ಸಂಜಯ್ ಸೆಕ್ಸೆನಾ ಅವರಿಗೆ ನಿಯಂತ್ರಣ ಕೊಠಡಿಯಿಂದ ಮೊದಲು ಅನುಮತಿ ದೊರೆತಿಲ್ಲ. ಅರ್ಧತಾಸು ಆಕಾಶದಲ್ಲಿಯೇ ಹಾರಾಟ ನಡೆಸಿದ ನಂತರ ಇಳಿಯಲು ಅನುಮತಿ ದೊರೆತಿದೆ.