ಬೆಂಗಳೂರು: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ. ಜತೆಗೆ ಹಬ್ಬದ ಪ್ರಯುಕ್ತ ಹೂವು, ಹಣ್ಣು, ತರಕಾರಿಗಳ ಬೆಲೆ ಏರಿಕೆಯಾಗಿದ್ದು, ಗ್ರಾಹಕರಿಗೆ ಬಿಸಿಯೂ ತಟ್ಟಿದೆ. ಕೆ.ಆರ್. ಮಾರುಕಟ್ಟೆಯಲ್ಲಿ ಶುಕ್ರವಾರ ಖರೀದಿಯ ಭರಾಟೆ ಕಂಡುಬಂದಿತು. ಬೇಡಿಕೆ ಹೆಚ್ಚಾಗಿರುವುದರಿಂದ ಮಲ್ಲಿಗೆ ಹೂವು, ಕನಕಾಂಬರ ಕಾಕಡ ಹೂವು ಹಾಗೂ
ಸೇವಂತಿ ಬೆಲೆ ಏರಿಕೆಯಾಗಿತ್ತು. ಆದರೆ, ಚೆಂಡು ಹೂವು, ಕರಿಷ್ಮಾ ಗುಲಾಬಿ ಹೂವುಗಳ ದರ ಗ್ರಾಹಕರ ಕೈಗೆಟಕುವಂತಿತ್ತು.`ಹಬ್ಬದ ಸಂದರ್ಭದಲ್ಲಿ ಹೂವು, ಹಣ್ಣು ಮತ್ತು ತರಕಾರಿಗಳ ಬೆಲೆ ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಈ ಬಾರಿ ಯುಗಾದಿ ಹಬ್ಬದ ಪ್ರಯುಕ್ತ ಹೂವಿನ ಬೆಲೆ ಜಾಸ್ತಿಯಾಗಿದೆ’
ಎಂದು ಕೆ.ಆರ್.ಮಾರುಕಟ್ಟೆಯ ಹೂವಿನ ವ್ಯಾಪಾರಿ ಷಣ್ಮುಗಂ ಹೇಳಿದ್ದಾರೆ. ಮಾರುಕಟ್ಟೆಗಳಲ್ಲಿ ಒಂದು ಬೆಲೆಯಿದ್ದರೆ, ನಗರದ ಬೇರೆ ಬೇರೆ ಭಾಗಗಳಲ್ಲಿ
ಇನ್ನೊಂದು ಬೆಲೆಗೆ ಮಾರಾಟ ಮಾಡುತ್ತಾರೆ. ಹೀಗಾಗಿ, ಗ್ರಾಹಕರಿಗೆ ಇದರ ಬಿಸಿ ತಟ್ಟುತ್ತದೆ ಎಂದರು.
ಕೆ.ಆರ್. ಮಾರುಕಟ್ಟೆ ಹೂವಿನ ದರ
(ಸಗಟು ದರ ಕೆ.ಜಿ.ಗೆ ರುಗಳಲ್ಲಿ)
ಹಣ್ಣು- ತರಕಾರಿ ದರ
(ಕೆ.ಜಿಗೆ ರು. ಗಳಲ್ಲಿ)
ಮಲ್ಲಿಗೆ ಹೂವು ರು.400
ಕನಕಾಂಬರ ಹೂವು ರು.800
ಸೇವಂತಿಗೆ ರು.200-240
ಕಾಕಡ ಹೂವು ರು.300
ಗುಲಾಬಿ ರು.120
ಸುಗಂಧರಾಜ ರು.80
ಹುರುಳಿಕಾಯಿ ರು.40
ಬೀಟ್‍ರೂಟ್ ರು.15
ಬದನೆಕಾಯಿ ಬಿಳಿ ರು. 18
ಬದನೆಕಾಯಿ ಗುಂಡು ರು.16
ಎಲೆಕೋಸು ರು.15
ದಪ್ಪಮೆಣಸಿನಕಾಯಿ ರು.32
ಕ್ಯಾರಟ್ ನಾಟಿ ರು.28
ಟೊಮೆಟೊ ರು.15
ಸಪೋಟ ರು.36
ಏಲಕ್ಕಿ ಬಾಳೆ ರು.45
ಪಚ್ಚಬಾಳೆ ರು.18
(ಹಾಪ್‍ಕಾಮ್ಸ್ ಆಧಾರ)
ಯುಗಾದಿ ಹೊಸ ವರ್ಷದ ಆರಂಭ. ಹೀಗಾಗಿ, ಎಲ್ಲರೂ ಆಚರಣೆ ಮಾಡುತ್ತಾರೆ. ಇದರಿಂದ ಹೂವು, ಹಣ್ಣು, ತರಕಾರಿಗಳ ಬೆಲೆ ಹೆಚ್ಚಾಗಿದೆ.
ದಿನಕರ್
ವ್ಯಾಪಾರಿ, ಕೆ.ಆರ್.ಮಾರುಕಟ್ಟೆ.
ವ್ಯಾಪಾರಿಗಳಿಗೆ ಈ ಸಮಯ ಲಾಭ ತರುವ ಕಾಲ. ಆದರೆ, ನಮಗೆ ಇತ್ತ ಹಬ್ಬಕ್ಕೆ ಖರೀದಿ ಮಾಡುವಂತೆಯೂ ಇಲ್ಲ, ಬಿಡುವಂತೆಯೂ ಇಲ್ಲ. ಅಂತಹ ಪರಿಸ್ಥಿತಿಯಿದೆ. ಇಂತಹ ಬೆಲೆ
ಏರಿಕೆ ಸಂದರ್ಭದಲ್ಲಿಯೂ ಹಬ್ಬವನ್ನು ಆಚರಣೆ ಮಾಡಬೇಕಾಗಿದೆ.
ರತ್ನ, ಗೃಹಿಣಿ