ಬೆಂಗಳೂರು, ಏ.12- ಬಯಲು ಸೀಮೆಯ ಬರದ ಜಿಲ್ಲೆಗಳಿಗೆ ನೀರುಣಿಸಲು ಕೈಗೊಂಡಿರುವ ನೀರಾವರಿ ಯೋಜನೆಗಳಿಂದ ಮತ್ತೆ ಅನ್ಯಾಯವಾಗುವುದು ಬೇಡ ಎಂದು ಒತ್ತಾಯಿಸಿ ಕರ್ನಾಟಕ ನೀರಾವರಿ ವೇದಿಕೆ ನಿನ್ನೆ ಸಾಕ್ಷ್ಯಚಿತ್ರ ವೊಂದನ್ನು ಬಿಡುಗಡೆ ಮಾಡಿದೆ. ‘ಮತ್ತೆ ದೋಖಾ ಬೇಡ ’ ಎಂಬ 90 ನಿಮಿಷದ ಸಾಕ್ಷ್ಯಚಿತ್ರದಲ್ಲಿ ಸರ್ಕಾರ ಯೋಜಿಸಿ ರುವ ಅವೈಜ್ಞಾನಿಕ ಯೋಜನೆಗಳಲ್ಲಿನ ಲೋಪದೋಷಗಳನ್ನು ಆಧಾರ ಸಹಿತ ತೋರಿಸಲಾಗಿದೆ.
ಬಯಲು ಸೀಮೆ ಜನರು ಮತ್ತು ಹೋರಾಟ ಗಾರರಿಗೆ ಅರಿವು ಮೂಡಿಸುವುದರ ಜತೆಗೆ ಸರ್ಕಾರದ ಗಮನ ಸೆಳೆಯುವ ಮುಖ್ಯ ಉದ್ದೇಶ ವನ್ನು ಈ ಸಾಕ್ಷ್ಯಚಿತ್ರ ಹೊಂದಿದೆ. ಎತ್ತಿನ ಹೊಳೆ ಕುಡಿಯುವ ನೀರಿನ ಯೋಜನೆ ಸಾಕಷ್ಟು ಅವೈಜ್ಞಾನಿಕ ಅಂಶಗಳಿಂದ ಕೂಡಿದೆ ಎಂಬುದನ್ನು ಈ ಸಾಕ್ಷ್ಯಚಿತ್ರ ಪ್ರಮುಖವಾಗಿ ಬಹಿರಂಗಪಡಿಸಲು ಹೊರಟಿದೆ. ಹಿರಿಯ ತಜ್ಞರ ಜತೆ ಚರ್ಚಿಸಿ ವೈಜ್ಞಾನಿಕ ಆಧಾರಗಳನ್ನು ಅಳವಡಿಸಿಕೊಂಡು ಸುಲಭ ಮಾರ್ಗದೊಂದಿಗೆ ಈ ಯೋಜನೆ ಯನ್ನು ಜಾರಿಗೊಳಿಸುವ ಬಗ್ಗೆ ಈ ಸಾಕ್ಷ್ಯಚಿತ್ರದಲ್ಲಿ ಸಾಕಷ್ಟು ಮಾಹಿತಿಗಳನ್ನು ಒದಗಿಸಲಾಗಿದೆ.
ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರ ಸಂದರ್ಶನ ಸೇರಿದಂತೆ ಹಲವು ತಜ್ಞರ ಸಲಹೆ- ಸೂಚನೆಗಳನ್ನು ಈ ಸಾಕ್ಷ್ಯಚಿತ್ರದಲ್ಲಿ ಒದಗಿಸಲಾಗಿದ್ದು, ಯೋಜನೆಯ ಒಳಿತು- ಕೆಡುಕುಗಳನ್ನು ಬಿಂಬಿಸುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಲಾಗಿದೆ.
ಒಟ್ಟಾರೆ ಈ ಯೋಜನೆ ಸೂಕ್ತ ಮುನ್ನೆಚ್ಚರಿಕೆ ಮತ್ತು ಮುಂದಾ ಲೋಚನೆ ಯಿಲ್ಲದೆ ಜಾರಿಗೆ ತಂದರೆ ಇದರಿಂದ ಬಯಲು ಸೀಮೆಯ ಜನರಿಗೆ ಮತ್ತೆ ದೋಖಾ ಆಗಲಿದೆ ಎಂಬುದು ಈ ಸಾಕ್ಷ್ಯಚಿತ್ರದ ಮೂಲ ಸಾರಾಂಶವಾಗಿದೆ. ಯೋಜನೆಗೆ ಮುಂಚೆ ಇದರ ಸಾಧಕ-ಬಾಧಕಗಳ ಬಗ್ಗೆ ಪರಿಶೀಲನೆ ನಡೆಸಿ ಬಯಲು ಸೀಮೆಯ ಜಿಲ್ಲೆಗಳಿಗೆ ಖನಿಜ ಯುಕ್ತ ಕುಡಿಯುವ ನೀರನ್ನು ಒದಗಿಸುವಂತೆ ಸರ್ಕಾರ ವನ್ನು ಒತ್ತಾಯಿಸುವುದೇ ಇದರ ಪ್ರಮು ಖ ಉದ್ದೇಶ ಎಂಬುದು ಸಾಕ್ಷ್ಯಚಿತ್ರ ತಯಾರಕರ ಅಭಿಪ್ರಾಯ.
ಕರ್ನಾಟಕ ನೀರಾವರಿ ವೇದಿಕೆ ಅಧ್ಯಕ್ಷ ಡಾ.ಮಧುಸೀತಪ್ಪ ಅವರ ಸಂಶೋಧನೆ, ಪರಿಕಲ್ಪನೆ ಮತ್ತು ನಿರ್ಮಾಣದಲ್ಲಿ ಈ ಸಾಕ್ಷ್ಯಚಿತ್ರ ತಯಾರಾಗಿದೆ. ಸಮಾರಂಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಹಲವು ತಾಲೂಕುಗಳ ಫ್ಲೋರೋಸಿಸ್ ಪೀಡಿತ ಮಕ್ಕಳು ಭಾಗವಹಿಸಿದ್ದರು.
ಸರ್ಕಾರ ಈ ಮಕ್ಕಳ ಪರಿಸ್ಥಿತಿಯನ್ನು ಅವಲೋಕಿಸಿ ಈ ಯೋಜನೆಯನ್ನು ಸಮರ್ಪಕವಾಗಿ ಮತ್ತು ಸಮರ್ಥವಾಗಿ ತರಬೇಕು ಎಂಬುದೇ ಇದರ ಮೂಲ ಉದ್ದೇಶ ವಾಗಿದ್ದು, ಒಟ್ಟಾರೆ ಯೋಜನೆಯ ಪ್ರತಿ ಅಂಶವನ್ನೂ ಒಳಗೊಂಡಿರುವ ಈ ಸಾಕ್ಷ್ಯಚಿತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡುವ ಮೂಲಕ ಮನವಿ ಸಲ್ಲಿಸುತ್ತೇವೆ ಎಂದು ಅಧ್ಯಕ್ಷ ಡಾ.ಮಧುಸೀತಪ್ಪ ತಿಳಿಸಿದ್ದಾರೆ. ಸಮಾರಂಭದಲ್ಲಿ ಶ್ರೀ ನಂಜಾವಧೂತ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯರಾದ ವಿ.ಎಸ್. ಉಗ್ರಪ್ಪ , ಚೌಡರೆಡ್ಡಿ , ಮಾಜಿ ಶಾಸಕ ವೆಂಕಟ ಮುನಿಯಪ್ಪ ಮತ್ತಿತರರು ಹಾಜರಿದ್ದರು.