ಕರ್ನಾಟಕ

ಯಾರೇ ಪ್ರತ್ಯೇಕತೆ ಕೂಗು ಹಾಕಿದರೂ ರಾಜ್ಯದಿಂದ ಹೊರಗೋಡಿಸಿ: ಹಿರಿಯ ಸಾಹಿತಿ ಪಾಟೀಲ ಪುಟ್ಟಪ್ಪ

Pinterest LinkedIn Tumblr

Patil-Puttappa

ಧಾರವಾಡ, ಏ.12- ಪ್ರತ್ಯೇಕತಾ ರಾಜ್ಯದ ಕೂಗು ಸರಿಯಲ್ಲ. ಪ್ರತ್ಯೇಕತೆಯನ್ನು ಕೇಳುವವರು ಯಾರೇ ಆಗಿದ್ದರೂ ಸರಿ ಶಿಸ್ತು ಕ್ರಮ ಜರುಗಿಸಬೇಕು ಎಂದು ಹಿರಿಯ ಸಾಹಿತಿ ಪಾಟೀಲ ಪುಟ್ಟಪ್ಪ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ನಾಡಿನಲ್ಲೇ ಪ್ರತ್ಯೇಕತೆಯ ಕೂಗು ಎದ್ದಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಯಾರೇ ಆಗಲಿ ಪ್ರತ್ಯೇಕ ರಾಜ್ಯದ ಮಾತನಾಡಿದರೆ, ಅವರನ್ನು ರಾಜ್ಯದಿಂದ ಹೊರಹಾಕುತ್ತೇವೆ ಎಂದು ಖಡಕ್ಕಾಗಿ ಎಚ್ಚರಿಸಿದರು.

ಉತ್ತರ ಕರ್ನಾಟಕ  ಭಾಗ ಅಭಿವೃದ್ಧಿಯಾಗಿಲ್ಲ. ನಿಜ, ಅದಕ್ಕಾಗಿ ಪ್ರತ್ಯೇಕತೆ ಹೆಸರಲ್ಲಿ ಅಪಸ್ವರ ಎತ್ತುವುದು ಸರಿಯಲ್ಲ.  ಇಂತಹ ಹೇಳಿಕೆಗಳನ್ನು ಬಿಟ್ಟು ಒಗ್ಗಟ್ಟಿನಿಂದ ಹೋರಾಡಿ ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಭಿವೃದ್ಧಿ ವಿಷಯದಲ್ಲಿ ತಾರತಮ್ಯವಾಗಿದೆ. ಕೇವಲ ಹಳೆ ಮೈಸೂರು ಭಾಗ ಮಾತ್ರ ಅಭಿವೃದ್ಧಿ ಹೊಂದಿದರೆ ಸಾಲದು. ರಾಜ್ಯದ ಅದೆಷ್ಟೋ ಭಾಗಗಳು ಅಭಿವೃದ್ಧಿಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು. ಒಗ್ಗಟ್ಟಿನಿಂದ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೋರಾಡಬೇಕು. ಸರ್ಕಾರದ ಮೇಲೆ ಒತ್ತಡ ಹಾಕಿ ಹೆಚ್ಚು ಅನುದಾನ ಪಡೆದು ಈ ಭಾಗದ ಜನಪ್ರತಿನಿಧಿಗಳು ಅಭಿವೃದ್ದಿ ಹೊಂದುವಂತೆ ಮಾಡಬೇಕು. ಇದು ಬಿಟ್ಟು ಪ್ರತ್ಯೇಕ ರಾಜ್ಯ ಮಾಡಿ ಎಂದು ಹೇಳುವುದು ಸರಿಯಲ್ಲ. ಇಂತಹ ಹೇಳಿಕೆಗಳಿಗೆ ನಾವು ಬೆಂಬಲ ನೀಡುವುದಿಲ್ಲ ಎಂದು ಪಾಟೀಲ ಪುಟ್ಟಪ್ಪ ಸ್ಪಷ್ಟಪಡಿಸಿದರು. ಪ್ರತ್ಯೇಕತೆ ಬಗ್ಗೆ ಮಾತನಾಡಿರುವವರು ಶಾಸಕರಾಗಲಿ, ಮತ್ಯಾರೇ ಆಗಲಿ ಅಂತಹವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಪ್ರತ್ಯೇಕ ರಾಜ್ಯದ ಮಾತೆತ್ತಿದರೆ ಅಂಥವರನ್ನು ರಾಜ್ಯದಿಂದಲೇ ಹೊರಗೋಡಿಸಬೇಕು ಎಂದು ಆಗ್ರಹಿಸಿದರು.

2 Comments

  1. ಉತ಼್ತರ. ಕನಾ೯ಟಕದ. ಅಭಿವೃದ್ಧಿ ಬಗ್ಗೆಯೂ ಸ್ವಲ್ಪ. ಮಾತು ಆಡಿ ಮಹಾಸ್ವಾಮಿ.

Write A Comment