ಮೈಸೂರು: ಬಳ್ಳಾರಿ ಮೂಲದ ಮೈಸೂರು ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಕೆಯ ಕಾಲೇಜಿನ ಸಹಪಾಠಿಯಾಗಿದ್ದ ಶಿವಮೊಗ್ಗ ಮೂಲದ ಆದರ್ಶಾರಾಧ್ಯ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಏಪ್ರಿಲ್ 16ರಂದು ಬಳ್ಳಾರಿ ಮೂಲದ ಸ್ವಾತಿ ಎಂಬ ಜೆಎಸ್‍ಎಸ್ ಕಾಲೇಜು ವಿದ್ಯಾರ್ಥಿನಿ ಹಾಸ್ಟೆಲ್‍ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ಆದರೆ ಸ್ವಾತಿಯ ಪೆನ್‍ಡ್ರೈವ್ ಹಾಗೂ ಮೊಬೈಲ್ ಕರೆಯನ್ನು ಪೊಲೀಸರು ಪರಿಶೀಲಿಸಿದಾಗ ಆದರ್ಶಾರಾಧ್ಯ ಮೊಬೈಲ್ ನಂಬರ್ ಸಿಕ್ಕಿತ್ತು. 2 ತಿಂಗಳಿಂದ ಆರೋಪಿ 5 ಲಕ್ಷ ಮೆಸೆಜ್‍ಗಳು ಹಾಗೂ 7 ಲಕ್ಷ ಸೆಕೆಂಡ್ ಕಾಲ್ ಮಾಡಿ ಸ್ವಾತಿಗೆ ಟಾರ್ಚರ್ ನೀಡಿದ್ದ. ಮಾಹಿತಿ ಆಧಾರದಲ್ಲಿ ಎನ್ ಆರ್ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿ 2 ಸಿಮ್ ಕಾರ್ಡ್ ಬಳಸುತ್ತಿದ್ದ. ಒಂದು ಸಿಮ್‍ನಲ್ಲಿ ಸ್ವಾತಿ ಉತ್ತಮ ಬಾಂಧವ್ಯ ಹೊಂದಿದ್ದ, ಆದರೆ ಇನ್ನೊಂದು ನಂಬರ್‍ನಿಂದ ಆಕೆಗೆ ಆಶ್ಲೀಲವಾಗಿ ಮಸೇಜ್‍ಗಳನ್ನು ಕಳುಹಿಸುತ್ತಿದ್ದ. ಆದರೆ ತಾನು ಪ್ರೀತಿಸುತ್ತಿರುವ ಹುಡುಗನೇ ತನಗೆ ಬ್ಲಾಕ್‍ಮೇಲ್ ಮಾಡುತ್ತಿದ್ದಾನೆ ಎಂದು ಸ್ವಾತಿಗೆ ಸಾಯುವ ತನಕವೂ ತಿಳಿದಿಲ್ಲ.
ಓರ್ವ ಅಪರಿಚಿತ ವ್ಯಕ್ತಿ ಅಶ್ಲೀಲವಾಗಿ ತನ್ನ ಮೊಬೈಲಿಗೆ ಮೆಸೇಜ್ ಕಳುಹಿಸುತ್ತಿದ್ದು, ಇದರಿಂದ ಮನನೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಅಲ್ಲದೇ ತಾನು ಒಬ್ಬನನ್ನು ಪ್ರೀತಿಸುತ್ತಿದ್ದು ಆತನಿಗೆ ಸಹಾಯ ಮಾಡಿ ಎಂದು ಸ್ವಾತಿ ತಾಯಿಗೆ ಡೆತ್‍ನೋಟ್‍ನಲ್ಲಿ ಬರೆದಿದ್ದಳು.
ಈ ಹಿಂದೆಯೂ ಆದರ್ಶಾರಾಧ್ಯ ಯುವತಿ ಒಬ್ಬಳಿಗೆ ಬ್ಲ್ಯಾಕ್ ಮೇಲ್ ಮಾಡಿದ್ದ. ಬೆಂಗಳೂರಿನ ಗಿರಿನಗರದಲ್ಲಿ ಇದೇ ರೀತಿ ಯುವತಿಯೋರ್ವಳಿಗೆ ಬ್ಲ್ಯಾಕ್‍ಮೇಲ್ ಮಾಡಿದ್ದ ಆರೋಪದ ಮೇರೆಗೆ ಬಂಧಿತನಾಗಿದ್ದ.