ಉಚಿತ ಅಕ್ಕಿ ಕೊಟ್ಟು ಬೀಗುತ್ತಿರುವ ರಾಜ್ಯ ಸರ್ಕಾರದ ನಿರ್ಲಕ್ಷ್ಯಕ್ಕೆ ರೈತ ಆತ್ಮಹತ್ಯೆ ಸರಣಿ ಪ್ರಾರಂಭವಾಗಿದ್ದು ನಿನ್ನೆ ಮಂಡ್ಯದಲ್ಲಿ ರೈತನೊಬ್ಬ ಬೆಂಕಿ ಹಾರಿ ಆತ್ಮಹತ್ಯೆ ಮಾಡಿಕೊಂಡ ಬೆನ್ನ ಹಿಂದೆಯೇ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ರೈತನೊಬ್ಬ ಆತ್ಮಹತ್ಯೆ ಶರಣಾಗಿದ್ದಾನೆ.
ನಂಜನಗೂಡು ತಾಲೂಕು ಸಿಬ್ಬೇಗೌಡನಹುಂಡಿಯ ನಲವತ್ತು ವರ್ಷ ಪ್ರಾಯದ ರೈತ ಶಿವಲಿಂಗೇಗೌಡ ಶುಕ್ರವಾರ ತಮ್ಮ ಹೊಲದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಕಬ್ಬು ಮತ್ತು ಹತ್ತಿ ಬೆಳೆಗಾಗಿ ಶಿವಲಿಂಗೇಗೌಡ 5 ಲಕ್ಷ ರೂ. ಸಾಲ ಪಡೆದಿದ್ದರು ಎನ್ನಲಾಗಿದೆ.
ಕಾವೇರಿ ಗ್ರಾಮೀಣ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಮೃತ ರೈತ ಸಾಲ ಪಡೆದಿದ್ದ ಎನ್ನಲಾಗಿದ್ದು ಕಬ್ಬಿಗೆ ಸರಿಯಾದ ಬೆಂಬಲ ಬೆಲೆ ಸಿಗದ ಕಾರಣ ಸಾಲ ತೀರಿಸಲು ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನೊಂದು ಸಾವಿಗೆ ಶರಣಾಗಿದ್ದಾನೆ ಎಂಬ ಮಾಹಿತಿ ಲಭಿಸಿದೆ.
1 Comment
who is hard working nature wiht grow your life work hard