ಕರ್ನಾಟಕ

ಡ್ಯಾನ್ಸಿಂಗ್ ಸ್ಟಾರ್ ವಿಜೇತ ಮಾಸ್ಟರ್ ಆನಂದ್ ಗೆ ಸಿಕ್ಕ ಮೊತ್ತವೆಷ್ಟು ಗೊತ್ತಾ..?

Pinterest LinkedIn Tumblr

anaಕಲರ್ಸ್ ಕನ್ನಡದಲ್ಲಿ ನಡೆಯುತ್ತಿದ್ದ ರಿಯಾಲಿಟಿ ಷೋ ‘ಡ್ಯಾನ್ಸಿಂಗ್ ಸ್ಟಾರ್ 2’ ಫಲಿತಾಂಶ ಈಗಾಗಲೇ ಹೊರ ಬಿದ್ದಿದ್ದು, ಅಧಿಕೃತವಾಗಿ ವಾಹಿನಿಯಲ್ಲಿ ಪ್ರಸಾರವಾಗುವುದಷ್ಟೇ ಬಾಕಿ ಉಳಿದಿದೆ. ‘ಡ್ಯಾನ್ಸಿಂಗ್ ಸ್ಟಾರ್ 2’ ವಿನ್ನರ್ ಆಗಿ ಮಾಸ್ಟರ್ ಆನಂದ್ ಹೊರ ಹೊಮ್ಮಿದ್ದಾರೆ.

ಈ ಕಾರ್ಯಕ್ರಮ ಇದೇ ಶನಿವಾರ ಮತ್ತು ಭಾನುವಾರದಂದು ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿದೆ. ವಿಜೇತರ್ಯಾರೆಂಬುದು ಈಗಾಗಲೇ ತಿಳಿದಿದ್ದರೂ ಮೊದಲಿನಿಂದಲೂ ಕಾರ್ಯಕ್ರಮವನ್ನು ವೀಕ್ಷಿಸಿಕೊಂಡು ಬರುತ್ತಿರುವ ವೀಕ್ಷಕರು ಫೈನಲ್ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

‘ಡ್ಯಾನ್ಸಿಂಗ್ ಸ್ಟಾರ್ 2’ ರ ವಿಜೇತರಾಗಿರುವ ಮಾಸ್ಟರ್ ಅನಂದ್ ಅವರಿಗೆ ಈ ಮೊದಲೇ ಘೋಷಿಸಿದಂತೆ 10 ಲಕ್ಷ ರೂ.ಗಳ ಬಹುಮಾನ ಹಾಗೂ ಪಾರಿತೋಷಕ ಲಭಿಸಿದೆ. ‘ಡ್ಯಾನ್ಸಿಂಗ್ ಸ್ಟಾರ್ 2’ ಕಾರ್ಯಕ್ರಮದಿಂದ ಉತ್ತೇಜಿತರಾಗಿರುವ ಕಲರ್ಸ್ ವಾಹಿನಿ ಇದೀಗ ‘ಜ್ಯೂನಿಯರ್ ಡ್ಯಾನ್ಸಿಂಗ್ ಸ್ಟಾರ್’ ರಿಯಾಲಿಟಿ ಷೋ ಆರಂಭಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.

‘ಜ್ಯೂನಿಯರ್ ಡ್ಯಾನ್ಸಿಂಗ್ ಸ್ಟಾರ್’ ರಿಯಾಲಿಟಿ ಷೋ ಗೂ ಪ್ರಿಯಾಮಣಿ, ರವಿಚಂದ್ರನ್ ಹಾಗೂ ಮಯೂರಿ ಉಪಾಧ್ಯಾಯ ಅವರೇ ತೀರ್ಪುಗಾರರಾಗಲಿದ್ದಾರೆಂಬ ಮಾತುಗಳು ಕೇಳಿ ಬಂದಿವೆ. ಕಲರ್ಸ್ ವಾಹಿನಿಯಲ್ಲಿ ‘ಬಿಗ್ ಬಾಸ್’ ಹಾಗೂ ‘ಸೂಪರ್ ಮಿನಿಟ್ ಸೀಸನ್ 2’ ಸಹ ಶೀಘ್ರದಲ್ಲೇ ಆರಂಭವಾಗಲಿದೆ ಎನ್ನಲಾಗಿದೆ.

Write A Comment