ಕರ್ನಾಟಕ

ಡಿಕೆಶಿ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ: ಇದು ಅಂತ್ಯವಲ್ಲ ಆರಂಭ ಎಂದ ಹೆಚ್‌ಡಿಕೆ

Pinterest LinkedIn Tumblr

kumarರಾಮನಗರ; ರಾಜ್ಯದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಡಿ.ಕೆ.ಶಿವಕುಮಾರ್ ಅವರು ರಾಮನಗರದಲ್ಲಿನ ಗುಡ್ಡಗಳನ್ನು ಕರಗಿಸುವ ಸಲುವಾಗಿಯೇ ಶಾಸಕ, ಸಚಿವರಾಗಿದ್ದಾರೆ. ಆದರೆ ಜಿಲ್ಲೆಯಲ್ಲಿನ ಅವರ ಎಲ್ಲಾ ಸಾಕ್ಷಿಗಳು ಪ್ರಸ್ತುತ ಕರಗುತ್ತಿವೆ ಎನ್ನುವ ಮೂಲಕ ಚಾಟಿ ಬೀಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರೋಪ ಪಟ್ಟಿ ಸಲ್ಲಿಕೆಯಾಗಿರುದು ಸ್ವಾಗತಾರ್ಹ. ಅಲ್ಲದೆ ಇದು ಡಿಕೆಶಿ ಕಂಟಕದ ಅಂತ್ಯವಲ್ಲ ಆರಂಭ ಎಂದ ಅವರು, ಶಿವಕುಮಾರ್ ಕಾನೂನುನನ್ನು ಉಲ್ಲಂಘಿಸುವ ಮೂಲಕ ರಾಮನಗರದಲ್ಲಿನ ಗುಡ್ಡಗಳನ್ನು ಕರಗಿಸುವ ಯತ್ನದಲ್ಲಿದ್ದರು. ಆದ್ದರಿಂದಲೇ ಅವರು ಶಾಸಕರಾಗಿ, ಸಚಿವರಾಗಿ ದರ್ಪ ತೋರುತ್ತಿದ್ದಾರೆ. ಆದರೆ ಪ್ರಸ್ತುತ ರಾಮನಗರದಲ್ಲಿನ ಅವರ ಎಲ್ಲಾ ಸಾಕ್ಷಿಗಳು ಕರಗುತ್ತಿವೆ. ಕಾನೂನಿನ ಕಣ್ಣು ಮುಚ್ಚಿಸಲು ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ.

ಇನ್ನು ರಾಮನಗರ ಜಿಲ್ಲೆಯ ಕನಕಪುರ ನಗರದ ಹೊರ ವಲಯದ ಗುಡ್ಡ ಪ್ರದೇಶದಲ್ಲಿ ಡಿ.ಕೆ.ಶಿವಕುಮಾರ್ ಒಡೆತನದಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಅಕ್ರಮವಾಗಿ ಗ್ರಾನೈಟ್ ಉತ್ಪಾದನೆಗೆ ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಈಗಾಗಲೇ ಡಿಕೆಶಿ ಸೇರಿದಂತೆ ಅವರ ಪತ್ನಿ ಹಾಗೂ ಸಹೋದರರಿಗೆ ನೋಟಿಸ್ ಜಾರಿಗೊಳಿಸಿ ಆರೋಪಪಟ್ಟಿ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿತ್ತು. ಪರಿಣಾಮ ಡಿಕೆಶಿ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

Write A Comment