ಕರ್ನಾಟಕ

ಕಳ್ಳತನಕ್ಕೆ ಬಂದವರು ಏನೂ ಸಿಗದಾಗ ಊಟ ಮಾಡಿ ಹೋದರು !

Pinterest LinkedIn Tumblr

anna

ರಾಯಚೂರು: ಕಳ್ಳತನ ಮಾಡಲೆಂದು ಮನೆಯೊಂದರ ಬೀಗ ಮುರಿದು ಒಳ ನುಗ್ಗಿದ್ದ ಕಳ್ಳರು ಅಲ್ಲಿ ಬೆಲೆ ಬಾಳುವ ವಸ್ತುಗಳು ದೊರೆಯದಿದ್ದಾಗ ಮನೆಯಲ್ಲಿದ್ದ ದಿನಸಿ ಪದಾರ್ಥಗಳನ್ನು ಬಳಸಿ ಅಡುಗೆ ಮಾಡಿಕೊಂಡು ಊಟ ಮಾಡಿ ತೆರಳಿದ್ದಾರೆ.

ಇಂತದೊಂದು ಸ್ವಾರಸ್ಯಕರ ಘಟನೆ ಶಕ್ತಿ ನಗರದಲ್ಲಿರುವ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ ವಸತಿ ಗೃಹದಲ್ಲಿ ನಡೆದಿದ್ದು, ಆರ್.ಟಿ.ಪಿ.ಎಸ್ ಇಂಜಿನಿಯರ್ ಚಂದ್ರಶೇಖರ್ ಎಂಬವರ ಮನೆಗೆ ನುಗ್ಗಿದ್ದ ಕಳ್ಳರು ಅಡುಗೆ ಮಾಡಿ ಊಟ ಮಾಡಿಕೊಂಡು ತೆರಳಿದ್ದಾರೆ.

ಚಂದ್ರಶೇಖರ್ ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲ ಬೀಗ ಮುರಿದು ಒಳ ನುಗ್ಗಿದ್ದ ಕಳ್ಳರು ಹಣ, ಆಭರಣಗಳಿಗಾಗಿ ತಡಕಾಡಿದ್ದಾರೆ. ಅಲ್ಮೇರಾದಲ್ಲಿದ್ದ ಬಟ್ಟೆ ಬರೆಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ನೋಡಿದರೂ ಅವರಿಗೆ ಏನೂ ಸಿಗದಿದ್ದಾಗ ಅನ್ನ, ಸಾಂಬಾರ್ ಮಾಡಿಕೊಂಡು ಅಲ್ಲಿಯೇ ಊಟ ಮಾಡಿ ತೆರಳಿದ್ದಾರೆ. ಕಳ್ಳತನ ಯತ್ನ ಸಂಬಂಧ ಈಗ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment