ನವದೆಹಲಿ: ಭಾರೀ ದೊಡ್ಡ ಭದ್ರತೆ ಉಲ್ಲಂಘನೆ ಪ್ರಕರಕ್ಕೆ ಉದಾಹರಣೆಯಾಗಿ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಸಹ ಸಂಸ್ಥಾಪಕ ಯಾಸಿನ್ ಭಟ್ಕಳ್ ನು ತನ್ನ ಪತ್ನಿಗೆ ಹೈದರಾಬಾದ್ ಜೈಲಿನಿಂದ ಹಲವು ಬಾರಿ ದೂರವಾಣಿ ಕರೆ ಮಾಡಿದ್ದನು ಎಂಬುದು ತಿಳಿದು ಬಂದಿದೆ.
ಭಟ್ಕಳ್ ತನ್ನ ಪತ್ನಿಯಲ್ಲಿ ದೂರವಾಣಿಯಲ್ಲಿ ಮಾತನಾಡುತ್ತಿದ್ದ ವೇಳೆ ಸಿರಿಯಾ ಮತ್ತು ಇರಾಕ್ ದೇಶಗಳ ಭಯೋತ್ಪಾದಕರ ಸಹಾಯದಿಂದ ಶೀಘ್ರದಲ್ಲಿಯೇ ಜೈಲಿನಿಂದ ಹೊರಬರುವುದಾಗಿ ಆಕೆಗೆ ಭರವಸೆ ನೀಡಿದ್ದಾನೆ ಎಂಬುದು ತಿಳಿದುಬಂದಿದೆ.
ಇತ್ತೀಚೆಗೆ ಭಟ್ಕಳ್ ಐದು ನಿಮಿಷ ತನ್ನ ಪತ್ನಿ ಜಹೀದಾಳ ಜೊತೆ ಮಾತನಾಡಿದ್ದು, ” ಡಮಾಸ್ಕಸ್ ಸೆ ಲೋಗ್ ಮದದ್ ಕರ್ ರಹೇಂ ಹೆ, ಮೆ ಜಲ್ದೀ ಹಿ ರಿಹಾ ಹೊ ಜಾವೂಂಗಾ( ಡಮಾಸ್ಕಸ್ ನ ಜನರು ನನಗೆ ಸಹಾಯ ಮಾಡುತ್ತಾರೆ, ನಾನು ಆದಷ್ಟು ಬೇಗ ಮನೆಗೆ ಬರುತ್ತೇನೆ” ಎಂದು ಹೇಳಿದ್ದಾನೆ.
ಆತನ ಪತ್ನಿ ಆಗ್ನೇಯ ದೆಹಲಿಯ ಯಾಸಿನ್ ಭಟ್ಕಳ್ ಇದುವರೆಗೆ ಸುಮಾರು 10 ಸಲ ಪತ್ನಿಗೆ ದೂರವಾಣಿ ಕರೆ ಮಾಡಿದ್ದು ಪ್ರತಿ ಸಲ ಮಾತನಾ ಡುವಾಗಲೂ ಜೈಲಿನಿಂದ ಹೊರಬರುವ ಆಶಾವಾದ ವ್ಯಕ್ತಪಡಿಸಿದ್ದ. ಭಟ್ಕಳ್ ಗೆ ಇಸ್ಲಾಮಿಕ್ ರಾಷ್ಟ್ರದ ಪ್ರಮುಖ ಭಯೋತ್ಪಾದಕರು ಸಹಾಯ ಮಾಡಬಹುದೆಂದು ಭದ್ರತಾ ದಳದ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.
ಭಟ್ಕಳ್ ನ ಈ ಸಂಭಾಷಣೆ ಜೈಲಿನ ಅಧಿಕಾರಿಗಳಲ್ಲಿ ಆತಂಕ ಹುಟ್ಟಿಸಿದ್ದು, ಜೈಲಿನ ಭದ್ರತೆಯನ್ನು ಹೆಚ್ಚಿಸಲು ಕ್ರಮ ಕೈಗೊಂಡಿದ್ದಾರೆ.
ಯಾಸಿನ್ ಭಟ್ಕಳ್ ನ ಈ ದೂರವಾಣಿ ಸಂಭಾಷಣೆಯಿಂದ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಹಾಗೂ ಭಾರತದಲ್ಲಿ ಭಯೋತ್ಪಾದಕ ಸಂಘಟನೆಗಳು ಹೇಗೆ ಕಾರ್ಯ ಚಟುವಟಿಕೆಗಳಲ್ಲಿ ನಿರತವಾಗಿವೆ, ಅವುಗಳ ಯೋಜನೆಗಳೇನು ಎಂಬುದು ತಿಳಿದುಬರುತ್ತದೆ. ಇನ್ನೊಂದೆಡೆ, ಆತನಿಗೆ ಅವನ ಪತ್ನಿ ಜಹಿದಾ ಮೇಲಿರುವ ಪ್ರೀತಿಯಿಂದಾಗಿ ಭಾರತದ ಭದ್ರತಾಧಿಕಾರಿಗಳಿಗೆ ಅವನನ್ನು ಸುಲಭವಾಗಿ ಪತ್ತೆಹಚ್ಚಲು ಅನುಕೂಲವಾಗುತ್ತದೆ. ನೇಪಾಳದಲ್ಲಿ ಅಡಗಿಕೊಂಡಿದ್ದ ಯಾಸಿನ್ ನನ್ನು ಅಧಿಕಾರಿಗಳು ಪತ್ತೆಹಚ್ಚಿ ಹಿಡಿದಿದ್ದರು. 2013ರಲ್ಲಿ ಈದ್ ಹಬ್ಬದ ಉಡುಗೊರೆಯಾಗಿ ಹವಾಲಾ ಮೂಲಕ ಭಟ್ಕಳ್ ಪತ್ನಿಗೆ 1 ಲಕ್ಷ ರೂಪಾಯಿ ಮತ್ತು ಮೊಬೈಲ್ ಕಳುಹಿಸಿದ್ದ.