ಕರ್ನಾಟಕ

ರಾಘವೇಶ್ವರರ ಅತ್ಯಾಚಾರ ಪ್ರಕರಣ : ಅಂಬಾಪುರಮಠಕ್ಕೆ ಸಿಐಡಿ ತಂಡ

Pinterest LinkedIn Tumblr

raghaveshwara-shree01ಶಿರಸಿ, ಜು.5- ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡ ಶಿರಸಿಯ ಗಾಂಧಿನಗರದಲ್ಲಿರುವ ಅಂಬಾಗಿರಿ ಮಠಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿತು. 2012ರ ಅಕ್ಟೋಬರ್ 16 ರಿಂದ 24ರ ವರೆಗೆ ಮಠದಲ್ಲಿ ನಡೆದ ಅಂಬಾಕಥಾ ಕಾರ್ಯಕ್ರಮದಲ್ಲಿ

ತಮ್ಮ ಮೇಲೆ ಶ್ರೀಗಳು ಅತ್ಯಾಚಾರವೆಸಗಿದ್ದರು ಎಂದು ಹರಿಕಥಾ ಗಾಯಕಿ ಪ್ರೇಮಲತಾ ಅವರು ಸಿಐಡಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಸಿಐಡಿ ಡಿವೈಎಸ್‌ಪಿ ಚಂದ್ರಶೇಖರ್ ನೇತೃತ್ವದ ತಂಡ ಅಂಬಾಗಿರಿ ಮಠದಲ್ಲಿ ಅಂಬಾಕಥಾ ಕಾರ್ಯಕ್ರಮ ನಡೆದ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಭಕ್ತರನ್ನು ಹಾಗೂ ನಾಗರಿಕರ ವಿಚಾರಣೆ ನಡೆಸಿತು.

ಪ್ರೇಮಲತಾ ಹಾಗೂ ಅವರ ಪತಿ ದಿವಾಕರಶಾಸ್ತ್ರಿ ಅವರನ್ನು ತಂಡ ಕರೆದೊಯ್ದಿತ್ತು. ವಿಚಾರಣೆ ಇನ್ನೂ ಮುಂದುವರೆದಿದೆ.

Write A Comment