ಒಂದೇ ಕುಟುಂಬದ ಮೂವರಿಗೆ ಹಾವು ಕಚ್ಚಿದ ಪರಿಣಾಮ ಬಾಲಕ ಅಸುನೀಗಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಜಿಲ್ಲೆಯ ವೀರಾಪುರದಲ್ಲಿ ಘಟನೆ ನಡೆದಿದ್ದು ಚೇತನ (7) ಎಂಬ ಬಾಲಕ ಮೃತಪಟ್ಟಿದ್ದಾನೆ. ಮೃತನ ತಾಯಿ ಬಸಮ್ಮ(35) ಮತ್ತು ಅಜ್ಜಿ ಶರಣಮ್ಮ( 50) ಅಸ್ವಸ್ಥರಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸಮ್ಮ ಅವರಿಗಿಂತ ಶರಣಮ್ಮ ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.
ಶನಿವಾರ ರಾತ್ರಿ ತೋಟದ ಮನೆಯಲ್ಲಿ ಮಲಗಿದ್ದ ಸಮಯದಲ್ಲಿ ಮೂವರಿಗೂ ಹಾವು ಕಚ್ಚಿದೆ. ವಿಷವೇರಿದ್ದರಿಂದ ಬಾಲಕ ಚೇತನ್ ಮೃತಪಟ್ಟಿದ್ದು ಆತನ ತಾಯಿ ಮತ್ತು ಅಜ್ಜಿ ಅಸ್ವಸ್ಥರಾಗಿದ್ದಾರೆ.
ಮಹಿಳೆಯರ ಕಾಲು ಮತ್ತು ಎದೆ ಭಾಗಕ್ಕೆ ಹಾವು ಕಚ್ಚಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬಹುಶಃ ತೀವೃ ವಿಷದ ನಾಗರಹಾವು ಅವರನ್ನು ಕಚ್ಚಿರಬೇಕು ಎಂದು ಸ್ಥಳೀಯರು ಶಂಕೆ ವ್ಯಕ್ತ ಪಡಿಸಿದ್ದಾರೆ.