ಚಿಕ್ಕಮಗಳೂರು: ರಾಜ್ಯದಲ್ಲಿ ಸಾಲಬಾಧೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಸಂಖ್ಯೆ ಹೆಚ್ಚುತ್ತಲೇ ಇದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇನ್ನಿಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ನಡೆದಿರುವ ಬಗ್ಗೆ ವರದಿಯಾಗಿದೆ.
ಸಾಲಬಾಧೆ ಹಿನ್ನಲೆಯಲ್ಲಿ ಕಡೂರಿನ ಹುಲ್ಲೇನಹಳ್ಳಿಯಲ್ಲಿ ರೈತ ತಿಮ್ಮಣ್ಣ (57) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಿಮ್ಮಣ್ಣ ಬ್ಯಾಂಕಿನಲ್ಲಿ 2.50 ಲಕ್ಷ ರೂ. ನಷ್ಟು ಸಾಲ ಮಾಡಿಕೊಂಡಿದ್ದರು.
ಸಾಲಬಾಧೆ ಹಿನ್ನಲೆಯಲ್ಲಿ ಕಡೂರು ತಾಲ್ಲೂಕಿನ ಲಕ್ಕೇನಹಳ್ಳಿಯಲ್ಲಿ ರೈತ ನಾಗಾ ನಾಯ್ಕ (45) ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಲೂಗಡ್ಡೆ ಬೆಳೆ ನಷ್ಟವಾದ ಹಿನ್ನಲೆಯಲ್ಲಿ 4 ಲಕ್ಷ 75 ಸಾವಿರ ರೂ. ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.