ಬಳ್ಳಾರಿ: ಅವರಿಗೆ ಒಂದು ಮದುವೆಯಾಗಿತ್ತು. ಇಬ್ಬರು ಮುದ್ದಾದ ಮಕ್ಕಳು ಸಹ ಇದ್ದರು. ಆದರೆ ಮೊದಲ ಗಂಡ ವಿಚ್ಚೇದನ ನೀಡಿದ್ದಕ್ಕೆ ಆ ಮಹಿಳೆ ಇನ್ನೊಂದು ಮದುವೆಯಾಗಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಅವರಿಬ್ಬರ ಸಂಸಾಸ ಸುಖವಾಗಿ ಸಾಗಬೇಕಿತ್ತು. ಆದರೆ ಇದೀಗ ಮದುವೆ ವಯಸ್ಸಿಗೆ ಬಂದ ಮಗಳಿಗೆ ನಿತ್ಯ ಲೈಂಗಿಕ ಕಿರುಕುಳ ನೀಡುತ್ತಿರುವುದರಿಂದ ವಿಕೃತ ಕಾಮಿಯ ವಿರುದ್ಧ ತಾಯಿ, ಮಗಳು ಪೊಲೀಸ್ ಠಾಣೆಯ ಮೇಟ್ಟೆಲೇರಿದ್ದಾರೆ.
ಜಿಲ್ಲೆಯ ಲಕ್ಷ್ಮೀ ಅವರಿಗೆ ಈ ಹಿಂದೆಯೇ ಒಂದು ಮದುವೆಯಾಗಿತ್ತು. ಮೊದಲ ಪತಿಯ ಅಶೋಕ ಜೊತೆ ಸಂಸಾರ ಸಾಗಿಸು ವೇಳೆ ಇಬ್ಬರು ಮಕ್ಕಳು ಹುಟ್ಟಿದ್ದರು. ಆದರೆ ಮೊದಲ ಪತಿ ಅಶೋಕ ಲಕ್ಷ್ಮೀಗೆ ವಿಚ್ಚೇದನ ನೀಡಿದ ನಂತರ ಶ್ರೀನಿವಾಸರೆಡ್ಡಿ ಎನ್ನುವವರು ಲಕ್ಷ್ಮೀ ಅವರನ್ನು 7 ವರ್ಷದ ಹಿಂದೆ ಮದುವೆಯಾಗಿದ್ದ. ಇದೀಗ ಪತ್ನಿಗೆ ಬೈಪಾಸ್ ಸರ್ಜರಿಯಾಗಿದ್ದಕ್ಕೆ ಮಗಳನ್ನೆ ಮಂಚಕ್ಕೆ ಕಳುಹಿಸುವಂತೆ ಲಕ್ಷ್ಮೀಗೆ ಕಿರುಕುಳ ನೀಡುತ್ತಿದ್ದಾನೆ. ಅಷ್ಠೆ ಅಲ್ಲದೇ ಈ ವಿಕೃತ ಕಾಮಿ ಶ್ರೀನಿವಾಸರೆಡ್ಡಿ ಮದುವೆ ವಯಸ್ಸಿಗೆ ಬಂದ ಮಗಳಿಗೆ ಲೈಂಗಿಕ ಕಿರುಕುಳ ನೀಡುವ ಮೂಲಕ ತನ್ನ ವಿಕೃತ ಮನಸ್ಸನ್ನು ತೋರಿಸಿದ್ದಾನೆ.
ಪತ್ನಿ ಆಸ್ಪತ್ರೆಯಲ್ಲಿದ್ದಾಗ ಮಗಳಿಗೆ ನಿತ್ಯ ಲೈಂಗಿಕ ಕಿರುಕುಳ ನೀಡುವ ಮೂಲಕ ತನ್ನ ನೀಚ ಬುದ್ಧಿಯನ್ನು ತೋರಿಸಿದ್ದಾನೆ. ಹೀಗಾಗಿ ಬಾರವೊಂದರಲ್ಲಿ ಮ್ಯಾನೇಜರ್ ಆಗಿರುವ ವಿಕೃತಕಾಮಿ ಶ್ರೀನಿವಾಸರೆಡ್ಡಿ ವಿರುದ್ಧ ಇದೀಗ ತಾಯಿ ಮಗಳು ಸಿಡಿದೆದ್ದಿದ್ದಾರೆ. ಮಾನವ ಹಕ್ಕುಗಳ ಸಂಘಟನೆ ಮೂಲಕ ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ವಿಕೃತ ಕಾಮಿಯ ವಿರುದ್ಧ ದೂರು ದಾಖಲಾದರೂ ಪೊಲೀಸರು ಮಾತ್ರ ಶ್ರೀನಿವಾಸರೆಡ್ಡಿಯನ್ನು ಬಂಧಿಸಿಲ್ಲ.
ದಕ್ಷ ಪೊಲೀಸ್ ವರಿಷ್ಠಾಧಿಕಾರಿಯೆಂದು ಹೆಸರು ಪಡೆದಿರುವ ಎಸ್‍ಪಿ ಆರ್ ಚೇತನ್ ಅವರು ಸ್ವಂತ ತಾಯಿ ಮಗಳಿಂದ ದೂರು ಪಡೆದು ಪ್ರಕರಣ ದಾಖಲಿಸುವಂತೆ ಕೆಳ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ಗಾಂಧಿನಗರ ಪೊಲೀಸರು ಮಾತ್ರ ಕೇವಲ ಪತ್ನಿಯಿಂದ ಮಾತ್ರ ದೂರು ಪಡೆದು ವಿಕೃತ ಕಾಮಿ ಶ್ರೀನಿವಾಸರೆಡ್ಡಿಯನ್ನು ಬಂಧಿಸದೆ ಇರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.