ಬೆಂಗಳೂರು: ಶ್ರೀಮಂತ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ ಅವರೊಂದಿಗೆ ಸರಸದ ದೃಶ್ಯಗಳನ್ನು ಸೆರೆ ಹಿಡಿದು ನಂತರ ಬ್ಯಾಕ್ ಮೇಲ್ ಮಾಡುತ್ತಿದ್ದ ತಂಡವನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಕಿರುತೆರೆ ನಟಿ ಹರಿಣಿ ಎಂಬ ಹೆಸರು ಕೇಳಿಬಂದಿದೆ. ಮತ್ತೇ ಮೂವರು ಲೋಕೇಶ್, ಬ್ರಿಜೇಶ್ ಹಾಗೂ ಸುನಿಲ್ ಆರೋಪಿಗಳಾಗಿದ್ದಾರೆ.
ಫ್ಯಾನ್‌ನಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿ ಶ್ರೀಮಂತ ವ್ಯಕ್ತಿಗಳೊಂದಿಗೆ ಸರಸದ ದೃಶ್ಯಗಳನ್ನು ಸೆರೆಹಿಡಿದು ನಂತರ ಹಣಕ್ಕಾಗಿ ಬ್ಲ್ಯಾಕ್ ಮೇಲೆ ಮಾಡುತ್ತಿದ್ದರು. ಹಣ ನೀಡದಿದ್ದರೆ ಅಂತರ್ಜಾಲಕ್ಕೆ ಬಿಡುವ ಅಥವಾ ಅತ್ಯಾಚಾರವೆಸಗಿದ ಆರೋಪ ದಾಖಲಿಸಲಾಗುವುದು ಎಂದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎನ್ನಲಾಗಿದೆ.
ಹನಿ ಟ್ರ್ಯಾಪ್ ಸಂಬಂಧ ಎಂಜಿನಿಯರ್ ವಿನೋದ್ ಕುಮಾರ್ ಎಂಬುವವರು ನಗರದ ಜ್ಞಾನಭಾರತಿ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಚರಣೆ ನಡೆಸಿದ ಪೊಲೀಸರು, ನಾಲ್ವರೂ ಆರೋಪಿಗಳನ್ನು ಬಂಧಿಸಿದ್ದು ಅವರಿಂದ ಒಂದು ಕಾರು, ಒಂದು ಲಕ್ಷ ನಗದು ಹಣ ಹಾಗೂ 4 ಲಕ್ಷ ನಮೂದಿಸಿದ್ದ ಚೆಕ್‌ನ್ನು ವಶಕ್ಕೆ ಪಡೆದಿದ್ದಾರೆ.