ಕರ್ನಾಟಕ

ಅಡಿಕೆಗೊನೆಯಂತೆ ಕಾಣುವ ಬಾಳೆಗೊನೆ ..!

Pinterest LinkedIn Tumblr

banana

ತುಮಕೂರು,ಆ.3: ಅಡಿಕೆಗೊನೆ ಮಾದರಿಯಲ್ಲಿ ಬಾಳೆಗೊನೆ ಮೂಡುವ ಮೂಲಕ ಪ್ರಕೃತಿ ವಿಸ್ಮಯ ಸೃಷ್ಟಿಸಿದೆ. ಇದನ್ನು ನೋಡಿದರೆ ಅಚ್ಚರಿಯಾಗಬಹದು. ಥೇಟ್ ಅಡಿಕೆಗೊನೆಯಂತೆ ಕಾಣುತ್ತದೆ. ಆದರೆ, ಇದು ಬಾಳೆಗಿಡದಲ್ಲಿ ಬಿಟ್ಟ ಬಾಳೆ ಹಣ್ಣಿನ ಗೊನೆ. ಚಿತ್ರದುರ್ಗ ಮೂಲದ ಷಣ್ಮುಗಪ್ಪ ಎಂಬ ಬಾಳೆಗೊನೆ ವ್ಯಾಪಾರಿ ಕೇರಳದ ಮಣ್ಣೆಕುಪ್ಪ ಎಂಬಲ್ಲಿ ಬಾಳೆ ತೋಟದಲ್ಲಿನ ಬಾಳೆಗೊನೆಗಳನ್ನು ಖರೀದಿಸಿದ್ದ. ಎಲ್ಲ ಗೊನೆಗಳನ್ನು ಲಾರಿಗಳಲ್ಲಿ ತುಂಬಿಕೊಂಡು ವ್ಯಾಪಾರಕ್ಕೆಂದು

ತುಮಕೂರಿನ ಎಪಿಎಂಸಿ ಮಾರುಕಟ್ಟೆಗೆ ತಂದು ಮಾರಾಟ ಮಾಡುವ ಸಂದರ್ಭದಲ್ಲಿ ಇವರಿಗೆ ಅಚ್ಚರಿ ಕಾದಿತ್ತು. ಅಡಿಕೆ ಗೊನೆ ಮಾದರಿಯಲ್ಲಿ ಬಾಳೆಗೊನೆಯೊಂದು ಕಂಡು ಬಂತು. ಇದು ಸೃಷ್ಟಿಯ ವೈಚಿತ್ರವಾಗಿತ್ತು. ನೋಡಿದವರೆಲ್ಲ ಅಚ್ಚರಿಪಟ್ಟರು. ಈ ಗೊನೆಯಲ್ಲಿದ್ದ ಬಾಳೆಹಣ್ಣುಗಳು ಅಡಿಕೆಕಾಯಿ ಮಾದರಿಯಲ್ಲೇ ಇದ್ದದ್ದು ಕೂಡ ಮತ್ತಷ್ಟು ಆಶ್ಚರ್ಯ ಉಂಟು ಮಾಡಿತ್ತು.ತುಮಕೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಇಡೀದಿನ ಅಡಿಕೆ ಮಾದರಿಯ ಬಾಳೆಗೊನೆಯದ್ದೇ ಚರ್ಚೆ ನಡೆದಿದ್ದು ವಿಶೇಷವಾಗಿತ್ತು.

Write A Comment