ಬೆಂಗಳೂರು, ಆ.4-ಬೈಕ್‌ನಲ್ಲಿ ತೆರಳುತ್ತಿದ್ದ ಟೆಕ್ಕಿಯೋರ್ವನನ್ನು ತಡೆದ ಮಂಗಳಮುಖಿಯರು ಹಲ್ಲೆ ನಡೆಸಿ ಉಂಗುರ ಹಾಗೂ ನಗದು ದೋಚಿ ಪರಾರಿಯಾದ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್‌ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮಹೇಶ್ ಎಂಬುವವರೇ ಮಂಗಳಮುಖಿಯರಿಂದ ಹಲ್ಲೆಗೊಳಗಾಗಿ ನಗದು ಮತ್ತು ಉಂಗುರ ಕಳೆದುಕೊಂಡ ಟೆಕ್ಕಿ.
ಈತ ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಮಂಗಳಮುಖಿಯರು ಈತನನ್ನು ತಡೆದು ಹಲ್ಲೆ ನಡೆಸಿ, 1500ರೂ. ನಗದು ಹಾಗೂ ಚಿನ್ನದ ಉಂಗುರ ಕಸಿದುಕೊಂಡು ಪರಾರಿಯಾಗಿದ್ದಾರೆ.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.