ಅಂತರಾಷ್ಟ್ರೀಯ

ಸಂತಾನಹೀನತೆ ಬಗ್ಗೆ ಚಿಂತಿಸ ಬೇಡಿ…

Pinterest LinkedIn Tumblr

preg

ಇಂದು ಸಂತಾನಹೀನತೆ ಬಹಳ ದೊಡ್ಡ ಸಮಸ್ಯೆಯಾಗಿದೆ. ಶೇ. 7-8 ರಷ್ಟು ದಂಪತಿ ಸಂತಾನಹೀನತೆಯಿಂದ ಬಳಲುತ್ತಿದ್ದಾರೆ. ಕಾರಣ ಬದಲಾಗುತ್ತಿರುವ ಜೀವನ ಶೈಲಿ, ಆಹಾರ ಪದ್ಧತಿ, ಅತಿಯಾದ ಮಾನಸಿಕ ಒತ್ತಡ, ಕಲುಷಿತ ವಾತಾವರಣ ಮೊದಲಾದ ಸಮಸ್ಯೆಗಳ ಹೆಚ್ಚಳದಿಂದಾಗಿ ಭವಿಷ್ಯದಲ್ಲಿ ಈ ಸಮಸ್ಯೆ ಇನ್ನೂ ಉಲ್ಬಣಿಸಬಹುದು. ಪ್ರಸ್ತುತ ಗಣತಿಯ ಪ್ರಕಾರ ಸ್ತ್ರೀಯರಲ್ಲಿ ಶೇ.50 ಹಾಗೂ ಪುರುಷರಲ್ಲಿ ಶೇ.45 ರಷ್ಟು ಸಂತಾನಲೋಪಗಳು ಕಾಣಿಸಿಕೊಂಡಿವೆ.

ಸಂತಾನಹೀನತೆಯ ಎರಡು ರೀತಿಗಳು: 1.ಪ್ರೈಮರಿ ಇನ್‌ಫರ್ಟಿಲಿಟಿ: ಸ್ತ್ರೀಯರು ವಿವಾಹದ ನಂತರ 2 ವರ್ಷಗಳ ಕಾಲ ಸಾಧಾರಣ ಲೈಂಗಿಕ ಜೀವನ ನಡೆಸಿಯೂ ಗರ್ಭಧರಿಸದಿರುವುದು. 2.ಸೆಕೆಂಡರಿ ಇನ್‌ಫರ್ಟಿಲಿಟಿ :ಒಂದು ಬಾರಿ ಗರ್ಭ ಧರಿಸಿ ಮಕ್ಕಳಾಗದೇ ಇರುವುದು ಅಥವಾ ಗರ್ಭಸ್ರಾವಕ್ಕೆ ಗುರಿಯಾಗಿ ಎರಡನೇ ಬಾರಿ ಗರ್ಭ ಧರಿಸದೇ ಇರುವುದು.

ಪುರುಷರಲ್ಲಿ ಸಂತಾನಹೀನತೆ: 1.ಅಜೊಸ್ಟರ‌್ಮಿಯಾ: ವೀರ‌್ಯಾಣುಗಳು ಇಲ್ಲದಿರುವುದು, ಇಲ್ಲವೇ ವೀರ‌್ಯಾಣುಗಳ ಉತ್ಪತ್ತಿಯಾಗದೇ ಇರುವುದು.

2.ಅಸ್ಥಿನೋಸ್ಟರ‌್ಮಿಯಾ: ವೀರ‌್ಯಾಣುಗಳು ಉತ್ಪತ್ತಿಯಾದಾಗ ಅವುಗಳ ಚಲನವಲನ ಕುಂಠಿತಗೊಳ್ಳುವುದು. ವೀರ‌್ಯಾಣು ಉತ್ಪಾದನೆಯಲ್ಲಿನ ಲೋಪಗಳಿಂದ ಸಂತಾನೋತ್ಪತ್ತಿಗೆ ಅವಕಾಶ ಇರುವುದಿಲ್ಲ. ವೃಷಣದಲ್ಲಿನ ರಕ್ತನಾಳಗಳು ಊತಕ್ಕೆ ಗುರಿಯಾಗುವುದರಿಂದ ಬರುವ ವೆರಿಕೊನೇಲ್ ಎಂಬ ಸಮಸ್ಯೆ ಸಂತಾನಹೀನತಗೆ ಕಾರಣವಾಗುತ್ತದೆ. ವೃಷಣಗಳು ಇರುವ ಅಂಡಗಳಲ್ಲಿ ನೀರು ತುಂಬುವುದನ್ನು ಹೈಡ್ರೋಸಿಲ್ ಎನ್ನುತ್ತಾರೆ. ಈ ಕಾರಣದಿಂದ ವೀರ‌್ಯಾಣುಗಳ ಉತ್ಪತ್ತಿಯು ತಗ್ಗುವುದರಿಂದ ಸಂತಾನಹೀನತೆಗೆ ಕಾರಣವಾಗುತ್ತದೆ.

ಸ್ತ್ರೀಯರಲ್ಲಿ ಸಂತಾನಹೀನತೆ: 1.ಸ್ತ್ರೀ ಪ್ರತ್ಯೋತ್ಪತ್ತಿ ವ್ಯವಸ್ಥೆಯಲ್ಲಿನ ಲೋಪಗಳು: ಗರ್ಭಾಶಯ ಚಿಕ್ಕದಾಗಿರುವುದು (ಇನ್ ಫಂಟೈಲ್ ಯುಟರಸ್), ಗರ್ಭಾಶಯ ಇಲ್ಲದಿರುವುದು, ಎರಡು ಹೋಳಾಗಿರುವ ಗರ್ಭಕೋಶ(ಬೈ ಕಾರ‌್ನುಯೇಟ್ ಯುಟರಸ್), ಫೆಲೋಫಿಯನ್ ಟ್ಯೂಬ್ಸ್ ಇಲ್ಲದಿರುವುದು, ಇಲ್ಲವೇ ಟ್ಯೂಬ್ಸ್ ಮುಚ್ಚಿಕ್ಕೊಂಡಿರುವುದು(ಟ್ಯೂಬಲ್ ಬ್ಲಾಕ್), ಅಂಡಾಶಯ ಸರಿಯಾಗಿ ಬೆಳವಣಿಗೆ ಆಗದಿರುವುದು, ಯೋನಿಯ ಮಾರ್ಗ ಚಿಕ್ಕದಾಗಿರುವುದು, ಇಲ್ಲವೆ ಮುಚ್ಚಿಕೊಂಡಿರುವುದು.

2.ಹಾರ್ಮೋನ್ ಸಮಸ್ಯೆಯಿಂದ ಸಂತಾನಹೀನತೆ: ಥೈರಾಯ್ಡ್ ಸಮಸ್ಯೆಗಳಾದ ಹೈಪೋ ಥೈರಾಯ್ಡ್, ಹೈಪರ್ ಥೈರಾಯ್ಡ್, ಪಿಸಿಒಡಿ, ಎಫ್‌ಎಸ್‌ಎಚ್‌ಎಲ್‌ಎಚ್, ಪ್ರೋಲ್ಯಾಕ್ಟಿನ್ ಹಾರ್ಮೋನ್‌ಗಳ ಅಸಮತೋಲನ, ಋತುಚಕ್ರದಲ್ಲಿ ಅಸಮತೋಲನ, ಎಂಡೋಮೆಟ್ರಿಯೋಸಿಸ್ ಅಂತಹ ಸಮಸ್ಯೆಗಳು ಸಂತಾನಹೀನತೆಗೆ ಕಾರಣವಾಗುತ್ತದೆ. ಯೋನಿ, ಗರ್ಭಾಶಯದಲ್ಲಿ ಫೈಬ್ರಾಯಿಡ್ ಉಂಟಾಗಿ ಫೆಲೋಪಿಯನ್ ಟ್ಯೂಬ್‌ಗೆ ಅಡ್ಡವಾಗಿರುವುದರಿಂದ ಸಂತಾನಹೀನತೆ ಉಂಟಾಗುತ್ತದೆ.

ಸಂತಾನಹೀನತೆ ಪರೀಕ್ಷೆಗಳು: ಪುರುಷರಿಗೆ: ಸಿಬಿಸಿ., ಇಎಸ್‌ಆರ್, ಸಿಯುಇ, ಯುಎಸ್‌ಜಿ, ಅಬ್ಡಮಿನ್ ಯುಎಸ್‌ಜಿ, ಸ್ಕ್ರೋಟಮ್, ಕಂಪ್ಲೀಟ್ ಸೆಮನ್‌ಅನಾಲೈಸರ್, ಸೆರಮ್ ಟೆಸ್ಟೋಸ್ಟಿರಾನ್, ಥೈರಾಯ್ಡ್ ಪ್ರೊಫೈಲ್, ಎಫ್‌ಎಸ್‌ಎಚ್, ಎಲ್‌ಎಚ್, ಟೆಸ್ಟಕ್ಯೂಲಾರ್ ಬಯಾಪ್ಸಿ.

ಸ್ತ್ರೀಯರಿಗೆ: ಸಿಬಿಸಿ, ಇಎಸ್‌ಆರ್, ಸಿಯುಇ, ಎಫ್‌ಎಸ್‌ಎಚ್‌ಎಲ್‌ಎಚ್,ಪ್ರೋಲ್ಯಾಕ್ಟಿನ್, ಥೈರಾಯ್ಡ್ ಪ್ರೊಫೈಲ್, ಯುಎಸ್‌ಜಿ, ಅಬ್ಡಮಿನ್, ಎಚ್‌ಎಸ್‌ಜಿ, ಲಾಪ್ರೋಸ್ಕೋಪಿ, ಫಾಲಿಕ್ಯೂಲಾರ್ ಸ್ಟಡಿ.

ಹೋಮಿಯೋಕೇರ್ ಇಂಟರ್‌ನ್ಯಾಷನಲ್ ಚಿಕಿತ್ಸೆ: ಹೋಮಿಯೋಕೇರ್ ಇಂಟರ್‌ನ್ಯಾಷನಲ್ ಚಿಕಿತ್ಸೆಯಲ್ಲಿ ಕಾನ್ಸ್ಪಿಟ್ಯೂಷನಲ್ ವಿಧಾನದಿಂದ ಸ್ತ್ರೀ ಪುರುಷರಲ್ಲಿ ಸಂತಾನಹೀನತೆ ಲೋಪವನ್ನು ಸರಿಪಡಿಸಿ, ಶಾಶ್ವತ ಪರಿಹಾರವನ್ನು ನೀಡುವುದಲ್ಲದೆ ಎರಡನೆಯ ಅಥವಾ ಮೂರನೆಯ ಸಂತಾನಕ್ಕೆ ಮಾರ್ಗ ಸುಗಮ ಮಾಡುತ್ತದೆ. ಸಂತಾನಹೀನತೆಗೆ ಹೋಮಿಯೋಪಥಿ ವೈದ್ಯ ವಿಧಾನದಿಂದ 50-60ರಷ್ಟು ಒಳ್ಳೆಯ ಫಲಿತಾಂಶವನ್ನು ನೀಡಲಾಗುವುದು.

ವಿವರಗಳಿಗೆ ಹೋಮಿಯೋಕೇರ್ ಇಂಟರ್‌ನ್ಯಾಷನಲ್, ಉಚಿತ ಸಲಹೆಗಾಗಿ 1800 108 1212. ಶಾಖೆಗಳು:ಬೆಂಗಳೂರು-ಜಯನಗರ, ಮಲ್ಲೇಶ್ವರಂ, ಇಂದಿರಾ ನಗರ, ಹುಬ್ಬಳ್ಳಿ, ಮಂಗಳೂರು, ದಾವಣಗೆರೆ, ಬಳ್ಳಾರಿ, ಮೈಸೂರು, ಕಲಬುರಗಿ, ಬೆಳಗಾವಿ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು.

Write A Comment