ಕರ್ನಾಟಕ

ಬೆಟ್ಟದ ಮೇಲಿಂದ ಒಟ್ಟಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಜೋಡಿ

Pinterest LinkedIn Tumblr

pgಕೊಳ್ಳೇಗಾಲ, ಆ.6-ಬೆಟ್ಟದ ಮೇಲಿಂದ ಹಾರಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಲೇಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕಾವೇರಿ ವನ್ಯಜೀವಿ ವಿಭಾಗದ ಇಂಡಿಗನತ್ತ ಅರಣ್ಯ ಪ್ರದೇಶದಲ್ಲಿ ಓರ್ವ ಪುರುಷ ಹಾಗೂ ಓರ್ವ ಮಹಿಳೆ ಜೊತೆಯಲ್ಲಿ ಬೆಟ್ಟದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರ ಹೆಸರು ವಿಳಾಸ ತಿಳಿದು ಬಂದಿಲ್ಲ.ಇಂದು ಬೆಳಗ್ಗೆ ಬೆಟ್ಟದ ಕಣಿವೆಯಲ್ಲಿ ಶವಗಳನ್ನು ಕಂಡ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಸುದ್ದಿ ತಿಳಿದ ಕೂಡಲೇ ಮಲೇಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸಾರ್ವಜನಿಕರು ಸ್ಥಳಕ್ಕಾಗಮಿಸಿ ಶವಗಳನ್ನು ತೆಗೆಯಲು ಮುಂದಾಗಿದ್ದಾರೆ.ಆಳವಾದ ಕಂದಕದಲ್ಲಿ ಶವಗಳು ಸಿಲುಕಿಕೊಂಡಿವೆ. ಮಳೆ ಸುರಿಯುತ್ತಿರುವುದರಿಂದ ಶವ ಮೇಲೆತ್ತುವ ಕಾರ್ಯಕ್ಕೆ ಅಡಚಣೆಯಾಗುತ್ತಿದೆ.ಶವಗಳನ್ನು ಹೊರತೆಗೆದ ನಂತರವಷ್ಟೇ ಆತ್ಮಹತ್ಯೆ ಮಾಡಿಕೊಂಡವರ ಹೆಸರು ಹಾಗೂ ವಿಳಾಸ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇವರು ಪ್ರೇಮಿಗಳೋ ಅಥವಾ ದಂಪತಿಯೋ  ಎಂಬುದು ತಿಳಿದುಬಂದಿಲ್ಲ.ಮಲೇಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment