- ಬೆಂಗಳೂರು: ಪೋಲೀಸ್ ಪೇದೆ ಹುದ್ದೆಗೆ ಗುಡ್ ಬೈ ಹೇಳಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಜೆ.ಎಂ.ಸವಿತಾ ಅವರು ಸೋಮವಾರ ವಾರ್ಡ್ 156-ಶ್ರೀನಗರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
35 ವರ್ಷದ ಸವಿತಾ ಅವರು ಬಿಎ ಪದವೀಧರೆಯಾಗಿದ್ದು, ಕಳೆದ 12 ವರ್ಷಗಳಿಂದ ಪೊಲೀಸ್ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದರು. 2003ರಿಂದ 2006ರವರೆಗೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಹಾಗೂ 2006ರಿಂದ 2015ರವರೆಗೆ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಈ ಬಗ್ಗೆ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿರುವ ಸವಿತಾ, ‘ಒಬ್ಬ ಪೊಲೀಸ್ ಪೇದೆಯಾಗಿ ಸಂಪೂರ್ಣವಾಗಿ ಜನ ಸೇವೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಕೆಲಸಕ್ಕೆ ರಾಜಿನಾಮೆ ನೀಡಿ, ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ರಾಜಕಾರಣಿಗಳಿಗಿಂತ ನಾನು ಉತ್ತಮವಾಗಿ ಕೆಲಸ ಮಾಡಬಲ್ಲೆ ಎಂಬ ವಿಶ್ವಾಸವಿದೆ. ಒಂದು ವೇಳೆ ನಾನು ಪೊಲೀಸ್ ಪೇದೆಯಾಗಿ ಆಯ್ಕೆಯಾಗದಿದ್ದರೆ, ಇದಕ್ಕೂ ಮುನ್ನವೇ ನಾನು ರಾಜಕೀಯದಲ್ಲಿರುತ್ತಿದ್ದೆ’ ಎಂದಿದ್ದಾರೆ.
‘ನಾನು ರಾಜಿನಾಮೆ ನೀಡುತ್ತಿದ್ದೇನೆ ಅಂತ ನನ್ನ ಸಹೋದ್ಯೋಗಿಗಳಿಗೆ ಹಾಗೂ ಹಿರಿಯ ಅಧಿಕಾರಿಗಳಿಗೆ ಹೇಳಿದಾಗ, ಅವರು ಶಾಕ್ ಆದರು. ನಂತರ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದಾಗ ಖುಷಿಯಾದರು ಮತ್ತು ಒಳ್ಳೆಯದಾಗಲಿ ಎಂದು ವಿಶ್ ಮಾಡಿದರು’ ಎಂದು ಸವಿತಾ ಹೇಳಿದ್ದಾರೆ.
ಕರ್ನಾಟಕ