ಕರ್ನಾಟಕ

ಬಿಬಿಎಂಪಿ ಚುನಾವಣೆ ಪ್ರಚಾರಕ್ಕಿಳಿಯಲಿದ್ದಾರೆ ಸ್ಟಾರ್ ನಟ,ನಟಿಯರು

Pinterest LinkedIn Tumblr

stars

ಬೆಂಗಳೂರು, ಆ.11: ಬಿಬಿಎಂಪಿ ಚುನಾವಣೆಯ ಪ್ರಚಾರಕ್ಕೆ ಕಾಂಗ್ರೆಸ್ ಗ್ಲಾಮರ್ ಟಚ್ ನೀಡಲು ಮುಂದಾಗಿದೆ. ಬಿಬಿಎಂಪಿಯ ಮತದಾರರನ್ನು ಸೆಳೆಯಲು ಮೆಗಾಸ್ಟಾರ್ ಚಿರಂಜೀವಿ, ಕುಷ್ಬು, ಸ್ಯಾಂಡಲ್‌ವುಡ್‌ನ ನಟಿ ರಮ್ಯಾ, ಭಾವನಾ ಸೇರಿದಂತೆ ಘಟಾನುಘಟಿ ನಟ-ನಟಿಯರನ್ನು ಪ್ರಚಾರದ ಕಣಕ್ಕಿಳಿಸುತ್ತಿದೆ.ಈಗಾಗಲೇ ಪ್ರಾರಂಭವಾಗಿರುವ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಚಿವರು, ಶಾಸಕರು ಹಾಗೂ ಹಿರಿಯ ನಾಯಕರ ಪಟ್ಟಿ ಸಿದ್ದವಾಗಿದೆ.

ಅವರ ಜತೆಯಲ್ಲಿ ಚಿರಂಜೀವಿ, ಕುಷ್ಬುರವರಂತಹ ನಟ-ನಟಿಯರನ್ನು ಸೇರಿಸಲಾಗಿದೆ.ಕ್ರಿಕೆಟ್ ದೇವರು, ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ಅವರನ್ನೂ ಆಹ್ವಾನಿಸುವ ಪ್ರಯತ್ನಗಳು ನಡೆದಿವೆ. ಇನ್ನೊಬ್ಬ ಕ್ರಿಕೆಟಿಗ ಅಜರುದ್ದೀನ್ ಕೆಲ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವ ಭರವಸೆ ನೀಡಿದ್ದಾರೆ.

ಆಯ್ದ ಕ್ಷೇತ್ರಗಳಲ್ಲಿ ಕ್ರಿಕೆಟಿಗರು ಹಾಗೂ ನಟ-ನಟಿರಯನ್ನು ಬಳಸಿಕೊಂಡು ಪ್ರಚಾರ ನಡೆಸಲು ತಂತ್ರಗಾರಿಕೆ ರೂಪಿಸಲಾಗಿದೆ.ಬಿಜೆಪಿ ಕೇಂದ್ರ ಸಚಿವರನ್ನು ಪ್ರಚಾರ ಕಣಕ್ಕಿಳಿಸಲು ಕಾರ್ಯಕ್ರಮ ಪಟ್ಟಿ ತಯಾರಿಸಿರುವಂತೆ ಕಾಂಗ್ರೆಸ್ ಇನ್ನೂ ಒಂದು ಕೈ ಮೇಲಾಗಿ ಹೈಕಮಾಂಡ್‌ನ ಉನ್ನತ ನಾಯಕರುಗಳನ್ನು ಕರೆಸುವ ಪ್ರಯತ್ನ ನಡೆಸಿದೆ.

Write A Comment