ಕರ್ನಾಟಕ

ನೆಟ್ ನ್ಯೂಟ್ರಾಲಿಟಿಗೆ ಎಂಟಿಎಸ್ ಬೆಂಬಲ

Pinterest LinkedIn Tumblr

mts11ಬೆಂಗಳೂರು: ಸಿಸ್ಟೆಮಾ ಶ್ಯಾಮ್ ಟೆಲಿಸರ್ವೀಸಸ್ ಲಿಮಿಟೆಡ್ (ಎಸ್‍ಎಸ್‍ಟಿಎಲ್) ದೇಶದಲ್ಲಿ ಎಂಟಿಎಸ್ ಹೆಸರಿನಡಿ ಟೆಲಿಕಾಂ ಸೇವೆಯನ್ನು ಒದಗಿಸುತ್ತಿದ್ದು, ಇಂದು ಒಪೆನ್ ವೆಬ್ ಡಾಟಾ ಯೋಜನೆ ಮೂಲಕ ನೆಟ್ ನ್ಯೂಟ್ರಾಲಿಟಿ ಬದ್ಧತೆಯನ್ನು ತನ್ನ ಪ್ರಿಪೇಯ್ಡ್ ಮತ್ತು ಪೋಸ್ಟ್‍ಪೇಯ್ಡ್ ಗ್ರಾಹಕರಿಗಾಗಿ ಪ್ರಕಟಿಸಿತು.

ಸ್ಪರ್ಧಾತ್ಮಕವಾದ ದರವನ್ನು ನಿಗದಿಪಡಿಸಲಾದ ಈ ಕೊಡುಗೆಯಲ್ಲಿ ಹೆಚ್ಚಿನ ಪ್ರಮಾಣದ ಡಾಟಾ ಲಭ್ಯತೆ ಇದ್ದು, ವೆಬ್ ಜಾಲ ಬಳಕೆ, ಚರ್ಚೆ, ಕರೆ ಮಾಡಲು ಮುಕ್ತ ಅವಕಾಶವಿದೆ.

ಈ ಕಾರ್ಯಕ್ರಮವನ್ನು ಎಂಟಿಎಸ್ ದೊಡ್ಡ ಪ್ರಮಾಣದ ಗ್ರಾಹಕ ಕೇಂದ್ರೀತ ಕಾರ್ಯಕ್ರಮವನ್ನು ಆಧರಿಸಿದ್ದು, ಕಾನೂನುಬದ್ಧವಾದ ಎಲ್ಲ ವೆಬ್ ಜಾಲಗಳಿಗೆ ಭೇಟಿ ಮಾಡಲು, ಇಂಟರ್‍ನೆಟ್ ಸಾಮಥ್ರ್ಯ ಕುರಿತು ತನ್ನ ಬದ್ಧತೆಯನ್ನು ಪುನರುಚ್ಛರಿಸಲು, ಮುಕ್ತ ವಾಕ್ ಸ್ವಾತಂತ್ರ್ಯ ನೀಡುವುದಕ್ಕೆ ಬದ್ಧವಾಗಿದೆ.

`ನೆಟ್ ನ್ಯೂಟ್ರಾಲಿಟಿಗೆ ಎಂಟಿಎಸ್ ಇಂಡಿಯಾದ ಪೂರ್ಣ ಬೆಂಬಲ ಮತ್ತು ಬದ್ಧತೆಯನ್ನು ಪ್ರದರ್ಶಿಸಲು ಸಂತಸಪಡಲಿದೆ. ಒಂದು ಸಂಘಟನೆಯಾಗಿ, ನಾವು ಪಾಲುದಾರರ ಆಸಕ್ತಿಯನ್ನು ಕಾಪಾಡಲು ಬದ್ಧವಾಗಿದ್ದೇವೆ. ನಾವು ಬಳಕೆದಾರರಿಗೆ ಅಂಶ, ವೆಬ್ ಜಾಲ, ಅಪ್ಲಿಕೇಷನ್, ಟೈಪ್ ಕುರಿತು ಮುಕ್ತ ಅವಕಾಶ ನೀಡಲು, ಆ ಮೂಲಕ ಸಂವಹನ ಮಾಧ್ಯಮ ಉತ್ತಮಪಡಿಸಲು ಒತ್ತು ನೀಡಲಿದೆ. ಈ ಬದ್ಧತೆ ಪ್ರದರ್ಶನಕ್ಕೆ ಅನುಗುಣವಾಗಿ ಎಂಟಿಎಸ್ ಈಗ ಒಪೆನ್‍ವೆಬ್ ಡಾಟಾ ಯೋಜನೆಯನ್ನು ಪ್ರಕಟಿಸಿದ್ದು, ಗ್ರಾಹಕರಿಗೆ ಮುಕ್ತವಾಗಿ ನೆಟ್ ಜಾಲ, ಕರೆ ಮತ್ತು ಚರ್ಚೆಗೆ ಗ್ರಾಹಕರಿಗೆ ಮುಕ್ತ ಅವಕಾಶ ನೀಡಲಿದೆ’ಎಂದು ಎಂಟಿಎಸ್ ಇಂಡಿಯಾದ ಚೀಫ್ ಮಾರ್ಕೆಟಿಂಗ್ ಮತ್ತು ಬ್ರಾಂಡ್ ಅಧಿಕಾರಿ ಲಿಯೊನಿಡ್ ಮುಸಟೋವ್ ಅವರು ಹೇಳಿದ್ದಾರೆ.

ಇದನ್ನು ಆಧರಿಸಿ ಎಂಟಿಎಸ್ ಭಾರತದಲ್ಲಿ ಡಾಟಾ ಕೇಂದ್ರೀತವಾದ, ಧ್ವನಿ ಆಧಾರಿತವಾದ ಟೆಲಿಕಾಂ ಸೇವೆಯನ್ನು ಒದಗಿಸಲು ಬದ್ದವಾಗಿದೆ. ಪೂರಕವಾಗಿ ಒಪೆನ್ ವೆಬ್ ಡಾಟಾ ಯೋಜನೆಯನ್ನು ಪ್ರಕಟಿಸಿದೆ ಎಂದು ಹೇಳಿದರು.

Write A Comment