ಕರ್ನಾಟಕ

ವಟಂ ಪತ್ರಿಕೋದ್ಯಮದ ಭೀಷ್ಮ ಸಿದ್ದು ಬಣ್ಣನೆ

Pinterest LinkedIn Tumblr

vatam

ಮೈಸೂರು, ಆ.12: ಹಿರಿಯ ಪತ್ರಕರ್ತ ಕೃಷ್ಣ ವಟ್ಟಂ ಅವರು ಪತ್ರಿಕೋದ್ಯಮದ ಭೀಷ್ಮ. ಅವರ ಅಗಲಿಕೆ ಪತ್ರಿಕೋದ್ಯಮಕ್ಕೆ ತುಂಬಲಾಗದ ನಷ್ಟ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಲ್ಲಿ ಮಾತನಾಡಿದ ಅವರು, ಕೃಷ್ಣವಟ್ಟಂ ಹಾಗೂ ತಮ್ಮ ನಡುವೆ 40 ವರ್ಷಗಳ ಒಡನಾಟವಿತ್ತು ಎಂದು ಹೇಳಿದರು. ನಾನು ವಕೀಲ ವೃತ್ತಿ ಆರಂಭಿಸಿದ ದಿನಗಳಿಂದಲೂ ನನಗೂ ಅವರಿಗೂ ಪರಿಚಯ. ಇಡೀ ರಾಜ್ಯಕ್ಕೆ ಅವರೊಬ್ಬ ಮಾದರಿ ಪತ್ರಕರ್ತ. ಅಂತಹ ಹಿರಿಯ ಪತ್ರಕರ್ತರನ್ನು ಕಳೆದುಕೊಂಡ ಪತ್ರಿಕೋದ್ಯಮ ಕ್ಷೇತ್ರ ಬಡವಾಗಿದೆ.

ಅವರ ಆದರ್ಶ ಇಂದಿನ ಪತ್ರಕರ್ತರಿಗೆ ದಾರಿ ದೀಪವಾಗಲಿ. ಅಲ್ಲದೇ, ವಟ್ಟಂ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಿದ್ದರಾಮಯ್ಯ ಹೇಳಿದರು.

Write A Comment