ಕರ್ನಾಟಕ

ಬಿಬಿಎಂಪಿ ಚುನಾವಣೆ ಫಲಿತಾಂಶ: ಅತಿದೊಡ್ಡ ಪಕ್ಷ ಬಿಜೆಪಿಗೆ ಶತಕ ಸಂಭ್ರಮ; ಕಾಂಗ್ರೆಸ್ 76, ಜೆಡಿಎಸ್ 14, ಇತರ 8

Pinterest LinkedIn Tumblr

BJP

ಬೆಂಗಳೂರು: ತೀವ್ರ ಕುತೂಹಲ ಮೂಡಿಸಿರುವ ಬಿಬಿಎಂಪಿ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿಯು 100 ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಬಹುಮತದ ಅಂಚಿನಲ್ಲಿ ಬಂದು ನಿಂತಿದೆ. ಕಾಂಗ್ರೆಸ್ 76, ಜೆಡಿಎಸ್ 14 ಹಾಗೂ ಇತರರು 8 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮಂಗಳವಾರ ಬೆಳಗ್ಗೆ ಮತ ಎಣಿಕೆ ಆರಂಭವಾದಾಗಿನಿಂದಲೇ ಮುನ್ನಡೆ ಕಾಯ್ದುಕೊಂಡಿದ್ದ ಬಿಜೆಪಿ, ಅಂತಿಮವಾಗಿ ಬಹುಮತದ ರೇಖೆಯಿಂದ 3 ಮತಗಳಿಂದ ದೂರವುಳಿಯಿತು. ಪಕ್ಷೇತರರ ನೆರವು ದೊರೆಯುವುದು ನಿಚ್ಚಳವಾಗಿರುವುದರಿಂದ, ಅದು ಪುನಃ ಅಧಿಕಾರ ಗದ್ದುಗೆಗೆ ಏರುವುದು ಖಚಿತವಾಗಿದೆ.

ಕಾಂಗ್ರೆಸ್ ತನ್ನ ಸದಸ್ಯ ಬಲವನ್ನು 76ಕ್ಕೆ ಏರಿಸಿಕೊಂಡಿದ್ದರೆ, ಜೆಡಿಎಸ್ ಕಳೆದ ಬಾರಿಗಿಂತ ಒಂದು ಸ್ಥಾನ ಕಳೆದುಕೊಂಡು 14ಕ್ಕೆ ತೃಪ್ತಿ ಪಡಬೇಕಾಯಿತು. ಪಕ್ಷೇತರರು ಕಳೆದ ಬಾರಿ 7 ಇದ್ದರೆ, ಈ ಬಾರಿ 8 ಸ್ಥಾನ ದಕ್ಕಿಸಿಕೊಂಡಿದ್ದಾರೆ.

ನಿರಂತರ ಅನಿಶ್ಚಿತತೆ ಬಳಿಕ ನಡೆದ ಪಾಲಿಕೆ ಚುನಾವಣೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರರು ಸೇರಿದಂತೆ 1,120 ಮಂದಿ ಕಣದಲ್ಲಿದ್ದರು. ಪಾಲಿಕೆಯಲ್ಲಿ ಸರಾಸರಿ 40,000 ಮತದಾರರಿದ್ದು, ಈ ಬಾರಿ ಶೇ.49.31ರಷ್ಟುಮತದಾನವಾಗಿತ್ತು. ಬೆಂಗಳೂರಿನಾದ್ಯಂತ ಗೆದ್ದ ಅಭ್ಯರ್ಥಿಗಳ ಪರ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.

ಯಾರಿಗೆ ಗೆಲುವು? ಯಾರಿಗೆ ಸೋಲು?

ರಾಧಾಕೃಷ್ಣ ದೇವಸ್ಥಾನ ವಾರ್ಡ್​ನಲ್ಲಿ ಜೆಡಿಎಸ್ ಅಭ್ಯರ್ಥಿ ಆನಂದ್ ಗೆಲುವು ಸಾಧಿಸಿದ್ದಾರೆ. ಆನಂದ್​ಗೆ 8057 ಮತಗಳು ಲಭಿಸಿದ್ದರೆ ಬಿಜೆಪಿ ಅಭ್ಯರ್ಥಿ 3626, ಕಾಂಗ್ರೆಸ್ ಅಭ್ಯರ್ಥಿ 3436 ಮತಗಳನ್ನು ಪಡೆದುಕೊಂಡಿದ್ದಾರೆ.

ಲಕ್ಕಸಂದ್ರ ವಾರ್ಡ್​ನಲ್ಲಿ ಬಿಜೆಪಿಯ ಮಹೇಶ್ ಬಾಬುಗೆ ಜಯ ಲಭಿಸಿದೆ.

ಹಲಸೂರು ವಾರ್ಡ್​ನಲ್ಲಿ ಪಕ್ಷೇತರ ಅಭ್ಯರ್ಥಿ ಮಮತಾ ಸರವಣಗೆ ಗೆಲುವು.

ಜಾಲಹಳ್ಳಿ ವಾರ್ಡ್​ನಲ್ಲಿ ಕಾಂಗ್ರೆಸ್​ನ ಜೆ.ಎನ್.ಶ್ರೀನಿವಾಸ್ ಗೌಡಗೆ ಜಯ.

ಕೆಂಪೇಗೌಡ ವಾರ್ಡ್​ನಲ್ಲಿ ಬಿಜೆಪಿಯ ಚಂದ್ರಮ್ಮಗೆ ಗೆಲುವು.

ರಾಮಸ್ವಾಮಿ ಪಾಳ್ಯ ವಾರ್ಡ್​ನಲ್ಲಿ ಕಾಂಗ್ರೆಸ್​ನ ನೇತ್ರಾವತಿ ಕೃಷ್ಣೇಗೌಡಗೆ ಜಯ.

ನಾಗವಾರ ವಾರ್ಡ್​ನಲ್ಲಿ ಎಸ್​ಡಿಪಿ ಪಕ್ಷದ ಶಾಜಿಯಾ ಗೆಲುವು ಸಾಧಿಸಿದ್ದಾರೆ. ಇವರು 8152 ಮತಗಳನ್ನು ಪಡೆದುಕೊಂಡರೆ, ಕಾಂಗ್ರೆಸ್​ನ ಇರ್ಷಾದ್ 6016 ಮತಗಳನ್ನು ಹಾಗೂ ಬಿಜೆಪಿ ಅಭ್ಯರ್ಥಿ 450 ಮತಗಳನ್ನುಪಡೆದುಕೊಂಡರು.

ಕೆ.ಆರ್. ಮಾರ್ಕೆಟ್ ವಾರ್ಡ್​ನಲ್ಲಿ 5434 ಮತಗಳನ್ನು ಪಡೆದುಕೊಂಡ ಜೆಡಿಎಸ್​ನ ನಜೀಮಾ ಖಾನ್ ಗೆಲುವಿನ ನಗೆ ಬೀರಿದ್ದಾರೆ.

ಪಟ್ಟಾಭಿರಾಮನಗರ ವಾರ್ಡ್​ನಲ್ಲಿ ಬಿಜೆಪಿಯ ಎಚ್.ಸಿ. ನಾಗರತ್ನ ರಾಮಮೂರ್ತಿ ಜಯ ಸಾಧಿಸಿದ್ದಾರೆ.

ಉಲ್ಲಾಳು ವಾರ್ಡ್​ನಲ್ಲಿ 16041 ಮತಗಳನ್ನು ಪಡೆದುಕೊಂಡ ಬಿಜೆಪಿಯ ಶಾರದಾ ಮುನಿರಾಜು ಗೆಲುವು ದಕ್ಕಿಸಿಕೊಂಡಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೇವಲ 4822 ಮತಗಳನ್ನು ಪಡೆಯಲು ಶಕ್ತರಾಗಿದ್ದಾರೆ.

ರಾಜಾಜಿನಗರ ವಾರ್ಡ್​ನಲ್ಲಿ 6033 ಮತಗಳನ್ನು ಪಡೆದ ಕಾಂಗ್ರೆಸ್​ನ ಕೃಷ್ಣಮೂರ್ತಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಎಚ್.ಆರ್. ಕೃಷ್ಣಪ್ಪ 5436 ಮತ್ತು ಜೆಡಿಎಸ್ ಅಭ್ಯರ್ಥಿ 2717 ಮತಗಳನ್ನು ಪಡೆದುಕೊಂಡರು.

ದಯಾನಂದ ನಗರ ವಾಡ್: ಬಿಜೆಪಿಯ ಕುಮಾರಿ ಪಳನಿಕಾಂತ್​ಗೆ ಗೆಲುವು

ಪಾದರಾಯನಪುರ ವಾರ್ಡ್: ಜೆಡಿಎಸ್​ನ ಇಮ್ರಾನ್ ಪಾಶಾಗೆ ಜಯ.

ಮಾಜಿ ಮೇಯರ್ ಶಾಂತಕುಮಾರಿಗೆ ಗೆಲುವು.

ಲಕ್ಕಸಂದ್ರ ವಾರ್ಡ್: ಬಿಜೆಪಿಯ ಮಹೇಶ್ ಬಾಬುಗೆ ಜಯ.

ಜೆಪಿ ನಗರ ವಾರ್ಡ್: ಬಿಜೆಪಿಯ ಕೆ.ಎನ್. ಲಕ್ಷ್ಮೀ ನಟರಾಜ್​ಗೆ ಗೆಲುವು.

ದೊಡ್ಡಬಿದರಕಲ್ಲು: ಕಾಂಗ್ರೆಸ್​ನ ವಸುದೇವಗೆ ಜಯ.

ಹೊಸಕೆರೆ ಹಳ್ಳಿ ವಾಡ್: ಬಿಜೆಪಿಗೆ ಗೆಲುವು. ಬಿಜೆಪಿ:8589; ಕಾಂಗ್ರೆಸ್:1613; ಜೆಡಿಎಸ್:6508.

ರಾಮಸ್ವಾಮಿ ಪಾಳ್ಯ ವಾರ್ಡ್: ಕಾಂಗ್ರೆಸ್​ನ ನೇತಾವತಿ ಕೃಷ್ಣೇಗೌಡ ಗೆಲುವು.

ಸುಧಾಮನಗರ ವಾರ್ಡ್: ಕಾಂಗ್ರೆಸ್​ನ ಆರ್.ವಿ. ಯುವರಾಜ್​ಗೆ ಜಯ.

ಅರಮನೆ ನಗರ ವಾರ್ಡ್: ಬಿಜೆಪಿಯ ಸುಮಂಗಲ 6473 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್​ನ ಲತಾ 3693 ಮತ್ತು ಜೆಡಿಎಸ್​ನ ಜಯಂತಿ ಪೈ 430 ಮತಗಳನ್ನು ಪಡೆದುಕೊಂಡರು.

ರಾಜಮಹಲ್ ಗುಟ್ಟಳ್ಳಿ: 6728 ಮತಗಳನ್ನು ಗಳಿಸಿದ ಬಿಜೆಪಿಯ ಹೇಮಲತಾ ಅತಿಶ್ರಮಗೆ ಗೆಲುವು. ಕಾಂಗ್ರೆಸ್​ನ ವೀಣಾ ವಿಶ್ವನಾಥ್ 6368 ಮತಗಳನ್ನು ಪಡೆದರು.

ದೊಮ್ಮಲೂರು ವಾರ್ಡ್: ಪಕ್ಷೇತರ ಅಭ್ಯರ್ಥಿ ಸಿ.ಆರ್. ಲಕ್ಷ್ಮೀನಾರಾಯಣ್ 5994 ಮತಗಳನ್ನು ಗಳಸಿ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿ:3579, ಕಾಂಗ್ರೆಸ್:3680 ಮತ್ತು ಜೆಡಿಎಸ್:256 ಮತಗಳನ್ನು ಪಡೆದುಕೊಂಡವು.

ಅತ್ತಿಗುಪ್ಪೆ ವಾರ್ಡ್: ಬಿಜೆಪಿಯ ಡಾ.ಎಸ್. ರಾಜುಗೆ ಗೆಲುವು.

ಅಗ್ರಹಾರ ದಾಸರಹಳ್ಳಿ: ಪಕ್ಷೇತರ ಅಭ್ಯರ್ಥಿ ಎಂ. ಗಾಯತ್ರಿಗೆ ಜಯ.

ಬಸವೇಶ್ವರ ನಗರ ವಾರ್ಡ್: ಬಿಜೆಪಿಯ ಉಮಾಪತಿ 4382 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್​ನ ಪ್ರಮೀಳಾ:2915 ಮತಗಳನ್ನು ಗಳಿಸಿ ಸೋಲನುಭವಿಸಿದರು.

ಕೊಟ್ಟಿಗೆಪಾಳ್ಯ ವಾರ್ಡ್: ಕಾಂಗ್ರೆಸ್​ನ ಮೋಹನ್​ಕುಮಾರ್​ಗೆ ಗೆಲುವು.

ಲಗ್ಗರೆ ವಾರ್ಡ್: ಮಂಜುಳಾಸ್ವಾಮಿಗೆ ಜಯ.

ಯಡಿಯೂರು ವಾಡ್: ಬಿಜೆಪಿಯ ಪೂರ್ಣಿಮಾ ರಮೇಶ್ 8184 ಮತಗಳನ್ನು ಪಡೆದು ಗೆಲುವು.

ಕಾಡುಗೋಡಿ ವಾರ್ಡ್: ಬಿಜೆಪಿಯ ಎಸ್ ಮುನಿಸ್ವಾಮಿಗೆ ಜಯ.

ವಿಜಿನಾಪುರ ವಾರ್ಡ್: ಬಿಜೆಪಿಯ ಎಸ್ ರಾಜು ಜಯ.

ಹೂಡಿ ವಾರ್ಡ್: ಕಾಂಗ್ರೆಸ್​ನ ಎ.ಸಿ. ಹರಿಪ್ರಸಾದ್​ಗೆ ಗೆಲುವು.

ಹೊರಮಾವು ವಾರ್ಡ್: ಕಾಂಗ್ರೆಸ್​ನ ಜಯ ರಾಧಮ್ಮಗೆ ಜಯ.

ದತ್ತಾತ್ರೇಯ ದೇವಸ್ಥಾನ ವಾರ್ಡ್: ಕಾಂಗ್ರೆಸ್​ನ ಆರ್.ಎಸ್. ಸತ್ಯನಾರಾಯಣಗೆ ಜಯ.

ಜೆ.ಪಿ. ನಗರ: ಬಿಜೆಪಿಯ ಮಮತಾಗೆ ಗೆಲುವು.

ಕಮ್ಮನಹಳ್ಳಿ ವಾರ್ಡ್: ಬಿಜೆಪಿಯ ಮುನಿಲಕ್ಷ್ಮಮ್ಮಗೆ ಜಯ.

ಯಶವಂತಪುರ ವಾರ್ಡ್​ನಲ್ಲಿ ಶಾಸಕ ಮುನಿರತ್ನ ಶಿಷ್ಯ ವೆಂಕಟೇಶ್​ಗೆ ಗೆಲುವು.

ಜೀವನಭಿಮಾನಗರ ವಾಡ್: ಬಿಜೆಪಿಗೆ ಗೆಲುವು.

ನ್ಯೂ ತಿಪ್ಪಸಂದ್ರ ವಾರ್ಡ್: ಕಾಂಗ್ರೆಸ್​ನ ಶಿಲ್ಪಾ ಅವಿನಾಶ್​ಗೆ ಜಯ.

ಭಾರತಿನಗರ ವಾರ್ಡ್: ಕಾಂಗ್ರೆಸ್​ನ ಶಕಿಲ್ ಅಹಮದ್​ಗೆ ಜಯ.

ನಾಗಪುರ ವಾರ್ಡ್: ಜೆಡಿಎಸ್​ನ ಬಿ. ಭದ್ರೇಗೌಡಗೆ ಜಯ.

ಹೊಸಹಳ್ಳಿ ವಾರ್ಡ್: ಬಿಜೆಪಿಯ ಮಹಾಲಕ್ಷ್ಮಿ ಗೆಲುವು.

ನಂದಿನಿ ಲೇಔಟ್ ವಾರ್ಡ್: ಬಿಜೆಪಿಯ ರಾಜೇಂದ್ರ ಕುಮಾರ್ ಜಯ.

ಸಂಜಯನಗರ ವಾರ್ಡ್: ಬಿಜೆಪಿಯ ಇಂದಿರಾ ಸುಭಾಷ್ ಗೆಲುವು.

ಕೆಂಗೇರಿ ವಾರ್ಡ್: ಬಿಜೆಪಿಯ ಸತ್ಯನಾರಾಯಣ ಜಯ.

ಜಗಜೀವನರಾಂ ನಗರ ವಾರ್ಡ್: ಕಾಂಗ್ರೆಸ್​ನ ಸೀಮಾ ಅಲ್ತಾಫ್​ಗೆ ಗೆಲುವು

ಬೊಮ್ಮಸಂದ್ರ ವಾರ್ಡ್: ಬಿಜೆಪಿಗೆ ಗೆಲುವು

ಕೊಡಿಗೇಹಳ್ಳಿ ವಾರ್ಡ್: ಬಿಜೆಪಿಗೆ ಜಯ.

ಜಕ್ಕೂರು ವಾರ್ಡ್: ಬಿಜೆಪಿಗೆ ಜಯ.

ಥಣಿಸಂದ್ರ ವಾರ್ಡ್: ಕಾಂಗ್ರೆಸ್ ಗೆಲುವು.

ಬಸವೇಶ್ವರನಗರ ವಾರ್ಡ್: ಬಿಜೆಪಿಯ ಉಮಾವತಿ ಪದ್ಮರಾಜ್​ಗೆ ಜಯ.

ಎಚ್.ಬಿ.ಆರ್. ಬಡಾವಣೆ ವಾರ್ಡ್: ಕಾಂಗ್ರೆಸ್​ನ ಆನಂದ್​ಗೆ ಗೆಲುವು.

ಹಗದೂರು ವಾರ್ಡ್: ಕಾಂಗ್ರೆಸ್​ನ ಎಸ್. ಉದುರಿಕುಮಾರ್​ಗೆ ಜಯ.

ಪ್ರಕಾಶ್​ನಗರ ವಾರ್ಡ್: ಕಾಂಗ್ರೆಸ್​ನ ಪದ್ಮಾವತಿಗೆ ಗೆಲುವು.

ಕಾಮಾಕ್ಷಿಪಾಳ್ಯ ವಾರ್ಡ್: ಬಿಜೆಪಿಯ ಪ್ರತಿಮಾ ಆರ್. ಗೆಲುವು.

ಹೇರೋಹಳ್ಳಿ ವಾರ್ಡ್: ಕಾಂಗ್ರೆಸ್​ನ ರಾಜಣ್ಣಗೆ ಜಯ.

ಜಯಮಹಲ್ ವಾರ್ಡ್: ಕಾಂಗ್ರೆಸ್​ನ ಗುಣಶೇಖರ್​ಗೆ ಗೆಲುವು.

ಚಾಮರಾಜಪೇಟೆ ವಾರ್ಡ್: ಕೋಕಿಲಾ ಚಂದ್ರಶೇಖರ್​ಗೆ ಗೆಲುವು.

ಕಾಡುಮಲ್ಲೇಶ್ವರ ವಾರ್ಡ್: ಮಂಜುನಾಥ್ ರಾಜುಗೆ ಜಯ.

ಸಾರಕ್ಕಿ ವಾರ್ಡ್: ಬಿಜೆಪಿಯ ದೀಪಿಕಾ ಎಲ್. ಮಂಜುನಾಥ್​ಗೆ ಜಯ.

ಮಾರಪ್ಪನಪಾಳ್ಯ ವಾರ್ಡ್: ಜೆಡಿಎಸ್​ನ ಮಹಾದೇವಗೆ ಜಯ.

ಭೈರಸಂದ್ರ ವಾರ್ಡ್: ಬಿಜೆಪಿಯ ಎನ್. ನಾಗರಾಜುಗೆ ಜಯ.

ಹಂಪಿನಗರ ವಾರ್ಡ್: ಬಿಜೆಪಿಯ ಆನಂದ್ ಹೊಸೂರ್​ಗೆ ಜಯ.

ಬಾಪೂಜಿನಗರ ವಾರ್ಡ್: ಕಾಂಗ್ರೆಸ್​ಗೆ ಗೆಲುವು.

ಆಡುಗೋಡಿ ವಾರ್ಡ್: ಕಾಂಗ್ರೆಸ್​ನ ಮಂಜುಳಾಗೆ ಜಯ.

ಕಾಟನ್​ಪೇಟೆ ವಾರ್ಡ್: ಕಾಂಗ್ರೆಸ್​ಗೆ ಜಯ.

ಗಾಂಧಿನಗರ ವಾರ್ಡ್: ಆರ್.ಜೆ. ಲತಾಗೆ ಗೆಲುವು.

ಕೋರಮಂಗಲ ವಾರ್ಡ್: ಕಾಂಗ್ರೆಸ್​ನ ಎಂ. ಚಂದ್ರಪ್ಪಗೆ ಜಯ.

ಹೆಮ್ಮಿಗೆಪುರ ವಾರ್ಡ್: ಕಾಂಗ್ರೆಸ್ ಜಯ.

ಲಕ್ಕಸಂದ್ರ ವಾರ್ಡ್: ಬಿಜೆಪಿಯ ಮಹೇಶ್ ಬಾಬುಗೆ ಗೆಲುವು.

ಸುದ್ದುಗುಂಟೆ ಪಾಳ್ಯ ವಾರ್ಡ್: ಕಾಂಗ್ರೆಸ್​ನ ಜಿ. ಮಂಜುನಾಥ್​ಗೆ ಜಯ.

Write A Comment