ತುಮಕೂರು: ರಾಜ್ಯದಲ್ಲಿ ವಿದ್ಯುತ್ ಅಭಾವ ಸರಿದೂಗಿಸಲು ಎನ್‌ಟಿಪಿಸಿ, ಖಾಸಗಿ ಸಂಸ್ಥೆಗಳಿಂದ 4000 ಮೆಗಾವಾಟ್ ವಿದ್ಯುತ್ ಖರೀದಿಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಇಲ್ಲಿ ಶನಿವಾರ ಹೇಳಿದರು.
ರಾಜ್ಯದಲ್ಲಿ ಒಟ್ಟು 10300 ಮೆ.ವಾ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವಿದೆ. ಆದರೆ ಬಹುತೇಕ ಜಲಾಶಯಗಳು ಖಾಲಿಯಾಗಿರುವ ಕಾರಣ ಕೇವಲ 6000 ಮ.ವಾ ಉತ್ಪಾದಿಸಲಾಗುತ್ತಿದೆ. ಕೊರತೆ ಇರುವ 4000 ಮೆ.ವಾ ವಿದ್ಯುತ್ ಖರೀದಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಯೂನಿಟ್‌ಗೆ ₹ 5.8 ನೀಡಿ ಖರೀದಿ ಮಾಡಲಾಗುವುದು. ರಾಜ್ಯದಲ್ಲಿ ಉತ್ಪಾದನೆ ಆಗುತ್ತಿರುವ ವಿದ್ಯುತ್ತನ್ನು ಖಾಸಗಿ ಉಕ್ಕು ಕಾರ್ಖಾನೆಗಳಿಗೆ ಮಾರಾಟ ಮಾಡಿ, ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ ಎಂಬ ರೈತ ಸಂಘಟನೆ ಮುಖಂಡರ ಆರೋಪ ಮಾಹಿತಿ ಕೊರತೆಯಿಂದ ಹೇಳುತ್ತಿದ್ದಾರೆ ಎಂದರು.
*
ಅಂಕಿಅಂಶ
10 ಸಾವಿರ ಮೆ.ವ್ಯಾ. ವಿದ್ಯುತ್ ಉತ್ಪಾದನಾ ಸಾಮರ್ಥ್ಯ
6 ಸಾವಿರ ಮೆ.ವ್ಯಾ. ಸದ್ಯ ಉತ್ಪಾದಿಸಲಾಗುತ್ತಿದೆ