ಬೆಂಗಳೂರು: ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅವರ ಹತ್ಯೆ ಖಂಡಿಸಿ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಅವರು ‘ಪಂಪ’ ಪ್ರಶಸ್ತಿಯನ್ನು ಸರ್ಕಾರಕ್ಕೆ ಸೋಮವಾರ ಹಿಂದಿರುಗಿಸಿದರು.
ಪ್ರಶಸ್ತಿಯನ್ನು ಚಂಪಾ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ದಯಾನಂದ ಅವರಿಗೆ ಒಪ್ಪಿಸಿದರು.
‘ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆ ಖಂಡಿಸಿ ಪಂಪ ಪ್ರಶಸ್ತಿಯನ್ನು ಸರ್ಕಾರಕ್ಕೆ ಮರಳಿಸುತ್ತಿದ್ದೇನೆ’ ಎಂದು ಚಂಪಾ ಅವರು ಶನಿವಾರವೇ ಘೋಷಿಸಿದ್ದರು. ಚಂಪಾ ಅವರಿಗೆ 2009ನೇ ಸಾಲಿನಲ್ಲಿ ಪಂಪ ಪ್ರಶಸ್ತಿ ದೊರೆತಿತ್ತು.