ಚಿಕ್ಕಮಗಳೂರು, ಸೆ. 20 -ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರತ್ಯೇಕ ಘಟನೆ ನಡೆದಿದೆ. ಮೂಡಿಗೆರೆ ತಾಲೂಕಿನ ಬೆಟ್ಟದಮನೆ ಗ್ರಾಮದ ದೇವರಾಜು ಅವರ ಪುತ್ರ ಪ್ರದೀಪ್(30) ಹೆಟ್ಟೆ ನೋವಿನಿಂದ ಬಳಲುತ್ತಿದ್ದನು. ಕಳೆದ ಒಂದು ವರ್ಷದಿಂದ ಔಷದಿ ಪಡೆದರು ಗುಣವಾಗದೆ ಇದ್ದಿದ್ದರಿಂದ ಬೇಸತ್ತು ಈತ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಳೆದ 16ರಂದು ಆಸ್ಪತ್ರೆಗೆ ಹೋಗುತ್ತಿರುವುದಾಗಿ ಹೇಳಿ ಹೋದವನು ವಿಷ ಸೇವಿಸಿದ್ದಾನೆ.ಆತನನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ, ಮೃತಪಟ್ಟಿದ್ದಾನೆ.
ನಗರದ ಹೊರವಲಯದ ರಾಂಪುರ ನಿವಾಸಿ ಶರೀಫ್(33) ಅನಾರೋಗ್ಯದಿಂದ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಈತ ಅಪಘಾತದಲ್ಲಿ ಗಾಯ ಗೊಂಡಾಗ ಬೆನ್ನು ಮೂಳೆ ತುಂಡಾಗಿ ಸೊಂಟದ ಕೆಳಭಾಗ ಸ್ವಾಧಿಣ ಕಳೆದುಕೊಂಡಿದ್‌ದನು. ನಾಲ್ಕು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ಆರೋಗ್ಯ ಸುಧಾರಿಸಿರಲಿಲ್ಲ.ಅಲ್ಲದೆ ಕೆಲ ದಿನಗಳಿಂದ ಆತನ ಕಾಲು ಊದಿಕೊಂಡಿತ್ತು. ಇದರಿಂದ ನೊಂದು ಆತ ನೇಣಿಗೆ ಶರಣಾಗಿದ್ದಾನೆ. ಈತನ ಪತ್ನಿ ನಗರ ಠಾಣೆಗೆ ದೂರು ನೀಡಿದ್ದಾರೆ.