ಕರ್ನಾಟಕ

ಬೈಕ್ ಕಳ್ಳರನ್ನು ಹಿಡಿಯಲು ಹೋದ ಎಸ್ಐಯನ್ನೇ ಚೂರಿಯಿಂದ ಇರಿದುಕೊಂದ ಕಳ್ಳರು !

Pinterest LinkedIn Tumblr

jagadesh-2

ದೊಡ್ಡಬಳ್ಳಾಪುರ: ಕಳ್ಳರನ್ನು ಹಿಡಿಯುಲು ಹೋದ ಸಬ್ ಇನ್ಸ್ ಪೆಕ್ಟರ್ ಅವರನ್ನು ಕಳ್ಳರೇ ಹತ್ಯೆ ಮಾಡಿರುವ ಅಘಾತಕಾರಿ ಘಟನೆ ನೆಲಮಂಗಲದಲ್ಲಿ ಇಂದು ಬೆಳಗ್ಗೆ ನಡೆದಿದೆ.

ದೊಡ್ಡಬಳ್ಳಾಪುರ ಠಾಣೆ ಎಸ್‍ಐ ಜಗದೀಶ್(38)ಕೊಲೆಯಾಗಿದ್ದು, ಇವರ ಜೊತೆಯಲ್ಲಿದ್ದ ಪೇದೆಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ.

jagadesh

ಘಟನೆಯ ವಿವರ: 8 ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಬೈಕ್ ಕಳ್ಳರಾದ ರಘು ಹಾಗೂ ಕೃಷ್ಣ ನೆಲಮಂಗಲದ ಭಿನ್ನಮಂಗಲ ಬಳಿಯಿರುವ ಸಿಎನ್‍ಆರ್ ಗ್ರ್ಯಾನೈಟ್ ಫ್ಯಾಕ್ಟರಿ ಸಮೀಪ ನೆಲೆಸಿದ್ದಾರೆ ಎನ್ನುವ ಖಚಿತ ಮಾಹಿತಿ ಪಿಎಸ್‍ಐ ಜಗದೀಶ್ ಅವರಿಗೆ ಸಿಕ್ಕಿತ್ತು. ಈ ಕಳ್ಳರನ್ನು ಹಿಡಿಯಲು ಅವರು ನಾಲ್ವರು ಪೇದೆಗಳೊಂದಿಗೆ ಇಂದು ಬೆಳಗ್ಗೆ 9.30ರ ಅಸುಪಾಸಿನಲ್ಲಿ ಸ್ಥಳಕ್ಕೆ ಬಂದಿದ್ದಾರೆ.

ಈ ವೇಳೆ ಆರೋಪಿಗಳನ್ನು ಹಿಡಿಯಲು ಮುಂದಾದಾಗ ಕಳ್ಳರು ಪರಾರಿಯಾಗಲು ಯತ್ನಿಸಿದ್ದಾರೆ. ಅವರನ್ನು ಬೆನ್ನಟ್ಟಲು ಮುಂದಾದಾಗ ಓರ್ವ ಆರೋಪಿ ಜಗದೀಶ್ ಅವರಿಗೆ ಡ್ರ್ಯಾಗರ್(ಹರಿತವಾದ ಚೂರಿ) ನಿಂದ ಎದೆಗೆ ಇರಿದಿದ್ದಾನೆ. ಅಷ್ಟೇ ಅಲ್ಲದೇ ಮತ್ತೊಬ್ಬ ಪೇದೆ ವೆಂಕಟೇಶ್ ಅವರಿಗೆ ಇರಿದಿದ್ದಾನೆ. ಪರಿಣಾಮ ಜಗದೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ವೆಂಕಟೇಶ್ ಸ್ಥಿತಿ ಗಂಭೀರವಾಗಿದ್ದು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರು ಕಳ್ಳರು ಪರಾರಿಯಾಗಿದ್ದು ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Write A Comment