ಕರ್ನಾಟಕ

ತೀವ್ರತೆ ಪಡೆದುಕೊಂಡ ರಾಘವೇಶ್ವರ ಶ್ರೀಗಳ ಪೀಠ ತ್ಯಜಿಸಬೇಕೆನ್ನುವ ಒತ್ತಾಯ

Pinterest LinkedIn Tumblr

Raghaveshwara_

ಬೆಂಗಳೂರು, ಅ. 24: ಬಾಯಲ್ಲಿ ರಾಮ ನಾಮ ಜಪಿಸುತ್ತಾ, ಕ್ರಿಯೆಯಲ್ಲಿ ಕಾಮಿಯಾಗಿ ಹಲವು ಹೆಣ್ಣು ಮಕ್ಕಳ ಮಾನಹರಣ ಮಾಡಿ, ನ್ಯಾಯಾಯದಲ್ಲಿ ಆರೋಪ ಪಟ್ಟಿ ಎದುರಿಸಿರುವ ರಾಘವೇಶ್ವರ ಶ್ರೀ ಕೂಡಲೇ ಪೀಠ ತ್ಯಜಿಸಬೇಕೆನ್ನುವ ಒತ್ತಾಯ ತೀವ್ರಗೊಂಡಿದೆ.

ಸಮಾನ ಮನಸ್ಕ ವೇದಿಕೆ ಕಟ್ಟಿಕೊಂಡಿರುವ ಹವ್ಯಕ ಸಮಾಜದ ಕೆ.ಎಚ್.ಶ್ರೀನಿವಾಸ್, ಅಶೋಕ್ ಜಿ.ಭಟ್, ಎಂ.ಎನ್.ಭಟ್ ಮದ್ಗುಣಿ ಮತ್ತಿತರರ ಮುಖಂಡರು ಆರೋಪ ಹೊತ್ತಿರುವ ಶ್ರೀಗಳು ತಕ್ಷಣವೇ ಪೀಠ ತ್ಯಾಗ ಮಾಡಿ ಸಾವಿರಾರು ವರ್ಷಗಳ ಇತಿಹಾಸವುಳ್ಳ ರಾಮಚಂದ್ರಾಪುರ ಮಠದದ ಗೌರವವನ್ನು ಕಾಪಾಡುವಂತೆ ಆಗ್ರಹಿಸಿದರು.

ಅತ್ಯಾಚಾರ ಪ್ರಕರಣದಲ್ಲಿ ಆರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಕೆಯಾದ ತಕ್ಷಣವೇ ಶ್ರೀಗಳು ತಮ್ಮ ಸ್ಥಾನವನ್ನು ತ್ಯಜಿಸಬೇಕಿತ್ತು. ಅದನ್ನು ಬಿಟ್ಟು ಪ್ರವಚನದ ಹೆಸರಲ್ಲಿ ಪ್ರಚೋದನೆ ಮಾಡುವುದು ಸರಿಯಲ್ಲ ಎಂದು ದೂರಿದರು.

1200 ವರ್ಷಗಳ ಹಿಂದೆ ಶ್ರೀ ಶಂಕರಾಚಾರ್ಯರಿಂದ ಸ್ಥಾಪಿತವಾಗಿ, ಭವ್ಯ ಪರಂಪರೆ ಮತ್ತು ಇತಿಹಾಸ ಹೊಂದಿದ ಶ್ರೀರಾಮಚಂದ್ರಾಪುರ ಮಠಕ್ಕೀಗ ಕತ್ತಲೆ ಆವರಿಸಿದೆ. ಸಮಾಜಕ್ಕೆ ಮಾರ್ಗದರ್ಶಕರಾಗಿ, ತಮ್ಮ ಬಳಿಗೆ ಬರುವ ಜನತೆಗೆ ಸನ್ಮಾನ ತೋರಬೇಕಾದ ಮಠದ ಪೀಠಾಧಿಪತಿ ವಿರುದ್ಧವೇ ಅತ್ಯಾಚಾರ ಪ್ರಕರಣ ದಾಖಲಾಗಿ ಆರೋಪ ಪಟ್ಟಿ ಸಲ್ಲಿಕೆಯಾಗಿರುವುದು ಸಾಮಾನ್ಯ ಸಂಗತಿಯೇನಲ್ಲ. ಅವರಿಗೆ ಮಠ, ಪರಂಪರೆ, ಸಮಾಜದ ಬಗ್ಗೆ ಗೌರವವಿದ್ದರೆ ನೌತಿಕ ಹೊಣೆ ಹೊತ್ತು ಕೂಡಲೇ ಪೀಠ ತ್ಯಜಿಸಬೇಕು ಎಂದು ಆಗ್ರಹಿಸಿದರು.

ಮಠದಲ್ಲಿ ಈ ಹಿಂದೆ ಪೀಠಾಧಿಪತಿಗಳಾಗಿದ್ದವರು ಕಳಂಕ ರಹಿತರಾಗಿದ್ದರು. ಆದರೆ ರಾಘವೇಶ್ವರರು ಅತ್ಯಾಚಾರ, ಅನಾಚಾರ, ಢಾಂಬಿಕತೆಯ ಕಳಂಕ ಹೊತ್ತು ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಏನೇನು ಮಾಡಬೇಕೋ ಅದೆಲ್ಲವನ್ನೂ ಮಾಡುತ್ತಿದ್ದಾರೆ. ಪ್ರೇಮಲತಾ ಪ್ರಕರಣ ಬಯಲಿಗೆ ಬಂದಾಗಲೇ ಮಠದ ಹಿರಿಯ ಭಕ್ತರಿಗೆ ಪೀಠ ತ್ಯಜಿಸುವ ಭರವಸೆ ನೀಡಿದ್ದ ರಾಘವೇಶ್ವರರು ನಂತರ ನಿರ್ಧಾರ ಬದಲಿಸುತ್ತಾ ಬಂದರು. ಸಾಕ್ಷಿಗಳನ್ನು ನಾಶಪಡಿಸುವುದು, ಸಂತ್ರಸ್ತೆ ಪ್ರೇಮಲತಾ ಮತ್ತು ಅವರ ಪತಿ ದಿವಾಕರ ಶಾಸ್ತ್ರಿಯನ್ನು 3 ಕೋಟಿ ರೂ.ಗೆ ಒತ್ತಾಯಿಸಿದರೆಂದು ಜೈಲಿಗಟ್ಟಿದ್ದು ನೋಡಿದರೆ ಅವರು ಪ್ರಕರಣದಿಂದ ತಪ್ಪಿಸಿಕೊಳ್ಳುವ ಹುನ್ನಾರವನ್ನು ನಡೆಸುತ್ತಲೇ ಬರುತ್ತಿದ್ದಾರೆ ಎಂಬುದು ಎಂತಹವರಿಗೂ ಅರ್ಥವಾಗುತ್ತದೆ ಎಂದು ಕೆ.ಎಚ್.ಶ್ರೀನಿವಾಸ್ ಆರೋಪಿಸಿದರು.

ಕೆಲವರು ಮೌಢ್ಯತೆಯಿಂದ ರಾಘವೇಶ್ವರ ಶ್ರೀಗಳ ಪರ ನಿಂತಿದ್ದಾರೆ. ಪ್ರೇಮಲತಾ ಪ್ರಕರಣದ ಶುರುವಿನಲ್ಲೇ ಪೀಠ ತ್ಯಜಿಸಲು ನಾವು ಸೂಚಿಸಿದಾಗ, ಶೀಘ್ರದಲ್ಲೇ ತಾವು ಪೀಠ ತ್ಯಜಿಸಿ ತಪಸ್ಸಿಗೆ ತೆರಳುವುದಾಗಿಯೂ. ಹೊಸ ಸ್ವಾಮಿಯನ್ನು ಮಾಡಲು ಪರಿಶೀಲಿಸುತ್ತಿರುವುದಾಗಿಯೂ ಭರವಸೆ ನೀಡಿ ನಂತರ ಮಾತು ತಪ್ಪಿದ ರಾಘವೇಶ್ವರರು ತಮ್ಮ ನಿಲುವನ್ನು ದಿನೇ ದಿನೇ ಬದಲಿಸುತ್ತಾ ಹೋಗುತ್ತಿರುವುದು ನೋಡಿದರೆ, ಅವರಿಗೆ ಒಡೆಯುತ್ತಿರುವ ಹವ್ಯಾಕ ಸಮಾಜಕ್ಕಿಂತ ತನ್ನನ್ನು ರಕ್ಷಿಸಿಕೊಳ್ಳುವುದೇ ಮುಖ್ಯವೆಂದುಕೊಂಡಿರುವಂತಿದೆ. ಇಂತಹ ವ್ಯಕ್ತಿಯಿಂದ ಸಮಜಕ್ಕೆ ನಯಾಪೈಸೆ ಲಾಭವಿಲ್ಲ. ಆದ್ದರಿಂದ ಪೀಠ ತ್ಯಾಗ ಮಾಡುವ ತನಕ ಹೋರಾಟ ನಿಲ್ಲದು ಎಂದು ಶ್ರೀನಿವಾಸ್ ಗುಡುಗಿದರು.

Write A Comment