ಕರ್ನಾಟಕ

70 ವರ್ಷದ ವೃದ್ಧೆಯ ಮೇಲೆ 5 ಜನ ಯುವಕರಿಂದ ಗ್ಯಾಂಗ್‍ರೇಪ್ ! ದಾವಣಗೆರೆಯಲ್ಲಿ ನಡೆದ ಘಟನೆ

Pinterest LinkedIn Tumblr

old

ದಾವಣಗೆರೆ: 70 ವರ್ಷದ ವೃದ್ಧೆಯ ಮೇಲೆ 5 ಜನ ಯುವಕರ ತಂಡ ಗ್ಯಾಂಗ್ ರೇಪ್ ನಡೆಸಿದ ಘಟನೆ ದಾವಣಗೆರೆ ನಗರದ ಹೊರ ವಲಯ ರಾಮನಗರದಲ್ಲಿ ನಡೆದಿದೆ.

ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಇಲ್ಲಿನ ಪಂಚ ದೇವಾಲಯದಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವ ಅಜ್ಜಿಯ ಮೇಲೆ ಸ್ಥಳೀಯ ಯುವಕರು ಅತ್ಯಚಾರ ನಡೆಸಿದ್ದಾರೆ. ರಾತ್ರಿ ಅಜ್ಜಿ ದೇವಾಲಯದ ಬಳಿ ಮಲಗಿದ ಸಮಯದಲ್ಲಿ ಕಾಮುಕರು ಅತ್ಯಚಾರ ನಡೆಸಿದ್ದಾರೆ.

ಬೆಳಗ್ಗೆ ಸ್ಥಳೀಯರಿಗೆ ಅಜ್ಜಿ ವಿಷಯ ತಿಳಿಸಿದ ಮೇಲೆ ಸ್ಥಳೀಯರು ಮಹಿಳಾ ಠಾಣೆಗೆ ಕರೆ ತಂದಿದ್ದಾರೆ. ಅಜ್ಜಿಯನ್ನು ವೈದ್ಯಕೀಯ ಪರೀಕ್ಷೆಗೆ ಮಹಿಳಾ ಠಾಣೆ ಪಿಎಸ್‍ಐ ನಾಗಮ್ಮ ಕರೆದುಕೊಂಡು ಹೋಗಿದ್ದಾರೆ. ಅಜ್ಜಿಯ ಮೇಲೆ ಯುವಕರು ಈ ಹಿಂದೆಯು ಸಹ ಅತ್ಯಚಾರ ನಡೆಸಿದ್ದ ಬಗ್ಗೆ ಅಜ್ಜಿ ಪೊಲೀಸರಿಗೆ ತಿಳಿಸಿದ್ದಾರೆ. ಯುವಕರಲ್ಲಿ ಓರ್ವ ಕಾಲೇಜು ವಿದ್ಯಾರ್ಥಿಯಾಗಿದ್ದು ಇನ್ನುಳಿದವರು ಕೆಲಸವಿಲ್ಲದೆ ಅಲೆದಾಡುತ್ತಿದ್ದರು ಎನ್ನಲಾಗಿದೆ. ಅಜ್ಜಿಯ ಮೇಲೆ ನಡೆದ ಈ ಪ್ರಕರಣ ಕಂಡು ಸ್ಥಳೀಯ ಮಹಿಳಾ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

Write A Comment