ಕರ್ನಾಟಕ

ಕಿಟಕಿ ಸರಳು ಮುರಿದು 12 ಲಕ್ಷ ರೂ ಚಿನ್ನ ವಿದೇಶ ಹಣ ಕಳವು

Pinterest LinkedIn Tumblr

viಬೆಂಗಳೂರು, ನ.3- ಕುಟುಂಬದವರು ಗೋವಾಕ್ಕೆ ತೆರಳಿದ್ದಾಗ ಮನೆ ಹಿಂಬದಿಯ ಕಿಟಕಿ ಸರಳು ಮುರಿದು 12 ಲಕ್ಷ ರೂ. ಮೌಲ್ಯದ 400 ಗ್ರಾಂ ಚಿನ್ನಾಭರಣ, 500 ಅಮೆರಿಕನ್ ಡಾಲರ್ ದೋಚಿರುವ ಘಟನೆ ಹನುಮಂತನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗವಿಪುರಂ ಬಡಾವಣೆಯ ಹಯವದನರಾವ್ ರಸ್ತೆ ನಿವಾಸಿ ರತ್ನಮರಿಪುಟ್ಟಣ್ಣ ಎಂಬುವರ ಮನೆಯಲ್ಲಿ ವಿದೇಶಿ ಹಣ, ಆಭರಣ ಕಳುವಾಗಿದೆ. ಇವರ ಸಂಬಂಧಿಕರು ವಿದೇಶ, ಗೋವಾದಲ್ಲಿ ನೆಲೆಸಿದ್ದು, ಅ.31 ರಂದು ಕುಟುಂಬ ಸಮೇತರಾಗಿ ಗೋವಾಕ್ಕೆ ಹೋಗಿ ನಿನ್ನೆ ಸಂಜೆ ಮನೆಗೆ ವಾಪಸ್ಸಾಗಿದ್ದಾರ. ಬಾಗಿಲು ತೆರೆದು ಒಳಹೋದಾಗ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಪರಿಶೀಲಿಸಿದಾಗ ಕಳವು ನಡೆದಿರುವುದು ಗೊತ್ತಾಗಿದೆ.

ಹಿಂಬದಿಯ ಕಿಟಕಿ ಸರಳು ಮುರಿದು ಒಳನುಗ್ಗಿರುವ ಕಳ್ಳರು 400 ಗ್ರಾಂ ಚಿನ್ನಾಭರಣ, 500 ಅಮೆರಿಕನ್ ಡಾಲರ್ ದೋಚಿ ಪರಾರಿಯಾಗದ್ದಾರೆ. ಈ ಸಂಬಂಧ ಹನುಮಂತನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment