ಕರ್ನಾಟಕ

ಒಂಟಿ ಮಹಿಳೆಯರ ದೋಚುತ್ತಿದ್ದ ಅಂತಾರಾಜ್ಯ ಸರಗಳ್ಳರ ಬಂಧನ : 7.50 ಲಕ್ಷ ಮೌಲ್ಯದ ಸರಗಳ ವಶ

Pinterest LinkedIn Tumblr

kallಬೆಂಗಳೂರು, ನ.3- ಒಂಟಿಯಾಗಿ ಓಡಾಡುವ ಮಹಿಳೆಯರನ್ನು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿ ಚಿನ್ನದ ಸರಗಳನ್ನು ಅಪಹರಿಸುತ್ತಿದ್ದ ಇಬ್ಬರು ಅಂತಾರಾಜ್ಯ ಸರಗಳ್ಳರನ್ನು ಬಂಧಿಸಿರುವ ಬಸವೇಶ್ವರ ನಗರ ಠಾಣೆ ಪೊಲೀಸರು 7.50 ಲಕ್ಷ ರೂ. ಮೌಲ್ಯದ 276 ಗ್ರಾಂ ಚಿನ್ನಾಭರಣ ಹಾಗೂ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ಎಲೆಕ್ಟ್ರಾನಿಕ್ ಸಿಟಿಯ ಕರಾಮತ್ (28) ಮತ್ತು ತಮಿಳುನಾಡಿನ ವಿನು ಚಕ್ರವರ್ತಿ (26) ಬಂಧಿತ ಸರಗಳ್ಳರು.

ಆರೋಪಿ ಕರಾಮತ್ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹುಡ್ಕೋ ಪೊಲೀಸ್ ಠಾಣೆಯ ಸರ ಅಪಹರಣ ಪ್ರಕರಣದಲ್ಲಿ ಕಾರಾಗೃಹದಲ್ಲಿದ್ದು , ಜಾಮೀನಿನ ಮೇಲೆ ಬಿಡುಗಡೆ ಹೊಂದಿ ಆರೋಪಿ ಚಕ್ರವರ್ತಿ ಎಂಬಾತನೊಂದಿಗೆ ಸೇರಿ ಬೆಂಗಳೂರು ನಗರದಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿ ಚಿನ್ನದ ಸರಗಳನ್ನು ಅಪಹರಿಸುತ್ತಿದ್ದುದಾಗಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಆರೋಪಿಗಳ ಬಂಧನದಿಂದ ಬಸವೇಶ್ವರ ನಗರ ವ್ಯಾಪ್ತಿಯಲ್ಲಿ ನಡೆದಿದ್ದ 3 ಸರ ಅಪಹರಣ ಪ್ರಕರಣ, 1 ದ್ವಿಚಕ್ರ ವಾಹನ ಕಳವು, ವಿಜಯನಗರ ಮತ್ತು ಕಾಮಾಕ್ಷಿಪಾಳ್ಯ ಠಾಣೆಗಳಲ್ಲಿ ದಾಖಲಾಗಿದ್ದ ಸರ ಅಪಹರಣ ಪ್ರಕರಣಗಳು ಸೇರಿ ಒಟ್ಟು 6 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಬಸವೇಶ್ವರ ನಗರ ಠಾಣೆಯ ಇನ್ಸ್‌ಪೆಕ್ಟರ್ ಕಲ್ಲಪ್ಪ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Write A Comment