ಕರ್ನಾಟಕ

ಬಿಗ್‍ಬಾಸ್ ಮನೆಯಲ್ಲಿ ಅಯ್ಯಪ್ಪ-ಪೂಜಾ ಗಾಂಧಿ ಮಧ್ಯೆಗಿನ ಲವ್ವಿ ಡವ್ವಿ ಮುಂದೇನಾಗಬಹುದು…?

Pinterest LinkedIn Tumblr

pooja-aiyappa

ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ಅಯ್ಯಪ್ಪ ಮತ್ತು ಪೂಜಾ ನಡುವಿನ ಕೆಮಿಸ್ಟ್ರಿ ಕಳೆದ ಕೆಲವು ದಿನಗಳಿಂದ ಜೋರಾಗಿದೆ. ಮುಂಗಾರು ಮಳೆ ಬೆಡಗಿ ಪೂಜಾ ಅಂತೂ ಅಯ್ಯಪ್ಪರನ್ನು ನೋಡಿದಾಗಲೆಲ್ಲಾ ಒಳಗೊಳಗೇ ಹಿಗ್ಗುತ್ತಾರೆ, ಲಜ್ಜೆಯಿಂದ ನಾಚಿ ನೀರಾಗುತ್ತಾರೆ. ಆದರೆ ಅಯ್ಯಪ್ಪ ಮಾತ್ರ ಈ ವಿಷಯದಲ್ಲಿ ಚೆಲ್ಲಾಟವಾಡ್ತಿದ್ದಾರೆ ಎಂಬುದು ಮನೆಯವರ ಅಭಿಪ್ರಾಯ.

ನನಗೆ ಈಗಾಗಲೇ ಗರ್ಲ್‍ಫ್ರೆಂಡ್ ಇದ್ದಾಳೆ ಎಂಬುದನ್ನು ಚಂದನ್ ಬಳಿ ಈಗಾಗಲೇ ಅಯ್ಯಪ್ಪ ಒಪ್ಪಿಕೊಂಡಿದ್ದಾರೆ. ಆದರೂ ಪೂಜಾ ಜೊತೆಗಿನ ಹುಡುಗಾಟವನ್ನು ಎಗ್ಗಿಲ್ಲದೆ ನಡೆಸುತ್ತಿದ್ದಾರೆ. ಅಯ್ಯಪ್ಪರೊಂದಿಗಿನ ಸಲಿಗೆಯೋ ಅಥವಾ ಪೂಜಾರ ಮುಗ್ಧತೆಯೋ ಗೊತ್ತಿಲ್ಲ, ಪೂಜಾ ಮಾತ್ರ ಈ ವಿಷಯವನ್ನು ಸೀರಿಯಸ್ಸಾಗಿ ತೆಗೆದುಕೊಂಡಿರುವಂತಿದೆ. ಆದರೆ ಚಂದನ್ ಮಾತ್ರ ನಿಮ್ ಗರ್ಲ್‍ಫ್ರೆಂಡ್ ವಿಚಾರ ಪೂಜಾಗೆ ಹೇಳ್ಬಿಡಿ ಎಂಬ ಕಿವಿಮಾತು ಹೇಳಿದ್ದಾರೆ.

ಮನೆಯವರು ಇಲ್ಲಿಯ ತನಕ ಅನೇಕ ಸಂದರ್ಭಗಳಲ್ಲಿ ಪೂಜಾ ಮತ್ತು ಅಯ್ಯಪ್ಪರನ್ನು ರೇಗಿಸುತ್ತಾ ತಮಾಷೆ ಮಾಡಿದ್ದಾರೆ. ಈ ತಮಾಷೆ, ಅಯ್ಯಪ್ಪರ ಚೇಷ್ಟೆ ಎಲ್ಲವೂ ಪೂಜಾರಿಗೆ ಅರಿವಾದಂತಿಲ್ಲ. ನಾನು ಪೂಜಾಳನ್ನು ಅವಾಯ್ಡ್ ಮಾಡ್ತೀನಿ, ಮುಂದೆ ನನಗೂ ಅವಳಿಗೂ ಜಗಳ ಆದರೂ ಆಗಬಹುದು ಎಂದು ಅಯ್ಯಪ್ಪ ಈಗಾಗಲೇ ಮುನ್ನೆಚ್ಚರಿಕೆ ಕೊಟ್ಟಿದ್ದಾರೆ.

ಬಿಗ್‍ಬಾಸ್ ಪ್ರಿಯರು ಈ ಜೋಡಿಯ ಹುಡುಗಾಟವನ್ನು ನೋಡಿ ಮನೋರಂಜನೆ ಪಡೆಯುತ್ತಿದ್ದಾರೆ. ಆದರೆ ಅಯ್ಯಪ್ಪ ಮಾತ್ರ ಈ ವಿಷಯದಲ್ಲಿ ಸೇಫ್ ಆಗಲು ಪ್ರಯತ್ನಿಸುತ್ತಿರುವುದನ್ನು ಅವರೇ ಒಪ್ಪಿಕೊಂಡಿದ್ದಾರೆ. ಮುಂದೆ ಈ ಲವ್ವಿ ಡವ್ವಿ ಯಾವ ಸ್ವರೂಪ ಪಡೆಯುತ್ತದೆಯೋ ಕಾದು ನೋಡಬೇಕು.

Write A Comment