ಕರ್ನಾಟಕ

ಕನ್ನಗಳ್ಳರ ಸೆರೆ : 80 ಲಕ್ಷ ಬೆಲೆಯ ಆಭರಣ ಹಣ ವಶ

Pinterest LinkedIn Tumblr

kalla

ಬೆಂಗಳೂರು, ಡಿ.16-ರಾತ್ರಿ ವೇಳೆ ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ವಿವೇಕನಗರ ಪೊಲೀಸರು ಬಂಧಿಸಿ 80 ಲಕ್ಷ ಬೆಲೆಯ ಚಿನ್ನ- ಬೆಳ್ಳಿ ಆಭರಣ ಹಾಗೂ ನಗದನ್ನು ವಶಪಡಿಸಿ ಕೊಂಡಿದ್ದಾರೆ. ಸೇವಾ ನಗರದ ನಾಗಣ್ಣನ ಪಾಳ್ಯ ನಿವಾಸಿ ಚಂದರ್ (50) ಬಂಧಿತ ಆರೋಪಿಯಾಗಿದ್ದು, ಈತನ ಬಂಧನದಿಂದ ಕೋರಮಂಗಲ ವ್ಯಾಪ್ತಿಯ 7 ಪ್ರಕರಣ, ಅಶೋಕನಗರ 5 ಪ್ರಕರಣ, ವೈಯಾಲಿಕಾವಲ್ 7 ಪ್ರಕರಣ, ಶೇಷಾದ್ರಿಪುರಂ ಠಾಣೆ ವ್ಯಾಪ್ತಿಯ 2 ಪ್ರಕರಣ ಸೇರಿದಂತೆ ಒಟ್ಟು 32 ರಾತ್ರಿ ಮತ್ತು ಹಗಲು ವೇಳೆ ಮನೆ ಕನ್ನಗಳವು ಮತ್ತು ಮನೆ ಕಳವು ಪ್ರಕರಣ ಪತ್ತೆಯಾಗಿದೆ.

ಈ ಎಲ್ಲಾ ಪ್ರಕರಣಗಳಿಂದ ಒಟ್ಟು 2 ಕೆಜಿ 317 ಗ್ರಾಂ ತೂಕದ ಚಿನ್ನದ ಆಭರಣ, 3 ಕೆಜಿ 750 ಗ್ರಾಂ ತೂಕದ ಬೆಳ್ಳಿ ಸಾಮಾನುಗಳು  ಒಟ್ಟು 60 ಲಕ್ಷ ರೂ. ಬೆಲೆಯ  ಚಿನ್ನಾಭರಣಗಳನ್ನು ಹಾಗೂ 5 ಲಕ್ಷ ರೂ. ನಗದು, 2 ಕಾರು, 1 ಆಟೋ ರಿಕ್ಷಾ, 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 80 ಲಕ್ಷ ಬೆಲೆಬಾಳುವ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Write A Comment